ದಿ ಗ್ರೇಟ್ ಖಾಲಿ ಎಂದೇ ಜನಪ್ರಿಯರಾಗಿರುವ WWE ಚಾಂಪಿಯನ್ ಖಾಲಿ ತಾಳ್ಮೆ ಕಳೆದುಕೊಂಡ ಘಟನೆ ನಡೆದಿದೆ. ಖಾಲಿ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಪಾಣಿಪತ್-ಜಲಂಧರ್ ರಾಷ್ಟ್ರೀಯ ಹೆದ್ದಾರಿಯ ಲಾಧೋವಲ್‌ನಲ್ಲಿ ಐಡಿ ಕಾರ್ಡ್ ತೋರಿಸುವಂತೆ ಕೇಳಿದಾಗ ತಮ್ಮ ಸಹೋದ್ಯೋಗಿಯೊಬ್ಬರಿಗೆ ಕುಸ್ತಿಪಟು ಕಪಾಳಮೋಕ್ಷ ಮಾಡಿದ್ದಾರೆ ಎಂದು ಟೋಲ್ ಪ್ಲಾಜಾ ಸಿಬ್ಬಂದಿ ಆರೋಪಿಸಿದ್ದಾರೆ. ಆದರೆ ಆರೋಪವನ್ನು ಮಾಜಿ WWE ಕುಸ್ತಿಪಟು ನಿರಾಕರಿಸಿದ್ದು, ಟೋಲ್ ಪ್ಲಾಜಾ ಸಿಬ್ಬಂದಿ ತಮ್ಮ ಜತೆ ಅನುಚಿತವಾಗಿ ವರ್ತಿಸಿದರು ಎಂದು ಪ್ರತ್ಯಾರೋಪ ಮಾಡಿದ್ದಾರೆ.
Khali slapped toll plaza employee
— Pranjal Mishra 🇮🇳 (@PranjalmishraIN) July 12, 2022
ಲೋದೋವಾಲ್ ಟೋಲ್ ಪ್ಲಾಝಾದ ಸಿಬ್ಬಂದಿ ಜತೆ ರಾಣಾ ವಾಗ್ವಾದ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸೋಮವಾರ ಈ ಘಟನೆ ನಡೆದಿದೆ ಎನ್ನಲಾಗಿದೆ. ಆದರೆ ಮಾಜಿ WWE ಸೂಪರ್ ಸ್ಟಾರ್, ಯಾರಿಗೂ ಹೊಡೆಯುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತಿಲ್ಲ.
ಕರ್ನಲ್‌ನಿಂದ ಜಲಂಧರ್‌ಗೆ ತೆರಳುತ್ತಿದ್ದ ಖಾಲಿ ಲಾಡೋವಲ್ ಟೋಲ್ ಪ್ಲಾಜಾ ಪ್ರವೇಶಿಸುತ್ತಿದ್ದಂತೆ ಸಿಬ್ಬಂದಿಗಳು ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಆದರೆ ಇದಕ್ಕೆ ಖಾಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಿಬ್ಬಂದಿಗಳು, ಖಾಲಿ ಪ್ರಯಾಣಕ್ಕೆ ಟೋಲ್ ಕಾರಣಗಳನ್ನು ನೀಡಿ ಅಡ್ಡಿಪಡಿಸಿದ್ದಾರೆ ಎಂದು ಸ್ವತಃ ಖಾಲಿ ಆರೋಪಿಸಿದ್ದಾರೆ. ತನ್ನ ಬಳಿ ಐಡಿ ಕಾರ್ಡ್ ಸೇರಿದಂತೆ ಇತರ ದಾಖಲೆ ಸಲ್ಲಿಸುವಂತೆ ಸೂಚಿಸಿದ್ದಾರೆ. ಇಷ್ಟೇ ಅಲ್ಲ ಟೋಲ್ ಸಿಬ್ಬಂದಿಗಳು ತನ್ನ ಜೊತೆ ಅಗೌರವವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
