ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನಸಾಮನ್ಯರಿಗೆ GST ದರ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ಶಾಕ್ ನೀಡಿತ್ತು, ಇದೀಗ ಇದು ಸಾಲದೇ ಕರ್ನಾಟಕ ಜನತೆಗೆ ಮತ್ತೊಂದು ಶಾಕ್ ನೀಡಲಾಗಿದ್ದು, ಇಂದಿನಿಂದ ಕರ್ನಾಟಕದ ನಂದಿನಿ ಉತ್ಪನ್ನಗಳ ಬೆಲೆಯಲ್ಲಿ ಬಾರಿ ಹೆಚ್ಚಳ ವಾಗಲಿದೆ.
10 ರೂಪಾಯಿಯಿದ್ದ 200 ml ನಂದಿನಿ ಮೊಸರಿನ ಬೆಲೆ 12 ರೂ.ಗೆ ಏರಿಸಲಾಗಿದೆ.22 ರೂಪಾಯಿಯಿದ್ದ ಅರ್ಧ ಲೀಟರ್ ಮೊಸರಿನ ಪ್ಯಾಕೆಟ್ ಇದೀಗ 24 ರೂ. ಆಗಿದೆ. 1 ಲೀಟರ್ ಮೊಸರು ಪ್ಯಾಕೇಟ್ 3 ರೂ. ಏರಿಕೆಯೊಂದಿಗೆ 46 ರೂ. ಆಗಿದೆ. ಇನ್ನು 200 ml ಮಜ್ಜಿಗೆ ಪ್ಯಾಕೆಟ್ 7 ರಿಂದ 8 ರೂ. ಆಗಿದೆ. ಟೆಟ್ರಾ ಪ್ಯಾಕ್ 10 ರಿಂದ 11 ರೂ. ಹಾಗೂ ಪೆಟ್ ಬಾಟಲ್ ಬೆಲೆ 12 ರಿಂದ 13 ರೂ. ಆಗಿದೆ. ಇನ್ನು 200 ml ನಂದಿನಿ ಲಸ್ಸಿ 1 ರೂಪಾಯಿ ಏರಿಸಿ ಹೊಸ ದರಗಳ ಪಟ್ಟಿಯನ್ನು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಹೊರಡಿಸಿದೆ.
ಇದೀಗ ಇಷ್ಟಕ್ಕೆ ಸುಮ್ಮನಾಗದ ಕೆಎಂಎಫ್ ಹಾಲಿನ ದರವನ್ನು ಹೆಚ್ಚಿಸುವ ಕುರಿತು ಪ್ರಸ್ತಾವನೆ ಸಲ್ಲಿಸಿದೆ. ಒಂದು ವೇಳೆ ಹಾಲಿನ ದರ ಕೂಡ ಹೆಚ್ಚಳವಾದರೆ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಬೀಳುವುದು ಪಕ್ಕಾ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
