fbpx
ಸಮಾಚಾರ

1ನೇ ತರಗತಿ ಶಾಲೆಗೆ ಸೇರಲು ಮಕ್ಕಳಿಗೆ ಹೊಸ ವಯೋಮಿತಿ ನಿಗದಿ – ಸರ್ಕಾರದಿಂದ ಆದೇಶ

ಇನ್ಮುಂದೆ ಮಕ್ಕಳಿಗೆ 1 ನೇ ತರಗತಿಗೆ ಸೇರಿಸುವ ಮುಂಚೆ ಅವರ ವಯಸ್ಸನ್ನು ಒಮ್ಮೆ ಪರೀಕ್ಷಿಸಿ. ಏಕೆಂದರೆ ಇನ್ನುಮುಂದೆ ಮಕ್ಕಳನ್ನು 1 ನೇ ತರಗತಿಗೆ ಸೇರಿಸಲು ಅವರಿಗೆ ಕನಿಷ್ಠ 6 ವರ್ಷಗಳಾಗಿರಬೇಕು. ಇಲ್ಲ ವೆಂದರೆ ಅವರನ್ನು 1 ನೇ ತರಗತಿಗೆ ಸೇರಿಸ್ಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ.

ಇನ್ನು ಮುಂದೆ ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಲು ಕನಿಷ್ಟ 6 ವರ್ಷಗಳ ವಯಸ್ಸಾಗಿರಬೇಕು ಎಂದು ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ. ಅಂದರೆ ಪ್ರತಿ ವರ್ಷ ಜೂನ್ 1 ನೇ ತಾರೀಕಿನಂದು ಮಗುವಿಗೆ 6 ವರ್ಷ ತುಂಬಿರಬೇಕು. ಇಲ್ಲವೆಂದರೆ 1 ನೇ ತರಗತಿಗೆ ಸೇರಿಸಿಕೊಳ್ಳಲ್ಲಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ.

ಈ ಹಿಂದೆ ಮಕ್ಕಳನ್ನು 1 ನೇ ತರಗತಿಗೆ ಸೇರಿಸಲು 5 ವರ್ಷ, 5 ತಿಂಗಳು ಹಾಗೂ 5 ವರ್ಷ 10 ತಿಂಗಳು ಆಗಿರಬೇಕು ಎಂಬ ನಿಯಮವಿತ್ತು. ಆದರೆ ಇದೀಗ ಆರ್‌ಟಿಇ ಶಿಕ್ಷಣ ಕಾಯ್ದೆ, ಕಡ್ಡಾಯ ಶಿಕ್ಷಣ ನಿಯಮ 2012 ಅನ್ವಯ ಸರ್ಕಾರ ಹೊಸ ವಯೋಮಿತಿಯನ್ನು ನಿಗದಿ ಮಾಡಿದ್ದು, ಇದರಲ್ಲಿ ಕನಿಷ್ಠ 6 ವರ್ಷಗಳು ತುಂಬಿರಬೇಕೆಂದು ಉಲ್ಲೇಖಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top