ನಮಗೆ ಏನೇ ಕಷ್ಟ ಬಂದರು ನಾವು ದೇವರ ಮೊರೆ ಹೋಗುತ್ತೇವೆ. ಇಲ್ಲವೆಂದರೆ ಭೂಮಿಯಲ್ಲಿ ದೇವರ ರೂಪದಲ್ಲಿರುವ ವ್ಯಕ್ತಿಗಳ ಸಹಾಯ ಬೇಡುತ್ತೇವೆ. ಅಂತಹ ವ್ಯಕ್ತಿಗಳಲ್ಲಿ ಪೊಲೀಸರು ಕೂಡ ಒಬ್ಬರು. ಆದರೆ ನಮ್ಮನ್ನು ರಕ್ಷಿಸುವ ಪೊಲೀಸರೇ ಅರಕ್ಷರಾದರೆ ನಾವು ಏನು ಮಾಡೋದು. ನಾವು ಈ ರೀತಿ ಹೇಳಲು ಮುಖ್ಯ ಕಾರಣ ಮಧ್ಯಪ್ರದೇಶದ ರೈಲ್ವೆ ನಿಲ್ದಾಣದಲ್ಲಿ ನಡೆದ ಒಂದು ಘಟನೆ.
ಮಧ್ಯಪ್ರದೇಶದ ಜಬಲ್‌ಪುರದ ರೈಲು ನಿಲ್ದಾಣದಲ್ಲಿ ವೃದ್ಧನೋರ್ವನಿಗೆ ಕಾನ್ಸ್‌ಸ್ಟೇಬಲ್ ಅಮಾನವೀಯವಾಗಿ ಥಳಿಸಿದ ಘಟನೆ ನಡೆದಿದೆ. ರೈಲ್ವೆ ನಿಲ್ದಾಣದಲ್ಲಿದ್ದ ಇತರೆ ಪ್ರಯಾಣಿಕರು ಈ ವಿಡಿಯೋವನ್ನು ತಮ್ಮ ಮೊಬೈಲ್ ಗಳಲ್ಲಿ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಕತ್ ವೈರಲ್ ಆಗಿದ್ದು, ಕಾನ್ಸ್‌ಸ್ಟೇಬಲ್ ನನ್ನು ಅಮಾನತುಗೊಳಿಸಬೇಕೆಂದು ಜನರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
Policeman beating one senior citizen @drmjabalpur @crpfindia @RailMinIndia take a look and i hope u take appropriate action pic.twitter.com/6WdE12uxmc
— Siddharth Jain (@ja_siddharth) July 28, 2022
ಈ ವಿಡಿಯೋವನ್ನು ಗಮನಿಸಿದರೆ ಕಾನ್ಸ್‌ಸ್ಟೇಬಲ್ ವೃದ್ಧನೋರ್ವನಿಗೆ ಮನಬಂದಂತೆ ತನ್ನ ಬೂಟು ಕಾಲಿನಿಂದ ಥಳಿಸುತ್ತಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಈತ ಇವನನ್ನು ರೈಲ್ವೆ ಹಳಿಯ ಬಳಿ ಕರೆದುಕೊಂಡು ಹೋಗಿ ಆತನ ಎರಡು ಕಾಲುಗಳನ್ನು ಹಿಡಿದು ಫ್ಲಾಟ್‌ಫಾರ್ಮ್‌ನಲ್ಲಿ ನಿಂತುಕೊಂಡು ಹಳಿಯ ಮೇಲೆ ಆತನನ್ನು ನೇತಾಡಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅಲ್ಲಿಯೇ ಸುತ್ತ ಮುತ್ತ ಇದ್ದ ಜನರು ಈ ವೃದ್ಧನ ರಕ್ಷಣೆಗೆ ಬರಲೇ ಇಲ್ಲ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು, ಪೇದೆಯನ್ನು ಆದಷ್ಟು ಬೇಗ ಸೇವೆಯಿಂದ ವಜಾ ಗೊಳಿಸಬೇಕೆಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
