ಭಾರತದ ಜನರಿಗೆ ಮೆಟ್ರೋ ಸೇವೆ ಆರಂಭವಾದ ಮೇಲೆ ತಮ್ಮ ತಮ್ಮ ಕಚೇರಿಗಳಿಗೆ ಬಹಳಷ್ಟು ಬೇಗ ತಲುಪಲು ಸಾಧ್ಯವಾಗುತ್ತಿದೆ. ಅದರಲ್ಲೂ ಬೆಂಗಳೂರಿನ ಜನರು ಹೆಚ್ಚಾಗಿ ಮೆಟ್ರೋ ಸೇವೆಯನ್ನು ಬಳಸುತ್ತಾರೆ. ಇದೆಲ್ಲದರ ನಡುವೆ ಇದೀಗ ನಮ್ಮ ಮೆಟ್ರೋ ಸಂಸ್ಥೆ ಮಹತ್ವದ ಸಾಧನೆಯನ್ನು ಮಾಡಿದೆ.
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ(ಟ್ರಾಯ್)ದ ಪೈಲಟ್ ಪ್ರಾಜೆಕ್ಟ್‌ನ ಅಡಿಯಲ್ಲಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ 5G ನೆಟ್ವರ್ಕ್ ಅನ್ನು ಪರೀಕ್ಷಿಸಲಾಗಿದೆ. ಈ ಮೂಲಕ ನಮ್ಮ ಬೆಂಗಳೂರಿನ ಮೆಟ್ರೋ ರೈಲು ಭಾರತದಲ್ಲೇ ಮೊಟ್ಟಮೊದಲ ಬಾರಿಗೆ 5G ನೆಟ್ವರ್ಕ್ ಪರೀಕ್ಷೆ ಮಾಡಿದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
BMRCL has become the first Metro in India to test 5G network under a Pilot Project of TRAI. The 5G network radiated in 200 m radius, deployed by Reliance Jio at M G Rd station. The test has achieved 1.45 Gbps Download and 65 Mbps Upload speeds, making it 50 times faster than 4G. pic.twitter.com/jCtFmhOjmH
— ನಮ್ಮ ಮೆಟ್ರೋ (@cpronammametro) July 22, 2022
ಈ ಕುರಿತು ತಮ್ಮ ಅಧಿಕೃತ ಕಥೆಯಲ್ಲಿ ಟ್ವೀಟ್ ಮಾಡಿರುವ ನಮ್ಮ ಮೆಟ್ರೋ ” ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಬೆಂಗಳೂರಿನ ಎಂಜಿ ರೋಡ್ ನಿಲ್ದಾಣದಲ್ಲಿ 200 ಮೀ. ವ್ಯಾಪ್ತಿಯಲ್ಲಿ 5ಜಿ ನೆಟ್‌ವರ್ಕ್ ಅನ್ನು ಸ್ಥಾಪಿಸಿದೆ. ಪರೀಕ್ಷೆಯಲ್ಲಿ 1.45 ಜಿಬಿಪಿಎಸ್(ಗಿಗಾಬಿಟ್ ಪರ್ ಸೆಕೆಂಡ್) ಡೌನ್‌ಲೋಡ್ ಹಾಗೂ 65 ಎಂಬಿಪಿಎಸ್(ಮೆಗಾಬಿಟ್ಸ್ ಪರ್ ಸೆಕೆಂಡ್) ಅಪ್‌ಲೋಡ್ ವೇಗವನ್ನು ಸಾಧಿಸಿದ್ದು, ಇದು 4ಜಿ ನೆಟ್‌ವರ್ಕ್‌ಗಿಂತಲೂ 50 ಪಟ್ಟು ವೇಗದ ಇಂಟರ್‌ನೆಟ್ ಒದಗಿಸಿದೆ” ಎಂದು ತಿಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
