ಪೋಷಕರು ತಮ್ಮ ಮಕ್ಕಳು ಶಾಲೆಯಲ್ಲಿ ಕಲಿತು ಸಮಾಜದಲ್ಲಿ ದೊಡ್ಡ ಮಟ್ಟಕ್ಕೆ ಹೆಸರು ಮಾಡಬೇಕು ಎಂಬ ಆಸೆಯನ್ನು ಒಂದಿರುತ್ತಾರೆ. ಅದರಂತೆ ಕಷ್ಟ ಪಟ್ಟು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಆದರೆ ಶಾಲೆಯ ಆಡಳಿತ ಮಂಡಳಿ ಮಾತ್ರ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಬದಲು ಅವರ ಕೈಯಲ್ಲಿ ಕೂಲಿ ಕಾರ್ಮಿಕರು ಮಾಡುವ ಕೆಲಸವನ್ನು ಮಾಡಿಸುತ್ತಿದ್ದಾರೆ. ಇದೀಗ ಮಕ್ಕಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
#Bihar | This is from a government school in Jehanabad, Bihar, where children were made to do labour work like digging, picking bricks and cutting woods. pic.twitter.com/5PJpDKezCz
— The Second Angle (@TheSecondAngle) July 30, 2022
ಈ ಘಟನೆ ನಡೆದಿರುವುದು ಬಿಹಾರದ ಸರ್ಕಾರಿ ಶಾಲೆ ಒಂದರಲ್ಲಿ. ಶಾಲೆಯ ವಿದ್ಯಾರ್ಥಿಗಳು ಪಾಠ ಕಲಿಯುವ ಬದಲು ಮರದ ಕೆಲಸ ಮಾಡುವುದು, ಕಲ್ಲುಗಳನ್ನು ಕಟ್ ಮಾಡುವುದು, ಮಣ್ಣನ್ನು ಹೊತ್ತುವುದು ಹೀಗೆ ಹತ್ತು ಹಲವಾರು ಕೆಲಸಗಳನ್ನು ಮಾಡುತ್ತಿದ್ದಾರೆ. ಮಕ್ಕಳು ಕೆಲಸ ಮಾಡುವ ವಿಡಿಯೋ ಇದೀಗ ಸಕತ್ ವೈರಲ್ ಆಗುತ್ತಿದ್ದು, ಬಾಲಕಾರ್ಮಿಕ ವಿರೋಧಿ ಕಾನೂನಿನ ಅಡಿ ಇದಕ್ಕೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಲಾಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜೆಹಾನಾಬಾದ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ರಿಚಿ ಪಾಂಡೆ “ಈಗಾಗಲೇ ಈ ವಿಷಯ ತಮಗೆ ತಿಳಿದಿತ್ತು ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಸಂಬಂಧಪಟ್ಟ ಶಾಲೆಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಇದಲ್ಲದೆ ಈಗಾಗಲೇ ನಾವು ಶುಕ್ರವಾರ ಕಾಕೋ ಬ್ಲಾಕ್‌ನ ಇಸ್ಲಾಂಪುರ ಪಂಚಾಯತ್‌ನಲ್ಲಿರುವ ಈ ಶಾಲೆಗೆ ಭೇಟಿ ನೀಡಿದ್ದೇವೆ. ಶಾಲೆಯ ನಿರ್ವಹಣೆ ತೀರಾ ಕಳಪೆ ಇಂದ ಕೂಡಿದ್ದು, ಅಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕೂಡ ಕಡಿಮೆ ಇದೆ” ಎಂದು ಅವರು ತಿಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
