ಸಮಂತಾ ಮತ್ತು ನಾಗಚೈತನ್ಯ ಜೋಡಿ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ತಾವಿಬ್ಬರು ದೂರವಾಗುತ್ತಿರುವ ಕುರಿತು ಮಾಹಿತಿ ನೀಡಿದರು. ವಿಚೇದನ ನಂತರ ಕೂಡ ಈ ಜೋಡಿಗಳು ಸುದ್ದಿಯಲ್ಲಿದ್ದರು. ಇದೀಗ ಇವರಿಬ್ಬರ ಕುರಿತು ಮತ್ತೊಂದು ಸುದ್ದಿ ಹರಿದಾಡುತ್ತಿದ್ದು, ಅದೇನೆಂದರೆ ಈ ಜೋಡಿ ಒಟ್ಟಿಗೆ ಇದ್ದ ಮನೆಯನ್ನು ಸಮಂತಾ ಮೂಲ ಬೆಲೆಗಿಂತ ಅಧಿಕ ಹಣ ಕೊಟ್ಟು ಮತ್ತೆ ಖರೀದಿಸಿದ್ದಾರೆ ಎಂದು. ಈ ಬಗ್ಗೆ ಹಿರಿಯ ನಟ ಮತ್ತು ನಿರ್ಮಾಪಕ ಮುರಳಿ ಮೋಹನ್ ಅವರು ಬಹಿರಂಗ ಪಡಿಸಿದ್ದು, ಈ ವಿಡಿಯೋ ಇದೀಗ ಸಕತ್ ವೈರಲ್ ಆಗುತ್ತಿದೆ.
An Eye Opener for #Nagachaitanya Fans From MuraliMohan Garu@Samanthaprabhu2 Bought the Same House Again After Divorce With Her Own Money by Giving extra Profit to owners they sold
The House is Owned By #SamanthaRuthPrabhu
Inkosari #Samantha ki free ga iccharu ante pagiliddhi pic.twitter.com/2s6wywrRCB
— Sai Sunil Reddy (@SaiSunil452) July 28, 2022
ವಿವಾಹವಾದ ನಂತರ ನಾಗಚೈತನ್ಯ ಮತ್ತು ಸಮಂತಾ ಒಟ್ಟಿಗೆ ನೆಲೆಸಿದ್ದರು. ಆದರೆ ಇವರ ವಿಚ್ಚೇದನದ ನಂತರ ಇವರಿಬ್ಬರು ಪ್ರತ್ಯೇಕ ವಾಸ ಮಾಡುತ್ತಿದ್ದರು. ಇದರಿಂದ ಮನೆಯ ಮೈಕರು ಈ ಮನೆಯನ್ನು ಬೇರೆಯವರಿಗೆ ಮಾರಿದ್ದರು. ಆದರೆ ಇದೀಗ ಸಮಂತಾ ಅವರಿಗೆ ತಾವು ಪತಿ ಜೊತೆ ವಾಸವಾಗಿದ್ದ ಮನೆಯ ಮೇಲೆ ವ್ಯಾಮೋಹ ಬೆಳೆದು ಅದನ್ನು ಮತ್ತೆ ಖರೀದಿಸಲು ಮುಂದಾಗುತ್ತಾರೆ.
ಆದರೆ ಮಾಲೀಕರು ಅದನ್ನು ಬೇರೆಯವರಿಗೆ ಮಾರಿದ್ದ ಕಾರಣ ಅದನ್ನು ಸಮಂತಾ ಅವರಿಗೆ ಹಿಂದಿರುಗಿಸಲು ನಿರಾಕರಿಸಿದ್ದಾಗ ಸಮಂತಾ ಇದೀಗ ದುಬಾರಿ ಬೆಲೆ ತೆರೆದು ಆ ಮನೆಯನ್ನು ಮತ್ತೆ ಖರೀದಿ ಮಾಡಿದ್ದಾರೆ. ಇದೀಗ ಸಮಂತಾ ತಮ್ಮ ತಾಯಿಯ ಜೊತೆ ಈ ಹಿಂದೆ ಅಂದರೆ ನಾಗಚೈತನ್ಯ ಜೊತೆ ಇದ್ದ ಮನೆಯಲ್ಲಿ ವಾಸಮಾಡುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
