ಆರ್ ಸಿ ಬಿ ತಂಡದ ಆಪತ್ಬಾಂಧವ ಎಂದೇ ಕರೆಸಿಕೊಂಡಿದ್ದ ದಿನೇಶ್ ಕಾರ್ತಿಕ್ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಆರ್ ಸಿ ಬಿ ಪರ ಹೇಗೆ ಮಿಂಚಿನಿಂದ ಆಟ ವಾಡುತಿದ್ದರೋ ಇದೀಗ ಭಾರತ ತಂಡದ ಪರ ಅದೇ ರೀತಿ ಬ್ಯಾಟ್ ಬಿಸುತಿದ್ದಾರೆ. ಆದರೆ ದಿನೇಶ್ ಕಾರ್ತಿಕ್ ಮಾಜಿ ಪತ್ನಿ ನಿಕಿತಾ ವಂಜರ ಡಿಕೆ ಗೆ ಕೈ ಕೊಟ್ಟು ಮುರಳಿ ವಿಜಯ್ ಅವರನ್ನು ವಿವಾಹವಾಗಿರೋದು ನಮಗೆಲ್ಲ ಗೊತ್ತು. ಇದೀಗ ಡಿಕೆ ಅಭಿಮಾನಿಗಳು ಮುರಳಿ ವಿಜಯ್ ಅವರಿಗೆ ಮುಜುಗರ ತರಿಸುವಂತಹ ಘಟನೆ ಸೃಷ್ಟಿಸಿದರು.
#TNPL2022 DK DK DK ……
Murali Vijay reaction pic.twitter.com/wK8ZJ84351— Muthu (@muthu_offl) July 7, 2022
ದೀರ್ಘಕಾಲದ ವಿರಾಮದ ನಂತರ ಮುರಳಿ ವಿಜಯ್ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಅದು ಕೂಡ ತಮಿಳುನಾಡು ಪ್ರೀಮಿಯರ್ ಲೀಗ್ ಮೂಲಕ. ಆದರೆ ಡಿಕೆ ಅಭಿಮಾನಿಗಳು ಮುರಳಿ ವಿಜಯ್ ಅವರಿಗೆ ತೀವ್ರ ಮುಜುಗರ ತರಿಸಿದ್ದಾರೆ.
ಪಂದ್ಯದ ವೇಳೆ ಬೌಂಡರಿ ಲೈನ್ ನಲ್ಲಿ ನಿಂತಿದ್ದ ಮುರಳಿ ವಿಜಯ್ ಗೆ ಪ್ರೇಕ್ಷಕರು “ಡಿಕೆ ಡಿಕೆ” ಎಂದು ಜೋರಾಗಿ ಕೂಗುತ್ತಿದ್ದರು. ಯಾವಾಗ ಇದರ ಕೂಗು ಮತ್ತಷ್ಟು ಜೋರಾಗಿತ್ತೋ ಅವಾಗ ಮುರಳಿ ವಿಜಯ್ ಪ್ರೇಕ್ಷಕರಲ್ಲಿ ಕೂಗಬೇಡಿ ಎಂದು ಕೈ ಮುಗಿದು ಬೇಡಿಕೊಂಡರು. ಆದರೆ ಇದನ್ನು ಲೆಕ್ಕಿಸದ ಪ್ರೇಕ್ಷಕರು ಮತ್ತಷ್ಟು ಕಿರುಚಲು ಆರಂಭಿಸಿದರು. ಇದರಿಂದ ಮುರಳಿ ವಿಜಯ್ ಅವರಿಗೆ ತೀವ್ರ ಮುಜುಗರವಾಗಿತ್ತು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
