ಜುಲೈ 18, 2022 ಸೋಮವಾರ
ವರ್ಷ : 1944, ಶೋಭಾಕೃತ
ತಿಂಗಳು : ಆಷಾಢ, ಪಕ್ಷ : ಕೃಷ್ಣಪಕ್ಷ
Panchangam
ತಿಥಿ : ಪಂಚಮೀ : Jul 17 10:49 am – Jul 18 08:55 am; ಷಷ್ಠೀ : Jul 18 08:55 am – Jul 19 07:50 am
ನಕ್ಷತ್ರ : ಪೂರ್ವಾ ಭಾದ್ರ: Jul 17 01:25 pm – Jul 18 12:24 pm; ಉತ್ತರಾ ಭಾದ್ರ: Jul 18 12:24 pm – Jul 19 12:12 pm
ಯೋಗ : ಶೋಭನ: Jul 17 05:49 pm – Jul 18 03:26 pm; ಅತಿಗಂಡ: Jul 18 03:26 pm – Jul 19 01:43 pm
ಕರಣ : ತೈತುಲ: Jul 17 09:46 pm – Jul 18 08:55 am; ಗರಿಜ: Jul 18 08:55 am – Jul 18 08:16 pm; ವಾಣಿಜ: Jul 18 08:16 pm – Jul 19 07:50 am
Time to be Avoided
ರಾಹುಕಾಲ : 7:40 AM to 9:15 AM
ಯಮಗಂಡ : 10:50 AM to 12:25 PM
ದುರ್ಮುಹುರ್ತ : 12:51 PM to 01:41 PM, 03:23 PM to 04:13 PM
ವಿಷ : 09:55 PM to 11:30 PM
ಗುಳಿಕ : 2:00 PM to 3:36 PM
Good Time to be Used
ಅಮೃತಕಾಲ : None
ಅಭಿಜಿತ್ : 12:00 PM to 12:51 PM
Other Data
ಸೂರ್ಯೋದಯ : 6:05 AM
ಸುರ್ಯಾಸ್ತಮಯ : 6:45 PM
ಮೇಷ (Mesha)
ಕಾರ್ಯರಂಗದಲ್ಲಿ ಕಾರ್ಯಒತ್ತಡಗಳು ತೋರಿ ಬರುವುದ ರಿಂದ ಸಾವಧಾನವಾಗಿ ಮುಂದುವರಿಯಿರಿ. ವ್ಯಾಪಾರ, ವ್ಯವಹಾರಗಳಲ್ಲಿ ಲಾಭವಿಲ್ಲದಿದ್ದರೂ ನಷ್ಟವಾಗದು. ವಿದ್ಯಾರ್ಥಿಗಳಿಗೆ ಶುಭವಿದೆ.
ವೃಷಭ (Vrushabh)
ನಿರುದ್ಯೋಗಿಗಳು ಹಲವಾರು ಅವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ. ಅಷ್ಟಮದ ಶನಿ ಆಗಾಗ ಪ್ರತಿಕೂಲತೆಯನ್ನು ತೋರಿಯಾನು. ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆದಾರು.
ಮಿಥುನ (Mithuna)
ಸಾಂಸಾರಿಕವಾಗಿ ಹೆಂಡತಿಯ ಸೂಕ್ತ ಸಲಹೆಗಳು ಮುನ್ನಡೆಗೆ ಸಾಧಕವಾದಾವು. ನಿರುದ್ಯೋಗಿಗಳು ತಾತ್ಕಾಲಿಕ ಅವಕಾಶಗಳನ್ನು ಪಡೆಯಲಿದ್ದಾವೆ. ಹಿರಿಯ ಅಧಿಕಾರಿಗಳಿಗೆ ಮುಂಭಡ್ತಿ ವಿಳಂಬ.
ಕರ್ಕ (Karka)
ಸಾಂಸಾರಿಕವಾಗಿ ಹಿರಿಯರೊಡನೆ ದೇವತಾದರ್ಶನ ಭಾಗ್ಯವಿದೆ. ಆರ್ಥಿಕವಾಗಿ ಹೂಡಿಕೆಗಳು ಲಾಭಕರವಾಗಲಿವೆ. ಸದುಪಯೋಗಿಸಿಕೊಳ್ಳಿರಿ. ಸರಕಾರಿ ಅಧಿಕಾರಿ ವರ್ಗಕ್ಕೆ ಬದಲಾವಣೆ ಇದೆ.
ಸಿಂಹ (Simha)
ಆಗಾಗ ಆಡೆತಡೆಗಳಿಂದಲೇ ಕಾರ್ಯಸಾಧನೆಗೆ ಆನುಕೂಲವಾಗಲಿದೆ. ಮನೆಯಲ್ಲಿ ಮೂಲ ಕಾರ್ಯಗಳು ನಡೆದಾವು. ರಾಜಕೀಯದವರಿಗೆ ಅನಿರೀಕ್ಷಿತ ಅಪಮಾನ, ಅವಮಾನ ಪ್ರಸಂಗ ಬಂದೀತು.
ಕನ್ಯಾರಾಶಿ (Kanya)
ಸಾಂಸಾರಿಕವಾಗಿ ದಾಯಾದಿಗಳ ವಂಚನೆ ಬಯಲಾದೀತು. ಸದ್ಯದಲ್ಲೇ ಶುಭ ಮಂಗಲಕಾರ್ಯ ಚಿಂತನೆ ಕಾರ್ಯಗತವಾಗಲಿದೆ. ಶಿಕ್ಷಕ ವರ್ಗದವರಿಗೆ ಮುಂಭಡ್ತಿ ಯೋಗವಿದೆ. ದಿನಾಂತ್ಯ ಶುಭ.
ತುಲಾ (Tula)
ವೃತ್ತಿರಂಗದಲ್ಲಿ ಅನಿರೀಕ್ಷಿತ ಆಭಿವೃದ್ಧಿಯು ಅಚ್ಚರಿ ತಂದೀತು. ಧಾರ್ಮಿಕ ಕೆಲಸಕಾರ್ಯಗಳಿಗೆ ಚಾಲನೆ ದೊರಕಲಿದೆ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು.
ವೃಶ್ಚಿಕ (Vrushchika)
ಶನಿಯ ಸಪ್ತಾಚಾರ ಆಗಾಗ ಮಾಡಿಸಿಕೊಳ್ಳಲಿದೆ. ಆದರೂ ದೇವತಾನುಗ್ರಹ ಪರಿಪೂರ್ಣ ಇರುವುದರಿಂದ ಯಾವುದೇ ರೀತಿಯ ಕಷ್ಟಸುಖಗಳನ್ನು ಅನುಭವಿಸಬಹುದಾಗಿದೆ. ಧನಸಂಗ್ರಹಕ್ಕೆ ಮನಸ್ಸು ಮಾಡಿರಿ.
ಧನು ರಾಶಿ (Dhanu)
ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಯು ತೋರಿ ಬಂದಿದ್ದರೂ ನಿಮ್ಮ ಪ್ರಯತ್ನಬಲ, ಪ್ರಯತ್ನಶೀಲತೆ ಪುನಃ ಮುನ್ನಡೆಗೆ ಸಾಧಕವಾಗಲಿದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಗಮನ ಹರಿಸಿರಿ.
ಮಕರ (Makara)
ಆರ್ಥಿಕವಾಗಿ ಆಗಾಗ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ವೈಯಕ್ತಿಕ ಆರೋಗ್ಯದ ಬಗ್ಗೆ , ಸಂಚಾರದ ಬಗ್ಗೆ ಜಾಗ್ರತೆ ವಹಿಸಿರಿ. ಕಾರ್ಯರಂಗದಲ್ಲಿ ಅನೇಕ ಕಷ್ಟನಷ್ಟಗಳಿವೆ.
ಕುಂಭರಾಶಿ (Kumbha)
ಆರ್ಥಿಕವಾಗಿ ನಾನಾ ರೀತಿಯ ಕಷ್ಟನಷ್ಟಗಳನ್ನು ಅನುಭವಿಸಬೇಕಾದೀತು. ದೂರ ಸಂಚಾರದಲ್ಲಿ ಕಾರ್ಯಸಿದ್ಧಿಯಾದರೂ ಪ್ರಯತ್ನಬಲಕ್ಕೆ ಒತ್ತು ನೀಡಬೇಕಾದೀತು. ಕಾರ್ಮಿಕ ವರ್ಗಕ್ಕೆ ಲಾಭವಿದೆ
ಮೀನರಾಶಿ (Meena)
ಹಿರಿಯ ಅಧಿಕಾರಿ ವರ್ಗಕ್ಕೆ ಮುಂಭಡ್ತಿ ಯೋಗವಿದೆ. ಮನೆಯಲ್ಲಿ ಶುಭಮಂಗಲ ಕಾರ್ಯಗಳ ಚಂತನೆ ಪ್ರಕಟಗೊಂಡೀತು. ಸಾಂಸಾರಿಕವಾಗಿ ಆಲಂಕಾರಿಕ ವಸ್ತುಗಳ ಖರೀದಿ ಇದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
