ಕರ್ನಾಟಕದ ಹೆಸರಾಂತ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಈ ಕಾರ್ಯಕ್ರಮ ಮತ್ತೆ ಯಾವಾಗ ಶುರುವಾಗುತ್ತೆ ಎಂದು ಜನರು ಕಾತುರದಿಂದ ಕಾಯುತ್ತಿದ್ದರು. ಇದೀಗ ಅಭಿಮಾನಿಗಳಿಗೆ ಸಂತಸದ ಸುದ್ದಿ ಇದೆ.
ಬಹಳ ದಿನದಿಂದ ಅಭಿಮಾನಿಗಳ ಮನಸಲ್ಲಿ ಇದ್ದ ಪ್ರಶ್ನೆ ಎಂದರೆ ಬಿಗ್ ಬಾಸ್ ಸೀಸನ್ 9 ಯಾವಾಗ ಶುರುವಾಗುತ್ತದೆ ಎಂದು. ಇದೀಗ ಕಲರ್ಸ್ ಕನ್ನಡ ವಾಹಿನಿ ಇದರ ದಿನಾಂಕವನ್ನು ಪ್ರಕಟಿಸಿದೆ. ಆಗಸ್ಟ್ 6 ಹಾಗೂ 7ರಂದು ಈ ಶೋ ಪ್ರೀಮಿಯರ್ ಅಗಲಿದ್ದು ಓಟಿಟಿ ಯಲ್ಲಿ ಮಾತ್ರ ಪ್ರಸಾರವಾಗಲಿದೆ. ಆದರೆ ಇದರಲ್ಲಿ ಒಂದು ಟ್ವಿಸ್ಟ್ ಇದೆ ಅದೇನೆಂದರೆ ಇದು ಬಿಗ್ ಬಾಸ್ ಸೀಸನ್ 9 ಅಲ್ಲ ಸೀಸನ್ 1. ಏನಿದು ವಿಶೇಷ ಅಂತೀರಾ ಈ ವಿಡಿಯೋ ನೋಡಿದರೆ ನಿಮಗೆ ಅರ್ಥವಾಗುತ್ತದೆ.
ಫಸ್ಟ್ ಟೈಮ್ ಟಿವಿಗೆ ಮೊದಲು ಒಂದು ಒಟಿಟಿ ಸೀಸನ್! ವಾರ ಆರು ಮಜಾ ನೂರಕ್ಕೆ ನೂರು!!
ಗ್ರ್ಯಾಂಡ್ ಪ್ರಿಮಿಯರ್ ಆಗಸ್ಟ್ 6, ಸಂಜೆ 7
Watch all the #BBKOTT excitement 24×7 LIVE on #VootSelect pic.twitter.com/oZB9Ghu3kK— Colors Kannada (@ColorsKannada) July 23, 2022
ಈಗಾಗಲೇ ಇದರ ಪ್ರೊಮೊ ಶೂಟ್ ಶುರುವಾಗಿದ್ದು, ಕಿಚ್ಚ ಸುದೀಪ್ ಸಕತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು. ಇದಲ್ಲದೆ ಬಿಗ್ ಬಾಸ್ ಶುರುವಾಗುತ್ತಿದೆ ಎಂದು ಜನರಿಗೆ ತಿಳಿಯುತ್ತಿದ್ದಂತೆ ಪ್ರತಿಯೊಬ್ಬರೂ ಈ ಬಾರಿಯ ಬಿಗ್ ಬಾಸ್ ಗೆ ಸಾಮಾನ್ಯರು ಬರುತ್ತಾರಾ, ಅಥವಾ ಸೆಲೆಬ್ರಿಟಿಗಳು ಬರುತ್ತಾರಾ, ಅಥವಾ ಇಬ್ಬರು ಇರುತ್ತಾರಾ ಎಂಬ ಚರ್ಚೆಗಳನ್ನು ಮಾಡುತ್ತಿದ್ದಾರೆ. ಈಗಾಗಿ ಜನರ ಮನಸಲ್ಲಿ ಮೂಡಿರುವ ಪ್ರಶ್ನೆಗೆ ಉತ್ತರ ಸಿಗುತ್ತದೆಯೇ ಎಂದು ಕಾದು ನೋಡಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
