ಇತ್ತೀಚಿಗೆ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಮೇಲೆ GST ಹೇರಿತ್ತು. ಇದರ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿತ್ತು. ಇದರಿಂದ ಕೋಪಗೊಂಡ ಜನರು ಹಲವಾರು ಕಡೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಇದೀಗ ಜನರ ಕಷ್ಟವನ್ನು ಆಲಿಸಿದ ಕೇಂದ್ರ ಸರ್ಕಾರ ಸುಮಾರು 14 ವಸ್ತುಗಳ ಮೇಲೆ GST ಕಡಿತಗೊಳಿಸಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಹಣಕಾಸು ಸಚಿವ ನಿರ್ಮಲ ಸೀತಾರಾಮನ್ “ಗೋಧಿ, ಮೊಸರು, ಅಥವಾ ಲಸ್ಸಿ, ಅಕ್ಕಿ, ಓಟ್ಸ್, ಹಿಟ್ಟು, ತೊಗರಿಬೆಳೆ, ಮಂಡಕ್ಕಿ, ರವೆ, ಜೋಳ, ಸಣ್ಣ ಗೋಧಿಗಳ ಮೇಲಿನ ಜಿಎಸ್‍ಟಿ ವಿನಾಯಿತಿಯನ್ನು ನೀಡಲಾಗಿದೆ. ಆದರೆ ಇದಕ್ಕೆ ಕಲವೊಂದು ಷರತ್‍ನ್ನು ವಿಧಿಸಲಾಗದೆ. ಈ ಎಲ್ಲಾ ವಸ್ತುಗಳ ಮೇಲೆ ಲೇಬಲ್ ಇದ್ದರೇ ಅಥವಾ ಪ್ಯಾಕ್ ಮಾಡಿದರೆ ಜಿಎಸ್‍ಟಿ ವಿನಾಯಿತಿ ಅನ್ವಯಿಸುವುದಿಲ್ಲ” ಎಂದು ತಿಳಿಸಿದ್ದಾರೆ.
GST ದರ ಏರಿಕೆಯ ಕುರಿತು ಮಾತನಾಡಿದ ಇವರು “GST ವಿಧಿಸುವಾಗ ಸಭೆಯಲ್ಲಿ ಬಿಜೆಪಿ ಇತರ ರಾಜ್ಯಗಳಾದ ಪಂಜಾಬ್, ಛತ್ತೀಸ್‌ಗಢ, ರಾಜಸ್ಥಾನ, ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಸೇರಿದಂತೆ ಎಲ್ಲಾ ರಾಜ್ಯದ ಗಣ್ಯರಿದ್ದು, ಪ್ರತಿಯೊಬ್ಬರು ಸಮ್ಮತದಿಂದ ಒಪ್ಪಿಕೊಂಡಿದ್ದರು. ಜಿಎಸ್‌ಟಿ ಕೌನ್ಸಿಲ್‌ನ ಈ ನಿರ್ಧಾರವು ಪ್ರತಿಯೊಬ್ಬರ ಒಮ್ಮತದಿಂದ ಬಂದಿದೆ ಎಂದು ಹೇಳಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
