fbpx
ಸಮಾಚಾರ

ಜುಲೈ 21: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ಜುಲೈ 21, 2022 ಗುರುವಾರ
ವರ್ಷ : 1944, ಶೋಭಾಕೃತ
ತಿಂಗಳು : ಆಷಾಢ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಅಷ್ಟಮೀ : Jul 20 07:36 am – Jul 21 08:12 am; ನವಮೀ : Jul 21 08:12 am – Jul 22 09:32 am
ನಕ್ಷತ್ರ : ಅಶ್ವಿನಿ: Jul 20 12:50 pm – Jul 21 02:17 pm; ಭರಣಿ: Jul 21 02:17 pm – Jul 22 04:25 pm
ಯೋಗ : ಧೃತಿ: Jul 20 12:42 pm – Jul 21 12:20 pm; ಶೂಲ: Jul 21 12:20 pm – Jul 22 12:30 pm
ಕರಣ : ಕುಲವ: Jul 20 07:48 pm – Jul 21 08:12 am; ತೈತುಲ: Jul 21 08:12 am – Jul 21 08:47 pm; ಗರಿಜ: Jul 21 08:47 pm – Jul 22 09:32 am

Time to be Avoided
ರಾಹುಕಾಲ : 2:00 PM to 3:35 PM
ಯಮಗಂಡ : 6:06 AM to 7:41 AM
ದುರ್ಮುಹುರ್ತ : 10:19 AM to 11:10 AM, 03:23 PM to 04:13 PM
ವಿಷ : 12:44 AM to 02:29 AM
ಗುಳಿಕ : 9:16 AM to 10:51 AM

Good Time to be Used
ಅಮೃತಕಾಲ : 06:39 AM to 08:21 AM
ಅಭಿಜಿತ್ : 12:00 PM to 12:51 PM

Other Data
ಸೂರ್ಯೋದಯ : 6:06 AM
ಸುರ್ಯಾಸ್ತಮಯ : 6:45 PM

 

ಮೇಷ (Mesha)


ಅರ್ಥಪೂರ್ಣ ಸಂಬಂಧಗಳಿಗೆ ಕಾರ್ಯಕ್ಷೇತ್ರದಲ್ಲಿ ಹುಡುಕಾಟ ನಡೆಯ ಲಿದೆ. ಆಗಾಗ ಹಣದ ವಿಚಾರ ದಲ್ಲಿ ಗಮನ ಹರಿಸಬೇಕಾದೀತು. ನಿರುದ್ಯೋಗಿಗಳಿಗೆ ನಿರೀಕ್ಷಿತ ಉದ್ಯೋಗ ಲಾಭ ಸಿಗದು. ದಿನಾಂತ್ಯ ಶುಭವಾರ್ತೆ..

ವೃಷಭ (Vrushabh)


ಕಾರ್ಯಕ್ಷೇತ್ರದಲ್ಲಿ ಗೌರವವಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಗೋಚರಕ್ಕೆ ಬರಲಿದೆ. ಆರ್ಚಕ, ಪುರೋಹಿತ ವೃತ್ತಿ ಯವರಿಗೆ ಹಾಗೂ ಯಜ್ಞ, ಯಾಗ ಪೂಜೆ, ಪ್ರತಿಷ್ಠಾಪನೆ ಇತ್ಯಾದಿ ದೇವತಾ ಕಾರ್ಯದಿಂದ ಲಾಭಡುವುದು.

ಮಿಥುನ (Mithuna)


ಏರುತ್ತಿರುವ ಜೀವನ ವೆಚ್ಚ ಆತಂಕಕ್ಕೆ ಕಾರಣವಾದೀತು. ರಾಜಕೀಯ ವ್ಯಕ್ತಿಗಳಿಗೆ ಅಭಿವೃದ್ಧಿ ಗೋಚರಕ್ಕೆ ಬರಲಿದೆ. ಧಾರ್ಮಿಕ ವೃತ್ತಿಯವರಿಗೆ ಆತಂಕಕ್ಕೆ ಕಾರಣವಾದೀತು. ಸಂಬಂಧಗಳನ್ನು ಗಟ್ಟಿಗೊಳಿಸಿರಿ.

ಕರ್ಕ (Karka)


ಜೀವನವನ್ನು ನೈತಿಕವಾಗಿ ನಿಭಾಯಿಸಬೇಕಾಗುತ್ತದೆ. ಆರ್ಥಿಕವಾಗಿ ಸುಧಾರಣೆ ತೋರಿ ಬಂದು ಧನ ಭಾಗ್ಯ ವೃದ್ದಿಯಾಗಲಿದೆ. ಅದೇ ರೀತಿಯಲ್ಲಿ ಒಳ್ಳೆಯ ಚಿಂತನೆ, ಉತ್ತಮ ಹೂಡಿಕೆಗಳು ಲಾಭಕರವಾಗಲಿವೆ.

ಸಿಂಹ (Simha)


ವೃತ್ತಿರಂಗದಲ್ಲಿ ಗಾಸಿಪ್‌ಗ್ಳೇ ದೊಡ್ಡ ಆಡ್ಡಿಯಾಗಲಿವೆ. ಗುರುಬಲವಿದ್ದ ಕಾರಣ ನಿಮ್ಮ ತಾಳ್ಮೆ ಸಮಾಧಾನ, ಕೌಶಲ್ಯಗಳನ್ನು ಒರಗೆಹಚ್ಚಿ ಮುನ್ನಡೆಯ ಬೇಕಾಗುತ್ತದೆ. ಕೌಟುಂಬಿಕವಾಗಿ ಇತರರ ದೃಷ್ಟಿ ಕೋನವನ್ನು ನಿಭಾಯಿಸಲು ಸಾಧ್ಯವಾಗಲಾರದು.

ಕನ್ಯಾರಾಶಿ (Kanya)


ನಿರೀಕ್ಷಿತ ರೀತಿಯಲ್ಲಿ ಯೋಗ್ಯ ಕನ್ಯೆಯರಿಗೆ ವಿವಾಹಾದಿ ಯೋಗವಿದೆ. ವಿದ್ಯಾರ್ಥಿಗಳು ಪ್ರಯತ್ನಬಲವನ್ನು ಮುಂದು  ವರಿಸಿಕೊಂಡು ಹೋಗಬೇಕಾಗುತ್ತವೆೆ. ಧಾರ್ಮಿಕ ಜಿಜ್ಞಾಸುಗಳ ಬಗ್ಗೆ ಸಂಪರ್ಕ ಸಾಧಿಸಿರಿ.

ತುಲಾ (Tula)


ವ್ಯಾಪಾರ, ವ್ಯವಹಾರಗಳು ಕೊಡು, ಕೊಳ್ಳುವುದರಲ್ಲಿ ಲೆಕ್ಕಾಚಾರ ಮುಖ್ಯ ವಾಗಿರುತ್ತದೆ. ಸುಖ ಆಪೇಕ್ಷೆಯ ಅಪಸರದಲ್ಲಿ ದುಡುಕದಿರಿ. ಕಾರ್ಯಕ್ಷೇತ್ರದಲ್ಲಿ ಇದು ಆತ್ಮ ವಿಮರ್ಶೆಗೆ ಸಕಾಲವಾದೀತು. ಸಂಚಾರದಲ್ಲಿ ಜಾಗ್ರತೆ ಇರಲಿ.

ವೃಶ್ಚಿಕ (Vrushchika)


ಒಮ್ಮೊಮ್ಮೆ ವೃತ್ತಿರಂಗದಲ್ಲಿ ಯಾಂತ್ರಿಕ ಕ್ರಿಯೆಗಳಿಂದಾಗಿ ನಿರಾಸಕ್ತಿ ಮೂಡಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಒಪ್ಪಂದ, ಬದಲಾವಣೆ, ವಿಸ್ತರಣೆಗೆ ಆವಕಾಶವಿದೆ. ಶ್ರೀಕುಲ   ದೇವರ, ಶ್ರೀಗುರುಗಳ ಅನುಗ್ರಹಕ್ಕಾಗಿ ಪ್ರಾರ್ಥಿಸಿರಿ.

ಧನು ರಾಶಿ (Dhanu)


ಒಳ ಜಗಳ, ಉದ್ವೇಗ, ಮುಜುಗರ ಸನ್ನಿವೇಶವನ್ನು ಅನುಭವಿಸಬೇಕಾಗುವುದು. ಪ್ರಬುದ್ಧರಾಗಿ ಕೊಂಚ ತಾಳ್ಮೆ, ಸಮಾಧಾನ ಬೆಳೆಸಿಕೊಳ್ಳಿ. ಎಲ್ಲವೂ ಸರಿಯಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಹೊಂದಾಣಿಕೆಯೆ ಸರಿ ಯೆನಿಸಲಿದೆ.

ಮಕರ (Makara)


ರಾಜಕೀಯದವರಿಗೆ ವಿವಾದಗಳು, ಅಪಮಾನ, ಅಪವಾದ ಪ್ರಸಂಗಗಳು ಒದಗಿ ಬರಲಿವೆ. ಪ್ರಯತ್ನಬಲದಿಂದಲೇ ಶುಭಮಂಗಲ ಕಾರ್ಯಗಳು ನಡೆದಾವು. ಕಾರ್ಯಕ್ಷೇತ್ರದಲ್ಲಿ ದುಡಿಮೆ ಸಾಕಷ್ಟು ಅಭಿವೃದ್ಧಿ ತರಲಿದೆ.

ಕುಂಭರಾಶಿ (Kumbha)


ಉದ್ಯೋಗಿಗಳು ತಮ್ಮ ಬದುಕಿಗೊಂದು ಗಟ್ಟಿ ನೆಲೆ ಕಂಡು ಕೊಂಡಾರು. ಸಂಚಾರಕ್ಕಾಗಿ ವಾಹನ ಖರೀದಿಯ ಯೋಗವಿದೆ. ಧಾರ್ಮಿಕವಾಗಿ ಸಹೃದಯರ ಸಂಪರ್ಕ ಸಿಗಲಿದೆ. ಅಪವಾದ ಭೀತಿ ತರಲಿದೆ.

ಮೀನರಾಶಿ (Meena)


ಹತಾಶರಾಗದಿರಿ. ಗುರುಬಲವಿದ್ದ ಕಾರಣ ಯಾವುದೇ ಕಾರ್ಯವನ್ನು ದೃಢ ನಿರ್ಧಾರದಿಂದ ಮುಂದುವರಿಸಿಕೊಂಡು ಹೋಗಿರಿ. ನಿರುದ್ಯೋಗಿಗಳು ಅನೇಕ ಅವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ. ದೇವತಾ ದರ್ಶನ ಭಾಗ್ಯವಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top