ಇತ್ತೀಚೆಗೆ ದೇಶದಲ್ಲಿ ಬೆಲೆ ಏರಿಕೆಯ ಬಿಸಿ ಪ್ರತಿಯೊಂದು ವರ್ಗದ ಜನರನ್ನು ತಟ್ಟುತ್ತಿದೆ. ಆದರೆ ಇದೆ ಮೊದಲ ಬಾರಿ 6 ವರ್ಷದ ಪುಟ್ಟ ಮಗುವಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಬೆಲೆ ಏರಿಕೆಯಿಂದ ತನಗಾಗುತ್ತಿರುವ ಕಷ್ಟದ ಕುರಿತು ಬಾಲಕಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾಳೆ.
Six-year-old girl of Class 1 has written a letter to PM Modi about hardship she is facing due to price rise. The girl, Kriti Dubey, of Chhibramau town in UP's Kannauj,wrote in her letter, "My name is Kriti Dubey.I study in class 1.Modiji, you have caused immense price rise. pic.twitter.com/vj9o9TZuZf
— Aroone Harry (@arunharimowar) August 1, 2022
ಹಿಂದಿಯಲ್ಲಿ ಪತ್ರ ಬರೆದಿರುವ ಉತ್ತರ ಪ್ರದೇಶದ ಕನ್ನೂಜ್ ಜಿಲ್ಲೆಯ ಕೃತಿ ದುಬೆ ಎಂಬ 6 ವರ್ಷದ ಬಾಲಕಿ ” ನನ್ನ ಹೆಸರು ಕೃತಿ ದುಬೆ. ನಾನು ಒಂದನೇ ತರಗತಿಯಲ್ಲಿ ಓದುತ್ತಿದ್ದೇನೆ. ನಿಮ್ಮ ಸರ್ಕಾರ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿದೆ. ಪೆನ್ಸಿಲ್, ರಬ್ಬರ್ ಗಳ ಬೆಲೆಯನ್ನು ಸಹ ಹೆಚ್ಚಳ ಮಾಡಿದ್ದೀರಾ. ಇದಲ್ಲದೆ ನಾನು ಇಷ್ಟ ಪಡುವ ಮ್ಯಾಗಿ ಬೆಲೆಯೂ ಏರಿಕೆಯಾಗಿದೆ. ಇದರಿಂದಾಗಿ ನಾನು ಪೆನ್ಸಿಲ್ ಬೇಕು ಎಂದು ಕೇಳಿದರೆ ನನ್ನ ಅಮ್ಮ ನನಗೆ ಹೊಡೆಯುತ್ತಾಳೆ. ನಾನು ಏನು ಮಾಡಬೇಕು? ಶಾಲೆಯಲ್ಲಿ ನನ್ನ ಜೊತೆ ಕೂರುವವರು ನನ್ನ ಪೆನ್ಸಿಲ್ ಕದ್ದು ನನಗೆ ಅಮ್ಮನಿಂದ ಹೊಡೆಸುತ್ತಿದ್ದಾರೆ” ಎಂದು ಬರೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಪತ್ರದ ಕುರಿತು ಪ್ರತಿಕ್ರಿಯೆ ನೀಡಿದ ತಂದೆ ವಿಶಾಲ್ ದುಬೆ ” ನಾನು ವೃತಿಯಲ್ಲಿ ವಕೀಲನಾಗಿದ್ದೇನೆ. ಇದು ನನ್ನ ಮಗಳ ಮನ್ ಕಿ ಬಾತ್. ಆಕೆ ಶಾಲೆಯಲ್ಲಿ ಪೆನ್ಸಿಲ್ ಕಳೆದುಕೊಂಡು ಬಂದು, ಹೊಸ ಪೆನ್ಸಿಲ್ ಕೇಳಿದ್ದಕ್ಕೆ ಆಕೆಯ ಅಮ್ಮ ಅವಳಿಗೆ ಹೊಡೆದಿದ್ದಳು. ಇದರಿಂದ ಬೇಸರಗೊಂಡು ಆಕೆ ಈ ಪತ್ರ ಬರೆದಿದ್ದಾಳೆ ” ಎಂದು ಹೇಳಿದರು. ಇದೀಗ ಈ ಮಗು ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
