ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮತ್ತು ಕರ್ನಾಟಕದ ಭಾರತೀಯ ಕ್ರಿಕೆಟಿಗ ಕೆಎಲ್ ರಾಹುಲ್ ಬಹಳ ಸಮಯದಿಂದ ಒಟ್ಟಿಗೆ ಇದ್ದಾರೆ ಮತ್ತು ಅವರ ಮದುವೆಯ ಬಗ್ಗೆ ಬಹಳ ಸಮಯದಿಂದ ವದಂತಿಗಳು ಹರಿದಾಡುತಿತ್ತು. ಇನ್ನು ಮೂರು ತಿಂಗಳಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಊಹಾಪೋಹ ಕೆಲವೇ ದಿನಗಳ ಹಿಂದೆ ಕೇಳಿ ಬರುತಿತ್ತು. ಆದರೆ ಅಥಿಯಾ ಶೆಟ್ಟಿ ಮಾತ್ರ ಈ ಉಹಾಪೋಹವನ್ನು ತಳ್ಳಿಹಾಕಿದ್ದರು. ಆದರೆ ಇದೀಗ ಇವರಿಬ್ಬರ ಮದುವೆ ಕುರಿತು ಮತ್ತೊಂದು ಹೊರಬಿದ್ದಿದೆ.
ಆದರೆ ಇತ್ತೀಚಿಗೆ ಬಂದಿರುವ ಮಾಹಿತಿ ಪ್ರಕಾರ 2023 ರ ಮೊದಲ ತ್ರೈಮಾಸಿಕ ಅಂದರೆ ಜನವರಿ ಅಥವಾ ಫೆಬ್ರವರಿಯಲ್ಲಿ ಇವರ ಮದುವೆ ನಡೆಯುವ ಸಾಧ್ಯತೆಗಳಿವೆ. ಆದರೆ ದಿನಾಂಕ ಮತ್ತು ಸ್ಥಳವನ್ನು ಮಾತ್ರ ಕುಟುಂಬದವರು ಅಂತಿಮಗೊಳಿಸಿಲ್ಲ.
ಟೀಮ್ ಇಂಡಿಯಾ ಅಕ್ಟೋಬರ್ ನಲ್ಲಿ T20 ವಿಶ್ವಕಪ್ ಆಡಲಿದೆ. ಹೀಗಾಗಿ ರಾಹುಲ್ ಈ ಟೂರ್ನಿಯಲ್ಲಿ ಪ್ರಮುಖ ಪತ್ರ ವಹಿಸುತ್ತಾರೆ. ಈ ಟೂರ್ನಿ ಮುಗಿಯೋದು ನವೆಂಬರ್ ನಲ್ಲಿ. ಆದ್ದರಿಂದ ಜನವರಿ ಅಥವಾ ಫೆಬ್ರವರಿಯಲ್ಲಿ ಇವರಿಬ್ಬರ ವಿವಾಹ ನಡೆಯಬಹುದು.
ಇವರಿಬ್ಬರ ಜೋಡಿ ಸುಮಾರು 3 ವರ್ಷಗಳಿಂದ ಒಟ್ಟಿಗೆ ಸುತ್ತಾಡುತ್ತಿದ್ದು, ರಾಹುಲ್ ಪ್ರಪಂಚಾದ್ಯಂತ ಭಾಗವಹಿಸುವ ಕ್ರಿಕೆಟ್ ಪ್ರವಾಸದಲ್ಲಿ ಆಥಿಯಾ ಕೂಡ ಜೊತೆಯಾಗಿರುತ್ತಾರೆ. ಆಥಿಯಾ ಶೆಟ್ಟಿ ಬಾಲಿವುಡ್ ನ ಖ್ಯಾತ ನಟ ಸುನೀಲ್ ಶೆಟ್ಟಿ ಅವರ ಮಗಳು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
