ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು ನಮಗೆಲ್ಲರಿಗೂ ಗೊತ್ತು. ಒಬ್ಬ ವ್ಯಕ್ತಿ ಸ್ವೀಗ್ಗಿ ಬ್ಯಾಗ್ ಅಕೊಂಡು ಮಳೆಯ ನಡುವೆ ಕುದುರೆ ಏರಿ ಆಹಾರವನ್ನು ಪೂರೈಸುತ್ತಿದ್ದ. ಈ ವ್ಯಕ್ತಿಯನ್ನು ಹುಡುಕಲು ಸ್ವಿಗ್ಗಿ ಸಂಸ್ಥೆ ಬಹಳಷ್ಟು ಶ್ರಮಿಸಿದರು ಯಾವುದೇ ಪ್ರಯೋಜನ ವಾಗಲಿಲ್ಲ. ನಂತರ ಇವನನ್ನು ಹುಡುಕಿಕೊಟ್ಟರೆ ಬಹುಮಾನ ನೀಡುತ್ತೇವೆ ಎಂದು ತಿಳಿಸಿದರು. ಇದೀಗ ಈ ವ್ಯಕ್ತಿ ಸಿಕ್ಕಿದ್ದು, ಸ್ವಿಗ್ಗಿ ಸಂಸ್ಥೆಗೆ ಅಚ್ಚರಿ ಯಾಗಿದೆ.
ಮುಂಬೈ ನಗರದಲ್ಲಿ ಮಳೆ ನಡುವೆಯೂ ಸ್ವಿಗ್ಗಿ ಡೆಲಿವರಿ ಹುಡುಗ ಕುದುರೆ ಏರಿ ತನ್ನ ಗ್ರಾಹಕರಿಗೆ ಆಹಾರವನ್ನು ಪೂರೈಸುತ್ತಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸ್ವಿಗ್ಗಿ ಸಂಸ್ಥೆ ಈ ಯುವಕನನ್ನು ಹುಡುಕಿದರೆ ಅವರಿಗೆ 5000 ರೂ. ಬಹುಮಾನ ನೀಡುವುದಾಗಿ ಘೋಷಿಸಿತು. ಇದೀಗ ಈ ವ್ಯಕ್ತಿ ಸಿಕ್ಕಿದ್ದು, ಈತ ಸ್ವಿಗ್ಗಿ ಡೆಲಿವರಿ ಹುಡುಗ ಅಲ್ಲಾ ಎಂದು ಸ್ವಿಗ್ಗಿ ಸಂಸ್ಥೆ ಟ್ವೀಟ್ ಮೂಲಕ ಅಧಿಕೃತವಾಗಿ ತಿಳಿಸಿದೆ.
okay enough horsin’ around 🐴 pic.twitter.com/AMG6AFZ0ai
— Swiggy (@Swiggy) July 9, 2022
ಕುದುರೆ ಹಾಗೂ ಯುವಕರಿಬ್ಬರು ಪತ್ತೆ ಯಾಗಿದ್ದು ಕುದುರೆಯಲ್ಲಿದ್ದ ಯುವಕನ ಹೆಸರು ಸುಶಾಂತ್(17). ಆದರೆ ಈತ ಸ್ವಿಗ್ಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿಲ್ಲ. ಈತನಿಗೆ ವಿಚಿತ್ರ ಕಾಯಿಲೆಯಿದ್ದು ಯಾವುದಾದರೂ ವಸ್ತುವನ್ನು ತೆಗೆದುಕೊಂಡರೆ ಅದನ್ನು ವಾಪಸ್ ಕೊಡುವುದನ್ನು ಮರೆತು ಬಿಡುತ್ತಾನೆ. ಇದೇ ರೀತಿಯೇ ಸ್ವಿಗ್ಗಿ ಬ್ಯಾಗ್‍ನ್ನು ತೆಗೆದುಕೊಂಡಿದ್ದು ಆದರೆ ಅದನ್ನು ಮರೆತಿದ್ದಾನೆ ಎಂದು ಟ್ವೀಟ್ ಮೂಲಕ ತಿಳಿಸಿದರು.
ಸುಶಾಂತ್ ಮದುವೆ ಕಾರ್ಯಕ್ರಮಗಳಿಗೆ ಕುದುರೆಯನ್ನು ಕಳುಹಿಸುವ ಏರ್ಪಾಟು ಮಾಡುವವನಾಗಿದ್ದಾನೆ. ಹಾಗೆಯೇ ಆ ಸ್ವಿಗ್ಗಿ ಬ್ಯಾಗ್‍ನಲ್ಲಿ ತಿಂಡಿಯ ಬದಲಿಗೆ ಮದುವೆ ಮೆರವಣಿಗೆಗಳಲ್ಲಿ ಕುದುರೆಗಳ ಮೇಲೆ ಹಾಕುವ ಕಸೂತಿ ಬಟ್ಟೆ ಹಾಗೂ ಪರಿಕರಗಳನ್ನು ಇಟ್ಟುಕೊಂಡು ಹೋಗುತ್ತಿದ್ದ ಎಂದು ಕಂಪನಿ ತಿಳಿಸಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
