ಪ್ರತಿಯೊಬ್ಬರಿಗೂ ಜೀವನದಲ್ಲಿ ತಮಗೆ ಇಷ್ಟವಾದ ಗಾಡಿ ತೊಗೊಳಬೇಕೆಂಬ ಅಸೆ ಇರುತ್ತದೆ. ಅದಕ್ಕಾಗಿ ಬಹಳಷ್ಟು ಶ್ರಮ ಕೂಡ ಪಡುತ್ತಾರೆ. ಅದರಂತೆ ಇದೀಗ ಅಶೋಕ್ ಕುಮಾರ್ ಎಂಬ ವ್ಯಕ್ತಿ ತಾನು ಹತ್ತು ವರ್ಷಗಳ ಕಠಿಣ ಪರಿಶ್ರಮದಿಂದ ಬಂದ ಹಣದಿಂದ SUV ಕಾರೊಂದನ್ನು ಖರೀದಿಸಿದ್ದು ಅದನ್ನು ಮಹಿಂದ್ರಾ ಸಂಸ್ಥೆಯ ಚೇರ್ಮನ್ ಆನಂದ್ ಮಹೀಂದ್ರಾ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಅಶೋಕ್ ಕುಮಾರ್ ಎಂಬುಕ ವ್ಯಕ್ತಿ ತಾನು ಹತ್ತು ವರ್ಷಗಳ ಕಠಿಣ ಪರಿಶ್ರಮದಿಂದ ಬಂದ ಹಣವನ್ನು ಕೂಡಿಕೊಂಡು ಮಹೇಂದ್ರ XUV 700 ಬಿಳಿ ಬಣ್ಣದ ಕಾರೊಂದನ್ನು ಖರೀದಿಸಿದ್ದಾರೆ. ಈ ಕಾರನ್ನು ಖರೀದಿಸದ ಬಳಿಕ ಇದರ ಜೊತೆ ಫೋಟೋ ಇಡಿಸಿಕೊಂಡ ವ್ಯಕ್ತಿ “10 ವರ್ಷಗಳ ಕಠಿಣ ಶ್ರಮದ ಬಳಿಕ, ನಾನು ಮಹೀಂದ್ರಾ ಎಕ್ಸ್‌ಯುವಿ 700 ಕಾರ್‌ಅನ್ನು ಖರೀದಿ ಮಾಡಿದ್ದೇನೆ. ನನಗೆ ನಿಮ್ಮ ಆಶೀರ್ವಾದ ಬೇಕು’ ಎಂದು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಪೋಸ್ಟ್ ಅನ್ನು ಮಹಿಂದ್ರಾ ಸಂಸ್ಥೆಯ ಚೇರ್ಮನ್ ಆನಂದ್ ಮಹೀಂದ್ರಾ ಅವರಿಗೂ ಸಹ ಟ್ಯಾಗ್ ಮಾಡಿದ್ದಾರೆ.
Thank you, but it is YOU who have blessed us with your choice…Congratulatioms on your success that has come from hard work. Happy motoring. https://t.co/aZyuqOFIa8
— anand mahindra (@anandmahindra) August 2, 2022
ಸುಮಾರು ಎರಡು ದಿನಗಳ ಬಳಿಕ ಇವರ ಅಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ ಆನಂದ್ ಮಹೀಂದ್ರಾ “ಥ್ಯಾಂಕ್ ಯು. ಆದರೆ, ನಿಮ್ಮ ಆಯ್ಕೆಯ ಮೂಲಕ ನೀವು ನಮಗೆ ಆಶೀರ್ವಾದ ನೀಡಿದ್ದೀರಿ. ಕಠಿಣ ಪರಿಶ್ರಮದ ಮೂಲಕ ಬಂದ ನಿಮ್ಮ ಯಶಸ್ಸಿಗೆ ನಾನು ಧನ್ಯವಾದಗಳನ್ನು ಹೇಳುತ್ತೇನೆ. ಹ್ಯಾಪಿ ಮೋಟಾರಿಂಗ್’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದೀಗ ಆನಂದ್ ಮಹೀಂದ್ರಾ ಅವರ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು, ಹಲವಾರು ಜನರು ತಮ್ಮ ಖುಷಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಕಠಿಣ ಪರಿಶ್ರಮದಿಂದ ಏನನ್ನಾದರೂ ಸಾದಿಸಬಹುದು ಎಂಬುದಕ್ಕೆ ಸಣ್ಣ ಉದಾಹರಣೆ ಎಂದರೆ ಅದು ಅಶೋಕ್ ಕುಮಾರ್ ಅವರ ಸಾಧನೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
