ಗೋಮೂತ್ರದ ಹಲವು ಔಷದಿ ಉಪಯೋಗಗಳ ಬಗ್ಗೆ ನಾವು ಈಗಾಗಲೇ ಕೇಳಿದ್ದೇವೆ. ಈ ಮಧ್ಯೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಇಂದು ಸರ್ಕಾರದ ಆರೋಗ್ಯ ಇಲಾಖೆಯಿಂದ ಔಷಧ ತಯಾರಿಸಲು ಗೋಮೂತ್ರವನ್ನು ಖರೀದಿಸುವುದಾಗಿ ಘೋಷಿಸಿದ್ದಾರೆ.
‘ಈಗಾಗಲೇ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ‘ಗೋದಾನ ನ್ಯಾಯ ಯೋಜನೆ’ ಅಂಗವಾಗಿ ಬರುವ ‘ಹರೇಲಿ’ ಹಬ್ಬದಿಂದ ಗೋಮೂತ್ರ ಖರೀದಿ ಪ್ರಕ್ರಿಯೆಯನ್ನು ಆರಂಭಗೊಳಿಸಲಾಗುವುದು’ ಎಂದು ಗೋದಾನ ನ್ಯಾಯ ಯೋಜನೆ ನಿರ್ದೇಶಕ ಅಯ್ಯಜ್ ತಂಬೋಳಿ ಹೇಳಿದ್ದಾರೆ. ಪ್ರತಿ ಲೀಟರ್ ಗೋ ಮೂತ್ರಕ್ಕೆ ₹4 ದರ ನಿಗದಿಪಡಿಸಲಾಗಿದೆ.
ಈ ಯೋಜನೆಯ ಮೊದಲ ಹಂತದಲ್ಲಿ ಪ್ರತಿ ಜಿಲ್ಲೆಯ ಎರಡು ಆಯ್ದ ಸ್ವಯಂ-ಪೋಷಕ ಗೋದಾನ್ಗಳಲ್ಲಿ ಗೋಮೂತ್ರವನ್ನು ಖರೀದಿಸಲಾಗುತ್ತದೆ. ಗೋದಾನ್ ನಿರ್ವಹಣಾ ಸಮಿತಿಯು ಗೋಮೂತ್ರವನ್ನು ಖರೀದಿಸಲು ಸ್ಥಳೀಯ ಮಟ್ಟದಲ್ಲಿ ದರವನ್ನು ನಿಗದಿಪಡಿಸುತ್ತದೆ. ಛತ್ತೀಸ್ಗಢದ ರಾಜ್ಯದಲ್ಲಿ ಗೋಮೂತ್ರ ಖರೀದಿಗೆ ಪ್ರತಿ ಲೀಟರ್‌ಗೆ 4 ರೂ. ನಿಗದಿಪಡಿಸಲಾಗಿದೆ.
ಗೋಮೂತ್ರ ಖರೀದಿ ಯೋಜನೆಗೆ ಜುಲೈ 28 ರಂದು ಚಾಲನೆ ನೀಡುವ ಸಾಧ್ಯತೆಯಿದೆ. ಅದೇ ದಿನ ಸ್ಥಳೀಯ ಹಬ್ಬ ಹರೇಲಿಯನ್ನು ಆಚರಿಸಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿದುಬಂದಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
