ನಮ್ಮ ಶಾಲಾ ಮತ್ತು ಕಾಲೇಜು ದಿನಗಳಲ್ಲಿ ನಮ್ಮ ಟೀಚರ್ ಯಾವಾಗಲು ಒಂದು ಮಾತು ಹೇಳುತ್ತಿದ್ದರು. ನೀನು ಈ ಬಾರಿ ಉದ್ದಾರ ಆಗಲ್ಲ, ನಿಂಗೆ ಒಳ್ಳೆಯ ಕೆಲಸ ಸಿಗಲ್ಲ ಎಂದು ಹಲವಾರು ಬಾರಿ ಹೇಳುತ್ತಿರುವುದನ್ನು ನಾವು ನೋಡಿದ್ದೇವೆ. ಇದರಿಂದ ಅದೆಷ್ಟೋ ವಿದ್ಯಾರ್ಥಿಗಳು ಮನ ನೊಂದಿರುವ ಘಟನೆಗಳು ಒಂದು ಕಡೆ ಆದರೆ ಮತ್ತೊಂದು ಕಡೆ ಅದನ್ನೇ ಚಾಲೆಂಜ್ ಆಗಿ ತೊಗೊಂಡು ಮುಂದೆ ಬಂದಿರುವ ವಿದ್ಯಾರ್ಥಿಗಳು ಇದ್ದಾರೆ. ಇದೀಗ ಅಂತದ್ದೇ ಒಂದು ಘಟನೆ ನಡೆದಿದೆ.
Two years ago, me and my friend decided to text our teacher the day our results come out 😀 pic.twitter.com/iDUd6XyhZG
— famouspringroll (@hasmathaysha3) July 22, 2022
ವಿದ್ಯಾರ್ಥಿನಿಯೊಬ್ಬರಿಗೆ ಶಿಕ್ಷಕಿ ಒಬ್ಬರು “ನೀನು ಅನುತ್ತೀರ್ಣ ಆಗುತ್ತೀಯ” ಎಂದು ಭವಿಷ್ಯ ನುಡಿದಿದ್ದರು. ಈ ಮಾತು ಕೇಳಿಸಿಕೊಂಡ ವಿದ್ಯಾರ್ಥಿನಿ ಅದನ್ನು ಸವಾಲಾಗಿ ತೆಗೆದುಕೊಂಡು ಇದೀಗ ದ್ವಿತೀಯ PUC ಯಲ್ಲಿ ತೀರ್ಗಡೆಗೊಂಡಿದ್ದಾಳೆ. ಅಷ್ಟಕ್ಕೇ ಸುಮ್ಮನಾಗದ ವಿದ್ಯಾರ್ಥಿನಿ ವಾಟ್ಸ್ಆ್ಯಪ್ ಮೂಲಕ ಶಿಕ್ಷಕಿಗಿ ಸಂದೇಶವನ್ನು ಕಳುಹಿಸುವ ಮೂಲಕ ತಮ್ಮ ಸಾಧನೆಯನ್ನು ತೋರಿಸಿದ್ದಾರೆ. ಇದೀಗ ವಿದ್ಯಾರ್ಥಿನಿ ಕಳುಹಿಸಿದ ವಾಟ್ಸ್ಆ್ಯಪ್ ಮೆಸೇಜ್ ಎಲ್ಲಾ ಕಡೆ ಸಕತ್ ವೈರಲ್ ಆಗುತ್ತಿದೆ.
ವಿದ್ಯಾರ್ಥಿನಿ ಕಳುಹಿಸಿದ ವಾಟ್ಸ್ಆ್ಯಪ್ ಮೆಸೇಜ್ ಹೀಗಿದೆ:
“ಶುಭ ಮಧ್ಯಾಹ್ನ, ಇದು ಆಶಾ ಮೇಡಂ ನಂಬರ್?” ಎಂದು ಪ್ರಶ್ನಿಸಿದ್ದಾಳೆ. ಇದಕ್ಕೆ ಟೀಚರ್ ಹೌದು ಎಂದಾಗ ದೀರ್ಘ ಸಂದೇಶವೊಂದನ್ನು ಬರೆದುಕಳಿಸಿದ್ದಾಳೆ. “ನಾನು 2019-20ರ ಬ್ಯಾಚ್ನ 10 ತರಗತಿ ವಿದ್ಯಾರ್ಥಿನಿ, ಈ ಸಂದೇಶ ಕಳುಹಿಸುತ್ತಿರಲು ಕಾರಣ ಮುಂದಿನ ಬಾರಿ ನೀನು ಪಾಸ್ ಆಗುವುದಿಲ್ಲ ಎಂದು ಹೇಳಿದ್ದೀರಿ. ಆದರೆ ಇಂದು ನಾನು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಕೂಡ ಪಾಸ್ ಮಾಡಿದ್ದೇನೆ” ಎಂದು ದೀರ್ಘವಾಗಿ ಬರೆದು, “ದಯವಿಟ್ಟು ಮುಂದಿನ ಬಾರಿ ವಿದ್ಯಾರ್ಥಿಗಳೊಂದಿಗೆ ದಯೆ ತೋರಲು ಮರೆಯದಿರಿ” ಎಂದು ಮನವಿ ಮಾಡಿದ್ದಾಳೆ.ಇದೀಗ ವಿದ್ಯಾರ್ಥಿನಿ ಶಿಕ್ಷಕಿ ಕಳುಹಿಸಿರುವ ವಾಟ್ಸ್ಆ್ಯಪ್ ಮೆಸೇಜ್ ಎಲ್ಲಾ ಕಡೆ ಸಕತ್ ವೈರಲ್ ಆಗುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
