ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿ ತಿಂಗಳುಗಳೇ ಕಳೆದರು ಅವರ ನೆನಪು ಮಾತ್ರ ಅಭಿಮಾನಿಗಳ ಮನಸಲ್ಲಿ ಅಚ್ಚೆಯಾಗಿ ಉಳಿದಿದೆ. ಈಗಲೂ ಅಪ್ಪು ಹೆಸರಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಿದೆ. ಇವೆಲ್ಲದರ ಬೆನ್ನಲ್ಲೇ ಇದೀಗ ಅಪ್ಪು ಅಭಿಮಾನಿಗಳು ಟ್ವಿಟ್ಟರ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ
ಹಲವಾರು ಸೆಲಬ್ರಿಟಿ ಗಳು ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುತ್ತಾರೆ. ಅದರಲ್ಲೂ ಪ್ರತಿಯೊಬ್ಬ ಸೆಲೆಬ್ರಿಟಿ ಕೂಡ ಟ್ವಿಟ್ಟರ್ ಬಳಸುತ್ತಾರೆ. ಈಗಾಗಿ ಸೆಲೆಬ್ರಿಟಿ ಹೆಸರಲ್ಲಿ ಜನರು ನಕಲು ಖಾತೆ ತೆರೆಯಬಹುದು ಎಂಬ ಕಾರಣಕ್ಕಾಗಿ ಇವರ ಹೆಸರು ಪಕ್ಕ ಬ್ಲೂ ಟಿಕ್ ಇರುತ್ತದೆ. ಆದರೆ ಇದೀಗ ಪುನೀತ್ ರಾಜ್ ಕುಮಾರ್ ಅವರ ಹೆಸರಿನ ಪಕ್ಕ ಇರುವ ಈ ಬ್ಲೂ ಟಿಕ್ ಅನ್ನು ತೆಗೆದುಹಾಕಿದ್ದು, ಟ್ವಿಟ್ಟರ್ ಸಂಸ್ಥೆ ವಿರುದ್ಧ ಅಪ್ಪು ಅಭಿಮಾನಿಗಳು ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.
Thank you ❤️@verified @Twitter @TwitterIndia for the Verification @PuneethRajkumar Appu Anna is alive in People Heart & this is one of the example😍 Thank you Powerfull Fans of The Powerfull Man💪💪💪 love u Puneethians🤗🤗🤗 This is a Good note to start the week 🙌🙌 pic.twitter.com/OdMCPBGiKE
— Santhosh Ananddram (@SanthoshAnand15) July 18, 2022
ಆದರೆ ಇದೀಗ ಅಪ್ಪು ಅಭಿಮಾನಿಗಳಿಗೆ ಒಂದು ಸಂತಸದ ಸುದ್ದಿ ಇದೆ. ಅದೇನೆಂದರೆ ಅಪ್ಪು ಹೆಸರಿನ ಮುಂದೆ ಇಂದ ನೀಲಿ ಟಿಕ್ ಅನ್ನು ಟ್ವಿಟ್ಟರ್ ಸಂಸ್ಥೆ ಮತ್ತೆ ನೀಡಲಾಗಿದೆ. ಇದರಿಂದ ಅಪ್ಪು ಅಭಿಮಾನಿಗಳಿಗೆ ಬಹಳಷ್ಟು ಸಂತೋಷ ವಾಗಿದ್ದು, ಅಭಿಮಾನಿಗಳಿಂದ ಯಾವುದೇ ಅಸಾಧ್ಯವಲ್ಲ ಎಂಬುದು ಮತ್ತೆ ಸಾಬೀತಾಗಿದೆ.
ಇದೀಗ ಅಪ್ಪು ಹೆಸರಿನ ಪಕ್ಕ ಬ್ಲೂ ಟಿಕ್ ಮರಳಿರುವ ಕುರಿತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ ಟ್ವೀಟ್ ಮಾಡಿದ್ದು “ಅಪ್ಪು ಅಣ್ಣ ಸದಾ ಅಭಿಮಾನಿಗಳ ಹೃದಯದಲ್ಲಿ ಇರುತ್ತಾರೆ ಎಂಬುದಕ್ಕೆ ಇದು ಉದಾಹರಣೆ, ಅಪ್ಪು ಅವರ ಅಭಿಮಾನಿಗಳಿಗೆ ಧನ್ಯವಾದಗಳನ್ನು” ತಿಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
