ಇತ್ತೀಚಿಗೆ ಬೆಲೆ ಏರಿಕೆ ಇಂದ ಕಂಗೆಟ್ಟಿದ್ದ ಜನಸಾಮಾನ್ಯರಿಗೆ ಇದೀಗ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಇಂದಿನಿಂದ(ಜುಲೈ 18) ನಿತ್ಯದ ಅಗತ್ಯ ವಸ್ತುಗಳ ಮೇಲೆ ಸರ್ಕಾರ ಗೂಡ್ಸ್ ಆಂಡ್ ಸರ್ವೀಸ್ ಟ್ಯಾಕ್ಸ್ ಹೇರಿದ್ದು, ಇದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.
ಬುಧವಾರ ಚಂಡೀಗಢದಲ್ಲಿ ನಡೆದ ಎರಡು ದಿನಗಳ 47ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಂಡ ಶಿಫಾರಸುಗಳ ನಂತರ, ಹಲವಾರು ವಸ್ತುಗಳಿಗೆ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಹೆಚ್ಚಿಸಲಾಗಿದೆ.
ಪ್ರಿಂಟಿಂಗ್/ರೈಟಿಂಗ್ ಅಥವಾ ಡ್ರಾಯಿಂಗ್ ಇಂಕ್, ಎಲ್‌ಇಡಿ ಲ್ಯಾಂಪ್‌ಗಳು, ಲೈಟ್‌ಗಳು ಮತ್ತು ಅವುಗಳ ಮೆಟಲ್ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್‌ಗಳ ಮೇಲಿನ ಜಿಎಸ್‌ಟಿಯನ್ನು ಶೇಕಡಾ 12 ರಿಂದ ಶೇಕಡಾ 18 ಕ್ಕೆ ಹೆಚ್ಚಿಸಲಾಗಿದೆ. ಸೋಲಾರ್ ವಾಟರ್ ಹೀಟರ್ ಮತ್ತು ಸಿಸ್ಟಮ್‌ಗಳ ಮೇಲಿನ ಜಿಎಸ್‌ಟಿ ದರವನ್ನು ಶೇಕಡಾ 5 ರಿಂದ ಶೇಕಡಾ 12 ಕ್ಕೆ ಹೆಚ್ಚಿಸಲಾಗಿದೆ.
ಇದಲ್ಲದೆ ಈ ಕೆಳಗಿನ ವಸ್ತುಗಳಿಗೆ ಇಂದಿನಿಂದ ಜಿಎಸ್‌ಟಿ ದರ ಏರಿಕೆಯಾಗಲಿದೆ:
ಶಾಯಿಯನ್ನು ಮುದ್ರಿಸುವುದು, ಬರೆಯುವುದು ಅಥವಾ ಚಿತ್ರಿಸುವುದು – 18%
ಕತ್ತರಿಸುವ ಬ್ಲೇಡ್‌ಗಳನ್ನು ಹೊಂದಿರುವ ಚಾಕುಗಳು, ಪೇಪರ್ ಚಾಕುಗಳು, ಪೆನ್ಸಿಲ್ ಶಾರ್ಪನರ್‌ಗಳು ಮತ್ತು ಬ್ಲೇಡ್‌ಗಳು, ಸ್ಪೂನ್‌ಗಳು, ಫೋರ್ಕ್ಸ್, ಇತ್ಯಾದಿ-18%
ಆಳವಾದ ಕೊಳವೆ ಬಾವಿ ಟರ್ಬೈನ್ ಪಂಪ್‌ಗಳು, ಸಬ್‌ಮರ್ಸಿಬಲ್ ಪಂಪ್‌ಗಳಂತಹ ನೀರಿನ ನಿರ್ವಹಣೆಗಾಗಿ ಪ್ರಾಥಮಿಕವಾಗಿ ವಿನ್ಯಾಸಗೊಳಿಸಲಾದ ವಿದ್ಯುತ್ ಚಾಲಿತ ಪಂಪ್‌ಗಳು; ಬೈಸಿಕಲ್ ಪಂಪ್‌ಗಳು-18%
ಪ್ಯಾಕೆಟ್ ಹಾಲು, ಮೊಸರು, ಪ್ಯಾಕೆಟ್ ಲಸ್ಸಿ, ಮಜ್ಜಿಗೆ, ಉಪ್ಪಿನಕಾಯಿ, ತರಕಾರಿ, ಪ್ಯಾಕ್ ಮಾಡಿದ ಹಪ್ಪಳ, ಪ್ಯಾಕ್ ಮಾಡಿದ ಜೇನುತುಪ್ಪ, ಪ್ಯಾಕ್ ಮಾಡಿದ ಬೆಲ್ಲ, ಪ್ಯಾಕ್ ಮಾಡಿದ ಗೋಧಿ ಹಿಟ್ಟು, ಪ್ಯಾಕ್ ಮಾಡಿದ ಅಕ್ಕಿ, ಸಾವಯವ ಆಹಾರ, ಕಾಂಪೋಸ್ಟ್ ಗೊಬ್ಬರ, ಮೀನು ಇವಿಷ್ಟಕ್ಕೆ ಶೇ.5 ರಷ್ಟು ಜಿಎಸ್‌ಟಿ ವಿಧಿಸಲಾಗಿದೆ.
ದಿನಕ್ಕೆ 1000 ರೂ. ಒಳಗೆ ಇರುವ ಹೋಟೆಲ್ ರೂಮ್ ಗಳಿಗೆ 12%, ದಿನಕ್ಕೆ 5000 ರೂ. ಇರುವ ಹೋಟೆಲ್ ರೂಮ್ ಗಳಿಗೆ 5%, ಸೋಲಾರ್ ವಾಟರ್ ಹೀಟರ್ ಮತ್ತು ಸಿಸ್ಟಮ್-12% ಹೀಗೆ ಹತ್ತು ಹಲವಾರು ವಸ್ತುಗಳ ಮೇಲೆ GST ದರವನ್ನು ಹೆಚ್ಚಿಸಲಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
