ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದು ಅವರಿಗೆ ಒಂದು ಒಳ್ಳೆ ವಿದ್ಯಾಭ್ಯಾಸ ಸಿಗಲಿ ಎಂದು. ಆದರೆ ಇದೀಗ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು ಮಕ್ಕಳ ಮೇಲೆ ತಮ್ಮ ದರ್ಪವನ್ನು ತೋರಿಸುತ್ತಿರುವುದನ್ನು ನಾವು ಹಲವು ಬಾರಿ ನೋಡಿದ್ದೇವೆ. ಇದೀಗ ಗದಗ ಜಿಲ್ಲೆಯ ನಾಗಾವಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ತಡವಾಗಿ ಬಂದಿದಕ್ಕೆ ಒಂದು ದೊಡ್ಡ ಶಿಕ್ಷೆಯನ್ನು ನೀಡಿದ್ದಾರೆ.
#Karnataka edun dept in #Gadag has ordered an investigation after visuals of 6 & 7th standard students cleaning school toilets came to light. Parents allege- as punishment they were made to clean toilets. Dept says- inquiry ordered. Incident happened at Govt school- Nagavi. pic.twitter.com/nsonIV3T0t
— Imran Khan (@KeypadGuerilla) July 27, 2022
ಗದಗ ಜಿಲ್ಲೆಯ ನಾಗಾವಿ ಸರ್ಕಾರಿ ಶಾಲೆಯ 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳು ಶಾಲೆಗೆ ತಡವಾಗಿ ಬಂದಿದ್ದಾರೆ, ತಡವಾಗಿ ಬಂದ ಕಾರಣದಿಂದ ಶಾಲೆಯ ಆಡಳಿತ ಮಂಡಳಿ ಈ ವಿದ್ಯಾರ್ಥಿಗಳ ಕೈಯಲ್ಲಿ ಶೌಚಾಲಯವನ್ನು ಕ್ಲೀನ್ ಮಾಡಿಸಿದ್ದಾರೆ. ಇದೀಗ ವಿದ್ಯಾರ್ಥಿಗಳು ಶೌಚಾಲಯವನ್ನು ಶುಚಿ ಗೊಳಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದನ್ನು ಶಾಲೆಯಲ್ಲಿ ಅಡುಗೆಮಾಡುವವರೊಬ್ಬರು ಹಂಚಿಕೊಂಡಿದ್ದಾರೆ.
ಇದರ ಕುರಿತು ಮಾತನಾಡಿದ ಅಡುಗೆ ಕೆಲಸದವರು ನಾನು ಶಾಲೆಯಲ್ಲಿದ್ದಾಗ, ಶೌಚಾಲಯವನ್ನು ಸ್ವಚ್ಛಗೊಳಿಸಲು ಬಕೆಟ್ ಮತ್ತು ಪೊರಕೆಗಾಗಿ ವಿದ್ಯಾರ್ಥಿಗಳು ನನ್ನ ಬಳಿಗೆ ಬಂದರು, ಯಾಕೆ ಎಂದು ನಾನು ಪ್ರಶ್ನೆ ಮಾಡಿದಾಗ ನಾವು ಸ್ವಲ್ಪ ತಡವಾಗಿ ಶಾಲೆಗೆ ಬಂದಿರುವುದಕ್ಕೆ ನಮ್ಮ ಟೀಚರ್ ನಮಗೆ ಈ ಶಿಕ್ಷೆ ನೀಡಿದ್ದಾರೆ ಎಂದರು. ಇದು ಸರಿಯಲ್ಲ ಎಂದು ವಿದ್ಯಾರ್ಥಿಗಳು ಸ್ವಚ್ಛ ಮಾಡುವ ವಿಡಿಯೋವನ್ನು ಮಾಡಿ ಶಿಕ್ಷಣ ಇಲಾಖೆಗೆ ಕೊಟ್ಟಿದ್ದೇನೆ ಎಂದಿದ್ದಾರೆ. ವಿದ್ಯಾರ್ಥಿನಿಯರ ಪೋಷಕರು ಕೂಡ ಶಾಲೆಯ ಆಡಳಿತ ಮಂಡಳಿಯ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
