ಸಮಾಜದಲ್ಲಿ ನಾವು ಮಾಡುವ ಸಣ್ಣ ಪುಟ್ಟ ಕೆಲಸಗಳು ಒಂದು ಕ್ಷಣ ನಮಗೆ ಗೊತ್ತಿಲ್ಲದ ರೀತಿಯಲ್ಲಿ ನಮಗೆ ಸಹಾಯಕವಾಗುತ್ತದೆ. ಇದಕ್ಕೆ ಸಣ್ಣ ಉದಾಹರಣೆ ಎಂದರೆ ದುಬೈ ನಗರದಲ್ಲಿ ನಡೆದ ಒಂದು ಘಟನೆ.
ದುಬೈ ಅತ್ಯಂತ ಬ್ಯುಸಿ ಆದ ನಗರ. ಈ ನಗರದಲ್ಲಿ ಪ್ರತಿನಿತ್ಯ ಸಾವಿರಾರು ಗಾಡಿಗಳು ಸಂಚರಿಸುತ್ತಿರುತ್ತವೆ. ಇದೆ ವೇಳೆ ಒಂದು ಬದಿಯಲ್ಲಿ ನಿಂತಿದ್ದ ಡೆಲಿವರಿ ಬಾಯ್ ಕಣ್ಣಿಗೆ ರಸ್ತೆಯ ಮೇಲೆ ಬಿದ್ದಿದ್ದ ಇಟ್ಟಿಗೆ ಕಲ್ಲು ಕಾಣುತ್ತದೆ. ತಕ್ಷಣವೇ ತನ್ನ ಗಾಡಿ ಇಂದ ಇಳಿದ ಈತ ಆ ಕಲ್ಲನ್ನು ತೆಗೆಯಲು ಯೋಚಿಸುತ್ತಾನೆ. ಆದರೆ ವಿಪರೀತ ಗಾಡಿಗಳು ಬರುತ್ತಿದ್ದ ಕಾರಣ ಅದನ್ನು ತೆಗೆಯಲು ಸಾಧ್ಯವಾಗಲಿಲ್ಲ. ನಂತರ ಗಾಡಿಗಳು ಕಡಿಮೆಯಾದ ನಂತರ ಆ ಕಲ್ಲನ್ನು ತೆಗೆದು ಮತ್ತೊಂದು ಬದಿಗೆ ಇಡುತ್ತಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದೆ. ಸದಾ ವಾಹನದಿಂದ ಬ್ಯುಸಿ ಆಗುತ್ತಿರುವ ದುಬೈ ನಗರದಲ್ಲಿ ಈ ರೀತಿ ಇಟ್ಟಿಗೆ ಬಿದ್ದು ವಾಹನಗಳು ಅಪಘಾತವಾಗುವ ಸಾಧ್ಯತೆಗಳು ಹೆಚ್ಚಿದ್ದನು. ಅದನ್ನು ತಡೆಯುವ ಸಲುವಾಗಿ ಯುವಕ ಈ ಕೆಲಸವನ್ನು ಮಾಡಿದ್ದಾನೆ. ಇದೀಗ ಯುವಕನ ಈ ಸಾಧನೆಗೆ ಹಲವಾರು ಜನರು ಪ್ರಶಂಸೆಯನ್ನು ಸಹ ವ್ಯಕ್ತಪಡಿಸಿದ್ದು, ಇದಕ್ಕಿಂತ ಹೆಚ್ಚಾಗಿ ದುಬೈ ರಾಜಕುಮಾರ ಹಮಾದನ್ ಬಿನ್ ಮೊಹಮ್ಮದ್ ಟ್ವೀಟ್ ಮೂಲಕ ತಮ್ಮ ಪ್ರಶಂಸೆಯನ್ನು ಹಂಚಿಕೊಂಡಿದ್ದಾರೆ.
An act of goodness in Dubai to be praised. Can someone point me to this man? pic.twitter.com/clEIWQQe3A
— Hamdan bin Mohammed (@HamdanMohammed) July 31, 2022
ಟ್ವೀಟ್ ಮೂಲಕ ಪ್ರಶಂಸೆ ವ್ಯಕ್ತಪಡಿಸಿರುವ ದುಬೈ ರಾಜಕುಮಾರ ಹಮಾದನ್ ಬಿನ್ ಮೊಹಮ್ಮದ್ “ದುಬೈನಲ್ಲಿ ನಡೆದ ಒಂದು ಒಳ್ಳೆ ಕಾರ್ಯವನ್ನು ಪ್ರಶಂಸಿಸಬೇಕಾದಿದೆ. ಯಾರಾದರೂ ಈ ವ್ಯಕ್ತಿಯನ್ನು ಗುರುತಿಸಿ ಹೇಳಬಹುದೇ” ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ಈ ಫುಡ್ ಡೆಲಿವರಿ ಬಾಯ್‌ಗೆ ಹುಡುಕಾಟ ಆರಂಭಗೊಂಡಿತ್ತು. ಕೊನೆಗೂ ಫುಡ್ ಡೆಲಿವರಿ ಬಾಯ್ ಪತ್ತೆ ಹಚ್ಚಿ ದುಬೈ ರಾಜಕುಮಾರನಿಗ ಮಾಹಿತಿ ನೀಡಲಾಯಿತು. ಮರುಕ್ಷಣ ಫುಡ್ ಡೆಲಿವರಿ ಬಾಯ್ ಅಬ್ದುಲ್ ಗಫೂರ್‌ಗೆ ಕರೆ ಮಾಡಿ ರಾಜ್ ಕುಮಾರ ಧನ್ಯವಾದವನ್ನು ತಿಳಿಸಿದ್ದು, ಶೀಘ್ರದಲ್ಲೇ ಭೇಟಿಯಾಗುವ ಭರವಸೆಯನ್ನು ಸಹ ನೀಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
