fbpx
ಸಮಾಚಾರ

ಭಾರತದ ನೂತನ ರಾಷ್ಟ್ರಪತಿ ಅವರ ಸಂಬಳ ಎಷ್ಟು? ಇವರ ವಸತಿ, ಭದ್ರತೆ ಹೀಗೆ ಹತ್ತು ಹಲವಾರು ವಿಷಯಗಳ ಕುರಿತು ಮಾಹಿತಿ

ಭಾರತದ ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆಯಾಗಿದ್ದಾರೆ. ಆದರೆ ರಾಷ್ಟ್ರಪತಿ ಅವರ ಕುರಿತು ಕೆಲವು ಅಚ್ಚರಿಯ ಸಂಗತಿಗಳಿವೆ. ಅಂದರೆ ಇವರ ಸಂಬಳ, ಇವರ ಕಾರು, ಇವರ ಬಂಗಲೆ, ಹೀಗೆ ಹತ್ತು ಹಲವಾರು ಪ್ರಶ್ನೆಗಳು ಜನರ ಮನಸಲ್ಲಿ ಮೂಡುವುದು ಸಹಜ. ಆದರೆ ಇದಕ್ಕೆಲ್ಲ ಉತ್ತರ ನಮ್ಮ ಬಳಿ ಇದೆ.

ಈ ಹಿಂದೆ ಹಾಲಿ ರಾಷ್ಟ್ರಪತಿಯಾಗಿದ್ದ ರಾಮನಾಥ್ ಕೋವಿಂದ್ ತಮ್ಮ ವೇತನದ ಕುರಿತು ಅಚ್ಚರಿ ಅಂಶ ಬಹಿರಂಗ ಪಡಿಸಿದ್ದರು. ನಾನು 5 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದಾರೆ. ಇದರಲ್ಲಿ 2.35 ಲಕ್ಷ ರೂಪಾಯಿ ತೆರಿಗೆ ಕಟ್ಟುತ್ತೇನೆ ಎಂದಿದ್ದರು. ಇದಾದ ನಂತರ ಜನರ ಮನಸಲ್ಲಿ ರಾಷ್ಟ್ರಪತಿ ಅವರ ಭದ್ರತೆ, ಕಾರು, ಆದಾಯ ಹೀಗೆ ಹತ್ತು ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿದ್ದವು.

ರಾಷ್ಟ್ರಪತಿ ಕಾರು:
ರಾಷ್ಟ್ರಪತಿ ಅವರಿಗೆ ನೀಡುವ ಕಾರು ಗರಿಷ್ಟ ಭದ್ರತೆಯಿಂದ ಕೂಡಿರುತ್ತದೆ. ಬುಲೆಟ್‌ಪ್ರೂಫ್, ಶಾಕ್‌ಪ್ರೂಫ್, ಬಾಂಬ್ ಸ್ಫೋಟ ನಿರೋಧಕ, ಗ್ಯಾಸ್ ಸ್ಫೋಟ ನಿರೋಧ ಸೇರಿದಂತೆ ಹಲವು ಸ್ಫೋಟಗಳನ್ನು ತಡೆಯುವ ಸಾಮರ್ಥ್ಯ ಹೊಂದಿದೆ. ಇದಲ್ಲದೆ ತುರ್ತು ಸಂಧರ್ಭದಲ್ಲಿ ಬಳಸಲು ಹಾಗೂ ಅಪಾಯದಿಂದ ಪಾರಾಗಲು ಕೆಲ ಶಸ್ತ್ರಾಸ್ತ್ರಗಳು ಈ ಕಾರಿನಲ್ಲಿರುತ್ತದೆ.

ಭದ್ರತೆ:
ಪ್ರಧಾನಿ ಯಂತೆ ರಾಷ್ಟ್ರಪತಿ ಅವರಿಗೂ ಕೂಡ ಭದ್ರತೆ ವಿಷಯದಲ್ಲಿ ಹೆಚ್ಚಿನ ಗಮನ ವಹಿಸಲಾಗುತ್ತದೆ. ಭಾರತೀಯ ಸೇನೆ ಅತ್ಯುನ್ನತ ಹಾಗೂ ಆಯ್ದ ಯೋಧರ ತಂಡ ರಾಷ್ಟ್ರಪತಿ ಭದ್ರತೆ ಜವಾಬ್ದಾರಿ ಹೊಂದಿರುತ್ತಾರೆ. ಮೂರೂ ವಿಭಾಗದಿಂದ ತರಬೇತಿ ಪಡೆದ ಯೋಧರನ್ನು ಇವರ ಭದ್ರತೆಗಾಗಿ ನಿಯೋಜಿಸಲಾಗುತ್ತದೆ.

ವಿಳಾಸ:
ದೆಹಲಿಯ ರಾಷ್ಟ್ರಪತಿ ಭವನ, ಪ್ರಸಿಡೆಂಟ್, ನವ ದೆಹಲಿ 110004 ವಿಳಾಸದಲ್ಲಿ ವಾಸಿಸುತ್ತಾರೆ. ಈ ಬಂಗಲೆಯಲ್ಲಿ 340 ಕೊಠಡಿಗಳಿವೆ. ಇದರಲ್ಲಿ ರಾಷ್ಟ್ರಪತಿ ಮನೆ, ಆತಿಥಿ ಕೊಠಡಿ, ಕಚೇರಿ ಒಳಗೊಂಡಿದೆ. ಹಲವು ಗಾರ್ಡನ್ ಕೂಡ ಈ ಬಂಗಲೆಯ ಸುತ್ತಾ ಇದೆ.

ರಾಷ್ಟ್ರಪತಿಗಳ ಪಿಂಚಣಿ ವಿವರ:
ನಿವೃತಿ ನಂತರ ರಾಷ್ಟ್ರಪತಿ ಅವರು ಪ್ರತಿ ತಿಂಗಳು 1.5 ಲಕ್ಷ ರೂಪಾಯಿ ಪಿಂಚಣಿ ಪಡೆಯಲಿದ್ದು, ಇವರ ಹೆಂಡತಿ ಪ್ರತಿ ತಿಂಗಳು 30,000 ರೂಪಾಯಿ ಪಡೆಯಲಿದ್ದಾರೆ. ಇದರ ಜೊತೆ ಉಚಿತ ನಿವಾಸ ಮತ್ತು ಐದು ಜನ ಕೆಲಸದವರನ್ನು ನೇಮಿಸಿಕೊಳ್ಳುವ ಅವಕಾಶವನ್ನು ಸಹ ನೀಡುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top