ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್‌ಗೆ ತಣ್ಣಗಾಗಿರುವ ಚಹಾ ಹಾಗೂ ಕಳಪೆ ಗುಣಮಟ್ಟದ ಉಪಹಾರ ನೀಡಿದ ಘಟನೆ ಖಜರಾಹೋ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಪರಿಣಾಮ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು 3 ದಿನದಲ್ಲಿ ಉತ್ತರಿಸಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸೂಚಿಸಲಾಗಿದೆ. ಆದರೆ ಈ ಶೋಕಾಸ್ ನೋಟಿಸ್‌ಗೆ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ನೋಟಿಸ್ ಹಿಂಪಡೆಯಲಾಗಿದೆ.
ಛತ್ತೀರ್‍ಪುರ ಜಿಲ್ಲೆಯ ಖಜುರಾಹೊಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಿರಿಯ ಅಧಿಕಾರಿಯೊಬ್ಬರು ಕಳಪೆ ಟೀ ನೀಡಿದ್ದರು. ಈ ಹಿನ್ನೆಲೆಯಲ್ಲಿ ಚತ್ತರ್‌ಪುರ, ರಾಜನಗರ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಡಿಪಿ ದ್ವಿವೇದಿ ಅವರು, ವಿಐಪಿ ಶಿಷ್ಟಾಚಾರ ಉಲ್ಲಂಘಿಸಿದ್ದಕ್ಕೆ ಕಿರಿಯ ಅಧಿಕಾರಿ ರಾಕೇಶ್ ಕನೌಹಾ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.
ನೋಟಿಸ್ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಬಳಿಕ ಛತಾರ್ಪುರ ಜಿಲ್ಲಾಧಿಕಾರಿ ಸಂದೀಪ್ ಜಿಆರ್ ಅವರು ದ್ವಿವೇದಿ ಅವರು ನೀಡಿದ್ದ ನೋಟಿಸ್ ಅನ್ನು ರದ್ದುಗೊಳಿಸಿದ್ದಾರೆ. ಕನ್ಹುವಾ ಅವರು ಆಯೋಜಿಸಿದ್ದ ಚಹಾ ಮತ್ತು ಉಪಾಹಾರವನ್ನು ಸಿಎಂ ಚೌಹಾಣ್ ಅವರಿಗೆ ನೀಡಿರಲಿಲ್ಲ. ಅವರು ವಿಮಾನ ನಿಲ್ದಾಣದಲ್ಲಿ ತಂಗಿರಲಿಲ್ಲ. ಬದಲಾಗಿ ಏರ್‌ಸ್ಟ್ರಿಪ್‌ನಲ್ಲಿ ವಿಮಾನ ಬದಲಾವಣೆ ಮಾಡಿದ್ದರಷ್ಟೇ ಎಂದು ದ್ವಿವೇದಿ ಸ್ಪಷ್ಟನೆ ನೀಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
