ನೀನಾಸಂ ಸತೀಶ್ ನಟನೆಯ ಮತ್ತು ವಿಜಯ್ ಪ್ರಸಾದ್ ನಿರ್ದೇಶನದಿಂದ ಮೂಡಿಬಂದಿರುವ ಸಿನಿಮಾವೆಂದರೆ ಅದು ಪೆಟ್ರೋಮ್ಯಾಕ್ಸ್. ಈ ಸಿನಿಮಾ ರಾಜ್ಯದಂತ ಜುಲೈ 15 ರಂದು ಬಿಡುಗಡೆಯಾಗಿತ್ತು. ಆದರೆ ಈ ಸಿನಿಮಾ ಬಿಡುಗಡೆಯಾಗಿ ನಿರೀಕ್ಷೆಯ ಮಟ್ಟ ತಲುಪಿರಲಿಲ್ಲ. ಹೀಗಾಗಿ ಸಿನಿಮಾ ಸೋಲು ಅನುಭವಿಸಿರುವ ಕಾರಣ ಸಿನಿಮಾದ ನಿರ್ದೇಶಕ ವಿಜಯ್ ಪ್ರಸಾದ್ ಟ್ವೀಟ್ ಮೂಲಕ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ನಮ್ಮ ಪೆಟ್ರೋಮ್ಯಾಕ್ಸ್ ಚಿತ್ರ ನಾವು ಅಂದುಕೊಂಡಂತೆ ಎಲ್ಲರನ್ನೂ ತಲುಪಲು ಆಗಲಿಲ್ಲ..! ಅದಕ್ಕೆ ಕಾರಣ ಖಂಡಿತವಾಗಿಯೂ ನೀವಂತೂ ಅಲ್ಲವೇ ಅಲ್ಲ ಹಾಗೆ ನಮ್ಮ ಚಿತ್ರತಂಡದ ಯಾರೋಬ್ಬರೂ ಅಲ್ಲ…! ಇದಕ್ಕೆ ಕಾರಣ ನಾನೋಬ್ಬನೇ..! ಕ್ಷಮೆ ಇರಲಿ 🙏 pic.twitter.com/nSGlzLtkkj
— M.C.Vijayaprasad (@Vijayaprasad72) July 31, 2022
ರಿಲೀಸ್ ಆಗಿ ಕೇವಲ 15 ದಿನಗಳು ಕಳೆದಿದೆ. ಅಷ್ಟರಲ್ಲೇ ಸಿನಿಮಾದ ನಿರ್ದೇಶಕರಾದ ವಿಜಯ್ ಪ್ರಸಾದ್ ಸಿನಿಮಾದ ಸೋಲಿನ ಹೊಣೆಯನ್ನು ತಮ್ಮ ಮೇಲೆ ಹಾಕಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ವಿಜಯ್ “ನಮ್ಮ ಪೆಟ್ರೋಮ್ಯಾಕ್ಸ್ ಚಿತ್ರ ನಾವು ಅಂದುಕೊಂಡಂತೆ ಎಲ್ಲರನ್ನೂ ತಲುಪಲು ಆಗಲಿಲ್ಲ! ಅದಕ್ಕೆ ಕಾರಣ ಖಂಡಿತವಾಗಿಯೂ ನೀವಂತೂ ಅಲ್ಲವೇ ಅಲ್ಲ ಹಾಗೆ ನಮ್ಮ ಚಿತ್ರತಂಡದ ಯಾರೋಬ್ಬರೂ ಅಲ್ಲ! ಇದಕ್ಕೆ ಕಾರಣ ನಾನೋಬ್ಬನೇ! ಕ್ಷಮೆ ಇರಲಿ” ಎಂದು ಟ್ವೀಟ್ ಮಾಡಿದ್ದಾರೆ.
ನೀರ್ ದೋಸೆ ನಂತರ ವಿಜಯ್ ಕೈಗೆತ್ತುಕೊಂಡಿದ್ದ ಸಿನಿಮಾ ಎಂದರೆ ಅದು ಪೆಟ್ರೋಮ್ಯಾಕ್ಸ್. ಈ ಸಿನಿಮಾದಲ್ಲಿ ನೀನಾಸಂ ಸತೀಶ್ ನಾಯಕನಾಗಿ ನಟಿಸಿದ್ದಾರೆ. ಇವರ ಜೊತೆ ಹರಿಪ್ರಿಯಾ ನಾಯಕಿಯಾಗಿ ನಟಿಸಿದ್ದಾರೆ. ಇದಲ್ಲದೆ ಬಿಗ್ ಬಾಸ್ ಖ್ಯಾತಿಯ ಕಾರುಣ್ಯ ರಾಮ್, ಗೊಂಬೆಗಳ ಲವ್ ಅರುಣ್, ಇಕ್ಕಟ್, ಮೇಡ್ ಇನ್ ಚೈನಾ ಸಿನಿಮಾ ಖ್ಯಾತಿಯ ನಾಗಭೂಷಣ್ ಮುಂತಾದವರು ನಟಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
