ಇಂದಿನಿಂದ ಬಿಗ್ ಬಾಸ್ OTT ಅಲ್ಲಿ ಪ್ರಸಾರವಾಗುತ್ತಿದೆ. ಬಿಗ್ ಬಾಸ್ ಶುರುವಾಗುತ್ತಿದೆ ಎಂದು ಜನಕ್ಕೆ ಗೊತ್ತಾದರೆ ಸಾಕು ಈ ಬಾರಿ ಮನೆ ಒಳಗೆ ಯಾರು ಹೋಗುತ್ತಾರೆ. ಈ ಬಾರಿಯ ಬಿಗ್ ಬಾಸ್ ಯಾವೆಲ್ಲ ವೈಶಿಷ್ಯತೆಯಿಂದ ಇಂದ ಕೂಡಿದೆ ಹೀಗೆ ಹತ್ತು ಹಲವಾರು ಪ್ರಶ್ನೆಗಳು ಜನರ ಮನಸಲ್ಲಿ ಮೂಡುವುದು ಸಹಜ. ಹೀಗಾಗಿ ಜನರು ತಮ್ಮದೇ ರೀತಿಯಲ್ಲಿ ಈ ಬಾರಿ ಮನೆಗೆ ಯಾವೆಲ್ಲ ಸೆಲೆಬ್ರಿಟಿಗಳು ಹೋಗಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದರು. ಆದರೆ ಇದಕ್ಕೆ ಈಗ ಉತ್ತರ ಸಿಕ್ಕಿದೆ.
ಈ ಬಾರಿ ಬಿಗ್ ಬಾಸ್ ಎರಡು ರೀತಿಯಲ್ಲಿ ಪ್ರಸಾರವಾಗುತ್ತಿದೆ. ಮೊದಲನೆಯದು OTT ಮುಕಾಂತರ. ಮತ್ತೊಂದು ರೆಗ್ಯುಲರ್ ಬಿಗ್ ಬಾಸ್. ಈ ಬಾರಿಯ OTT ಬಿಗ್ ಬಾಸ್ 24 ಘಂಟೆ ಲೈವ್ ಲಭ್ಯವಿದೆ. ಹಾಗಾಗಿ ಜನರು ಈ ಬಾರಿಯ ಬಿಗ್ ಬಾಸ್ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶಿಸುವ ಸೆಲೆಬ್ರಿಟಿಗಳು ಯಾರು ಗೊತ್ತಾ? ಈ ಪ್ರಶ್ನೆಗೆ ಉತ್ತರ ನಮ್ಮ ಬಳಿ ಇದೆ.
ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕಲಾವಿದರಾದ ಅಕ್ಷತಾ ಕುಕ್ಕಿ, ಸೋನು ಶ್ರೀನಿವಾಸ್ ಗೌಡ, ರಾಗಿಣಿ, ರಾಕೇಶ್ ಅಡಿಗ, ರೇಖಾ ದಾಸ್, ರಾಜಕೀಯದಲ್ಲಿ ಸಾಧನೆ ಮಾಡಿದ ಮುಖ್ಯಮಂತ್ರಿ ಚಂದ್ರು, ಕಲರ್ಸ್ ಕನ್ನಡ ವಾಹಿನಿಯ ಪುಟ್ಟ ಗೌರಿ ಮಾಡುವೆ ಖ್ಯಾತಿಯ ಸಾನ್ಯ ಐಯ್ಯರ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್, ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿರುವ ಸೋಮಣ್ಣ ಮಾಚೀಮಡ, ಕ್ರಿಕೆಟ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನಮ್ಮ ಹೆಮ್ಮೆಯ ವಿನಯ್ ಕುಮಾರ್ ಎಂದು ಹೇಳಲಾಗುತ್ತಿದೆ.
ಇದಕ್ಕಿಂತ ಹೆಚ್ಚಾಗಿ ಎಲ್ಲ ಕಡೆ ಹೆಚ್ಚು ಸುದ್ದಿ ಯಾಗುತ್ತಿರುವ ವಿಷಯವೆಂದರೆ ಮಂಗಳೂರಿನ ಕಾಫೀ ನಾಡು ಚಂದು ಬಿಗ್ ಬಾಸ್ OTT ಗೆ ಎಂಟ್ರಿ ಕೊಡಲಿದ್ದಾರೆ ಎಂದು. ತಮ್ಮ ಶೈಲಿಯಲ್ಲಿ ಹಲವಾರು ಜನರು ಮತ್ತು ಸೆಲೆಬ್ರಿಟಿಗಳಿಗೆ ಹುಟ್ಟು ಹಬ್ಬದ ಹಾಡನ್ನು ಹಾಡಿರುವ ಇವರು ಹಲವಾರು ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಹೀಗಾಗಿ ಇವರು ಸಹ ಬಿಗ್ ಬಾಸ್ ಮನೆ ಒಳಗೆ ಪ್ರವೇಶಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
