fbpx
ಸಮಾಚಾರ

ರಶ್ಮಿಕಾ ನಟನೆಯ ಸೀತಾ ರಾಮಂ ಸಿನಿಮಾಗೆ ದೊಡ್ಡ ಹೊಡೆತ! ಹಲವು ದೇಶಗಳಲ್ಲಿ ಸಿನಿಮಾ ಬ್ಯಾನ್- ಕಾರಣವೇನು ಗೊತ್ತಾ?

ಸ್ಯಾಂಡಲ್ವುಡ್ ನ ಕ್ರಶ್ ರಶ್ಮಿಕಾ ಮಂದಣ್ಣ ಅವರು ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ್ ಮೂಲಕ ಶುರುವಾದ ಇವರ ಸಿನಿಮಾ ಜರ್ನಿ, ಇದೀಗ ಇತರೆ ಭಾಷೆಗಳಲ್ಲಿ ಸಹ ನಟಿಸುತ್ತಿದ್ದಾರೆ. ಇದೆ ತಿಂಗಳು (ಆಗಸ್ಟ್ 5) ರಶ್ಮಿಕಾ ನಟನೆಯ ‘ಸೀತಾ ರಾಮಂ’ ಸಿನಿಮಾ ಬಿಡುಗಡೆಯಾಗಲಿದೆ. ಆದರೆ ಕೆಲವು ದೇಶಗಳಲ್ಲಿ ಈ ಸಿನಿಮಾವನ್ನು ಬ್ಯಾನ್ ಮಾಡಲಾಗಿದ್ದು, ಇದು ರಶ್ಮಿಕಾ ಅಭಿಮಾನಿಗಳಿಗೆ ಬೇಸರವನ್ನು ಉಂಟುಮಾಡಿದೆ.

ರಶ್ಮಿಕಾ ಅಭಿನಯದ ‘ಸೀತಾ ರಾಮಂ’ ಸಿನಿಮಾ ಆಗಸ್ಟ್ 5 ರಂದು ಪ್ರಪಂಚಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾದ ಫಸ್ಟ್ ಲುಕ್ ಅನ್ನು ವೀಕ್ಷಿಸಿದರೆ ಇದರಲ್ಲಿ ರಶ್ಮಿಕಾ ಮುಸ್ಲಿಂ ಯುವತಿಯ ಪಾತ್ರ ನಿರ್ವಹಿಸುತ್ತಿರುವುದು ಕಂಡುಬರುತ್ತದೆ. ಆದರೆ ರಶ್ಮಿಕಾ ವಾರ ಈ ಲುಕ್ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಇದು ಕೆಲವು ದೇಶಗಳಲ್ಲಿ ಈ ಸಿನಿಮಾವನ್ನು ಬ್ಯಾನ್ ಮಾಡುವ ಹಂತಕ್ಕೆ ತಲುಪಿದೆ.

ಮುಸ್ಲಿಂ ಯುವತಿಯ ವೇಷದಲ್ಲಿರುವ ರಶ್ಮಿಕಾ ಕಂಡು ಕೆಲವರು ಈ ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುವಂತಹ ಅಂಶಗಳಿವೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಈ ಸಿನಿಮಾವನ್ನು ಅರಬ್​ ರಾಷ್ಟ್ರಗಳಲ್ಲಿ ನಿಷೇದಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ ಬಹ್ರೇನ್​, ಓಮನ್​, ಕುವೈತ್​, ಖತಾರ್​, ಸೌದಿ ಅರೇಬಿಯಾ ಮುಂತಾದ ರಾಷ್ಟ್ರಗಳಲ್ಲಿ ಸಿನಿಮಾವನ್ನು ವೀಕ್ಷಿಸಿದ ಸೆನ್ಸಾರ್​ ಮಂಡಳಿ ಸದಸ್ಯರ ಅಭಿಪ್ರಾಯದ ಮೇರೆಗೆ ಈ ಚಿತ್ರವನ್ನು ಬ್ಯಾನ್​ ಮಾಡಲಾಗಿದೆ. ಆದರೆ ಸಿನಿಮಾ ತಂಡ ಇದೀಗ ಮತ್ತೊಮ್ಮೆ ಸೆನ್ಸಾರ್ ಮಂಡಳಿಗೆ ಮನವಿ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಸಿನಿಮಾವನ್ನು ಹನು ರಾಘವಪುಡಿ ನಿರ್ದೇಶನ ಮಾಡಿದ್ದುಇದರಲ್ಲಿ ದುಲ್ಕರ್​ ಸಲ್ಮಾನ್​ ಅವರು ಮಿಲಿಟರಿ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ಒಂದು ವೇಳೆ ಈ ಸಿನಿಮಾ ಈ ದೇಶಗಳಲ್ಲಿ ಬ್ಯಾನ್ ಆದರೆ ಸಿನಿಮಾ ತಂಡಕ್ಕೆ ದೊಡ್ಡ ನಷ್ಟ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top