fbpx
ಸಮಾಚಾರ

ಇನ್ಮುಂದೆ 17 ವರ್ಷ ಮೇಲ್ಪಟ್ಟವರು ಸಹ ವೋಟರ್ ID ಗೆ ಅರ್ಜಿಯನ್ನು ಸಲ್ಲಿಸಬಹುದು! ಮಾಹಿತಿ ಹೊರಡಿಸಿದ ಚುನಾವಣೆ ಆಯೋಗ

ದೇಶದ ಪ್ರಜೆಗಳು ಮತದಾನ ಮಾಡಲು ಕನಿಷ್ಠ 18 ವರ್ಷ ತುಂಬಿರಬೇಕು. ಇದು ಕಾನೂನು. ಆದರೆ ಇನ್ನು ಮುಂದೆ ನೀವು 17 ವರ್ಷ ತುಂಬಿದ ನಂತರ ಮತದಾರರ ಚೀಟಿ ಪಡೆಯಲು ಅರ್ಜಿಯನ್ನು ಸಲ್ಲಿಸಬಹುದು ಎಂದು ಭಾರತದ ಚುನಾವನ್ ಆಯೋಗ ತಿಳಿಸಿದೆ.

ಈ ಹಿಂದೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಬೇಕೆಂದರೆ ನೀವು ಕನಿಷ್ಠ 18 ವರ್ಷ ತುಂಬಿರಬೇಕಿತ್ತು. ಆದರೆ ಇನ್ನುಮುಂದೆ ನೀವು 17 ವರ್ಷ ತುಂಬಿದ ನಂತರ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಬಹುದು.

ಪ್ರತಿ ವರ್ಷ ಜನವರಿ 1 ನೇ ತಾರೀಕು ತಾವು 18 ವರ್ಷ ತಲುಪವರೆಗೂ ಕಾಯಬೇಕಾದ ಅನಿವಾರ್ಯ ವಿಲ್ಲಾ. ತಮಗೆ ಜನವರಿ 1 ರಂದು 17 ವರ್ಷ ತುಂಬಿದರೆ ತಾವು ನೇರವಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಲು ಅರ್ಜಿಯನ್ನು ಸಲ್ಲಿಸಬಹುದು. ಇದನ್ನು ಸುಲಭ ಗೊಳಿಸಲು ಮುಖ್ಯ ಚುನಾವಣಾ ಆಯುಕ್ತ (CES) ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತ ಅನುಪ್ ಚಂದ್ರ ಪಾಂಡೆ ನೇತೃತ್ವದ ಚುನಾವಣಾ ಸಂಸ್ಥೆಯು ಎಲ್ಲಾ ರಾಜ್ಯಗಳ ಸಿಇಒಗಳು /ERO/ AEROಗಳು ಯುವಜನರು ತಮ್ಮ ಮುಂಗಡ ಅರ್ಜಿಗಳನ್ನು ಸಲ್ಲಿಸಲು ಸಹಾಯ ಮಾಡುವ ತಂತ್ರಜ್ಞಾನದ ಬಗ್ಗೆ ಕೆಲಸ ಮಾಡಲು ಸೂಚಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top