ಮಾರ್ಡನ್ ರೈತ ಎಂದು ಪ್ರಸಿದ್ದಿ ಪಡೆದಿದ್ದ ಈ ಶಶಿ ಕುಮಾರ್ ರೈತ ಎಂಬ ಮಾನದಂಡದ ಮೇಲೆಯೇ ಬಿಗ್ಬಾಸ್ಗೆ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದರು. ಆದರೆ ಬಿಗ್ ಬಾಸ್ ನಂತರ ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ನಂತರ ಒಂದು ಸಿನಿಮಾ ಮಾಡುತ್ತಿದ್ದ ಬಗ್ಗೆ ಸಹ ವಿಚಾರ ಕೇಳಿ ಬಂದಿತ್ತು. ಆದರೆ ನಂತರ ಆ ಬಗ್ಗೆ ಸಹ ಮಾಹಿತಿ ಇಲ್ಲ. ಆದರೆ ಸದ್ಯಕ್ಕೆ ಅವರ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಅದು ಅವರ ಮದುವೆಯ ಸುದ್ದಿ.
ಹೌದು, ಶಶಿ ಕುಮಾರ್ಗೆ ಇದೇ ಆಗಸ್ಟ್ 6 ಹಾಗೂ 7 ರಂದು ಬೆಂಗಳೂರಿನಲ್ಲಿ ಮದುವೆ ಫಿಕ್ಸ್ ಆಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಇವರು ದೊಡ್ಡಬಳ್ಳಾಪುರ ಮೂಲದ ವಧು ಸ್ವಾತಿ ಎಂಬುವರ ಕೈ ಹಿಡಿಯಲಿದ್ದಾರೆ. ಕೃಷಿ ಕುಟುಂಬದಿಂದ ಬಂದಿರೋ ವಧು ಸ್ವಾತಿ ಯುಪಿಎಸ್ಸಿ ಪ್ರಿಲಿಮ್ಸ್ ಕೂಡ ಪಾಸ್ ಮಾಡಿದ್ದಾರೆ.
ಅಂದಹಾಗೆ ಮಾರ್ಡನ್ ರೈತ ಶಶಿ ಕುಮಾರ್ ಅವರು ಚಿಕ್ಕಬಳ್ಳಾಪುರದ ಚಿಂತಾಮಣಿ ಮೂಲದವರು. ಬೆಂಗಳೂರಿನ ಜಿಕೆವಿಕೆ ಕೃಷಿ ವಿದ್ಯಾಲಯದಲ್ಲಿ ಶಶಿ ಕುಮಾರ್ ಪದವಿ ಪಡೆದಿದ್ದಾರೆ. ಕೃಷಿಯಲ್ಲಿ ನೂತನ ತಂತ್ರಜ್ಞಾನವನ್ನು ಅಳವಡಿಸುವುದರಲ್ಲಿ ಶಶಿ ಕುಮಾರ್ ಸದಾ ಮುಂದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
