fbpx
ಸಮಾಚಾರ

ಅಂದು ಕಸ ಗುಡಿಸುವ ಕೆಲಸಕ್ಕೆ ಸೇರಿಕೊಂಡ ಮಹಿಳೆ ಇದೀಗ ಅದೇ ಬ್ಯಾಂಕಿನ ಉನ್ನತ ಅಧಿಕಾರಿ! ಇಲ್ಲಿದೆ ಇದರ ಕುರಿತು ಒಂದು ಇಂಟೆರೆಸ್ಟಿಂಗ್ ಕಥೆ

ಅದೃಷ್ಟ ಎಂಬುದು ಯಾವಾಗ ಯಾರ ಕೈ ಇಡಿಯುತ್ತದೆ ಎಂಬುದು ಹೇಳಲು ಸಾಧ್ಯವಿಲ್ಲ. ಇಂದು ಕೆಳ ಹಂತದ ನೌಕರ ನಾಳೆ ಉತ್ತಮ ಹಂತಕ್ಕೆ ತಲುಪಬಹುದು. ಹಾಗೆ ಉತ್ತಮ ಹಂತದಲ್ಲಿರುವ ವ್ಯಕ್ತಿ ಕೆಳ ಹಂತಕ್ಕೂ ಸಹ ತಲುಪಬಬಹುದು. ಹೀಗಾಗಿ ಪ್ರತಿಯೊಬ್ಬರ ಜೀವನದಲ್ಲೂ ಅದೃಷ್ಟ ಎಂಬುದು ಒಂದಲ್ಲ ಒಂದು ಹಂತದಲ್ಲಿ ಕೈ ಇಡಿಯುತ್ತದೆ. ಇದೆ ರೀತಿ ಬ್ಯಾಂಕಿನಲ್ಲಿ ಕಸ ಗುಡಿಸುತ್ತಿದ್ದ ಮಹಿಳೆ ಇದೀಗ ಅದೇ ಬ್ಯಾಂಕಿನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿದ್ದಾರೆ.

ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆ ಒಂದರಲ್ಲಿ ಪುಣೆ ಮೂಲದ ಪ್ರತಿಕ್ಷಾ ತೊಂಡವಾಲಕರ್ ಎನ್ನುವವರು ಕಸ ಗುಡಿಸುವ ಕೆಲಸವನ್ನು ಮಾಡುತ್ತಿದ್ದರು. 37 ವರ್ಷದ ಹಿಂದೆ ಇದೆ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಗಂಡ ಅಪಘಾತದಲ್ಲಿ ಮೃತಪಟ್ಟ ಅನುಕಂಪದ ಮೇರೆಗೆ ಇವರಿಗೆ ಮುಂಬೈ ಎಸ್‌ಬಿಐ ಶಾಖೆ ಒಂದರಲ್ಲಿ ಕಸ ಗುಡಿಸುವುದು, ಟಾಯ್ಲೆಟ್ ಶುಚಿ ಮಾಡುವ ಕೆಲಸವನ್ನು ನೀಡಿದರು. ಇದಕ್ಕಾಗಿ ಇವರಿಗೆ ತಿಂಗಳಿಗೆ ₹65 ಸಂಬಳ ಸಿಗುತ್ತಿತ್ತು.

16 ವರ್ಷಕ್ಕೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಇವರು ದುರಾದೃಷ್ಟವಶಾತ್ 20 ನೇ ವಯಸ್ಸಿನಲ್ಲೇ ತಮ್ಮ ಪತಿಯನ್ನು ಕಳೆದುಕೊಂಡರು. ಹೀಗಾಗಿ ಮನೆಯ ಜೊತೆ ಮಕ್ಕಳ ಜವಾಬ್ದಾರಿ ಕೂಡ ಇವರ ಹೆಗಲ ಮೇಲೆ ಏರಿತು. ಇಷ್ಟೆಲ್ಲಾ ಕಷ್ಟ ಇದ್ದರು ಕೂಡ ಇವರಿಗೆ ಓದಿನ ಮೇಲೆ ಅಪಾರವಾದ ಆಸಕ್ತಿ ಇತ್ತು. ಇವರು ಕೆಲ್ಸದಲ್ಲಿ ತೋರಿಸುತ್ತಿರುವ ಶ್ರದ್ಧೆಯನ್ನು ಗಮನಿಸಿದ ಬ್ಯಾಂಕ್ ಸಿಬ್ಬಂದಿ ಇವರಿಗೆ 10 ನೇ ತರಗತಿ ಪರೀಕ್ಷೆ ಬರೆಯಲು ಹುರಿದುಂಬಿಸಿದರು. ಪರೀಕ್ಷೆ ಬರೆದ ಇವರು ಶೇ 60 ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು.

ಇದಾದ ನಂತರ ಇವರಿಗೆ ಅಟೆಂಡರ್ ಆಗಿ ಪ್ರೊಮೋಟ್ ಮಾಡಲಾಗಿತ್ತು. ಓದುವ ಛಲವನ್ನು ಬಿಡದ ಪ್ರತಿಕ್ಷಾ ಮುಂದೆ ದ್ವಿತೀಯ ಪಿಯಿ ಪರೀಕ್ಷೆಯಲ್ಲೂ ಸಹ ಉತ್ತೀರ್ಣರಾದರು. ಇದಾದ ಬಳಿಕ ಇವರಿಗೆ ಅದೇ ಬ್ಯಾಂಕ್‌ನಲ್ಲಿ ಕ್ಲರ್ಕ್ ಆಗಿ ಪ್ರೊಮೋಟ್ ಮಾಡಲಾಯಿತು.

ಹೀಗೆ ಒಂದೊಂದೇ ಮೆಟ್ಟಿಲನ್ನು ಹತ್ತಿಕೊಂಡು ಬಂದ ಪ್ರತಿಕ್ಷಾ 2004 ರಲ್ಲಿ ‘ಎಸ್‌ಬಿಐ ಟ್ರೈನಿ ಆಫೀಸರ್’ ಹುದ್ದೆ ಒಲಿಯಿತು. ಇದಾದ ಬಳಿಕ ಇದೀಗ ಇವರಿಗೆ ಕಳೆದ ಜೂನ್‌ನಲ್ಲಿ ಎಸ್‌ಬಿಐ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಆಗಿ ಭಡ್ತಿ ಪಡೆದು ಮಹತ್ವದ ಸಾಧನೆ ಮಾಡಿದ್ದಾರೆ.

ಇಷ್ಟೆಲ್ಲಾ ಸಾಧನೆಯನ್ನು ಮಾಡಿರುವ ಪ್ರತಿಕ್ಷಾ “ನಾನು ನನ್ನ ಜೀವನವನ್ನು ಹಿಂತಿರುಗಿ ನೋಡಿದಾಗ ಇಂತಹದೊಂದು ಸಾಧನೆ ನನ್ನಿಂದ ಸಾಧ್ಯವಿತ್ತೇ ಎಂದುಕೊಳ್ಳುತ್ತೇನೆ. ಆದರೆ, ಮಗನಿಗೋಸ್ಕರ ನಾನು ಪಟ್ಟ ಪರಿಶ್ರಮದಿಂದ ಹಾಗೂ ಕಷ್ಟಪಟ್ಟು ಮುಂದೆ ಬರಬೇಕು ಎಂದು ಈ ಹಂತಕ್ಕೆ ಬಂದಿದ್ದೇನೆ. ನಾವು ಮಾಡುವ ಕೆಲಸದಲ್ಲಿ ನಿಷ್ಠೆ, ಗುರಿ ತಲುಪುವ ಛಲ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top