ಚಾಲೆಂಜಿಂಗ್ ಸ್ಟಾರ್, ಡಿಬಾಸ್ “ದರ್ಶನ್” ಸಿನಿಮಾ ಎಂದರೆ ಅಭಿಮಾನಿಗಳಿಗೆ ಸಕತ್ ಕ್ರೇಜ್. ಇನ್ನು ಈ ಬಾರಿ ದರ್ಶನ್ ಅವರ “ಕ್ರಾಂತಿ” ಸಿನಿಮಾದ ಕ್ರೇಜ್ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ನೋಡಬಹುದು. ಮೀಡಿಯಾ ದವರು ಸಹಾಯ ಮಾಡದೇ ಇದ್ದರೇನು ನಾವೇ ದರ್ಶನ್ ಅವರ ಬೆಂಬಲಕ್ಕೆ ನಿಂತು ಅವರ ಸಿನಿಮಾವನ್ನು ಪ್ರಮೋಷನ್ ಮಾಡಿಸುತ್ತೇವೆಂದು ಅಭಿಮಾನಿಗಳು ಹೇಳಿದ್ದಾರೆ. ಇಷ್ಟೆಲ್ಲಾ ಸುದ್ದಿ ಗಳ ಮಧ್ಯೆ ಡಿಬಾಸ್ ಅಭಿಮಾನಿಗಳಿಗೆ ಕ್ರಾಂತಿ ಸಿನಿಮಾದ ಕುರಿತು ಮತ್ತೊಂದು ಅಪ್ಡೇಟ್ ಬಂದಿದೆ.
The Voice of #Kranti @dasadarshan #ChallengingStarDarshan #Dboss pic.twitter.com/QUize1LvrO
— Shylaja Nag (@shylajanag) July 25, 2022
ರಾಬರ್ಟ್ ಸಿನಿಮಾದ ನಂತರ ದರ್ಶನ್ ಕೈಗೆತ್ತುಕೊಂಡ ಸಿನಿಮಾ “ಕ್ರಾಂತಿ”. ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಈ ಸಿನಿಮಾವನ್ನು ಚಿತ್ರಿಸಲಾಗಿದೆ. ಈಗಾಗಲೇ ಸಿನಿಮಾ ತಂಡ ಚಿತ್ರೀಕರಣವನ್ನು ಮುಗಿಸಿ ಡಬ್ಬಿಂಗ್ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ದರ್ಶನ್ ಡಬ್ಬಿಂಗ್ ಸ್ಟುಡಿಯೋ ದಲ್ಲಿ ಡಬ್ಬಿಂಗ್ ಮಾಡುತ್ತಿರುವ ಫೋಟೋವನ್ನು ನಿರ್ಮಾಪಕಿ ಶೈಲಜಾ ನಾಗ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. The Voice of Kranti ಎಂದು ಬರೆದಿರುವ ಪೋಸ್ಟ್ ಇದೀಗ ಸಕತ್ ವೈರಲ್ ಆಗುತ್ತಿದೆ.
ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವ ಥೀಮ್ ಇಟ್ಟುಕೊಂಡು ಈ ಸಿನಿಮಾ ಮಾಡಿರುವ ಕಾರಣ ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರ ತಂಡ ಸಕಲ ಪ್ರಯತ್ನ ನಡೆಸುತ್ತಿದೆ. ಈಗಾಗಲೇ ಸಿನಿಮಾದ ಪ್ರಮೋಷನ್ ಎಲ್ಲಾ ಕಡೆ ಅದ್ದೂರಿಯಾಗಿ ನಡೆಯುತ್ತಿದ್ದು, ಕ್ರಾಂತಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
