fbpx
ಸಮಾಚಾರ

ಆರ್ಯವರ್ಧನ್ ಗುರೂಜಿ ಅವರ ಒಟ್ಟು ಅಸ್ತಿ ಮೌಲ್ಯ ಎಷ್ಟು ಗೊತ್ತಾ? ಕೇಳಿ ಶಾಕ್ ಆದ ಸ್ಪರ್ಧಿಗಳು

ಬಿಗ್ ಬಾಸ್ OTT ಶುರುವಾಗಿದೆ. ಸೆಲೆಬ್ರಿಟಿಗಳು ಮನೆ ಒಳಗೆ ಪ್ರವೇಶಿಸಿದ್ದಾರೆ. ಅಭಿಮಾನಿಗಳಲ್ಲಿ ಕುತೂಹಲ ಕೂಡ ಹೆಚ್ಚಾಗಿದೆ. ಈ ಬಾರಿ ಬಿಗ್ ಬಾಸ್ ಯಾವೆಲ್ಲ ರೀತಿ ನಡೆಯುತ್ತಿದೆ ಎಂದು. ಇವೆಲ್ಲದರ ನಡುವೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಮೊದಲ ಟಾಸ್ಕ್ ನೀಡಿದ್ದು, ಇದರಲ್ಲಿ ಆರ್ಯವರ್ಧನ್ ಗುರೂಜಿ ಕೂಡ ಮಾತನಾಡಿದ್ದು, ಇವರ ಮಾತು ಕೇಳಿ ಒಂದು ಕ್ಷಣ ಸ್ಪರ್ಧಿಗಳು ಶಾಕ್ ಆಗಿದ್ದಾರೆ.

ಬಿಗ್ ಬಾಸ್ ತನ್ನ ಸ್ಪರ್ದಿಗಳಿಗೆ ನಾನು ಯಾರು? ಎಂಬ ಟಾಸ್ಕ್ ನೀಡಿದ್ದು, ಇದರಲ್ಲಿ ಆರ್ಯವರ್ಧನ್ ಗುರೂಜಿ ಕೂಡ ತಮ್ಮ ಜೀವನದ ಕುರಿತು ಮಾತನಾಡಿದ್ದರು. ಈ ವೇಳೆ ಗುರೂಜಿ ತಮ್ಮ ಆಸ್ತಿಯ ವಿಚಾರವನ್ನು ಬಹಿರಂಗವಾಗಿ ತಿಳಿಸಿದ್ದು, ಸ್ಪರ್ಧಿಗಳಿಗೆ ಒಂದು ಕ್ಷಣ ಶಾಕ್ ಆಗಿತ್ತು.

ಟಾಸ್ಕ್ ಶುರುವಾಗುತ್ತಿದಂತೆ ಗುರೂಜಿ ತಾವು ಜೀವನದಲ್ಲಿ ಎಂದಿಗೂ ಕೂಡ ಕಷ್ಟ ಪಟ್ಟಿರಲಿಲ್ಲ ಎಂದು ತಿಳಿಸಿದ್ದಾರೆ. ನಾನು ಎರಡು ಮೂರೂ ಸಲ ದೆವ್ವ ಕೂಡ ನೋಡಿದ್ದೀನಿ ಅದು ಕೂಡ ಸುಂದರವಾದ ದೆವ್ವ ಎಂದು ಹೇಳಿದ್ದಾರೆ. ಈ ಮಧ್ಯೆ ತಮ್ಮ ಆಸ್ತಿಯ ವಿಚಾರ ಹೇಳಿದ ಗುರೂಜಿ ನಮ್ಮದು ಒಟ್ಟು 40 ಎಕ್ರೆ ಜಮೀನು. ಬೇಲೂರು- ಹಾಸನ್ ಮಧ್ಯೆ ಇದ್ದು, ಸುತ್ತ ಕೆರೆಗಳಿವೆ. ಸುತ್ತಾ ಮುತ್ತಾ ಯಾವುದೇ ಮನೆಗಳಿಲ್ಲ. ಪ್ರತಿಯೊಬ್ಬರೂ ಸಿಟಿಯಲ್ಲಿ ಸಂಪಾದನೆ ಮಾಡಿ ಹಳ್ಳಿಗೆ ಹೋಗುತ್ತಾರೆ. ಆದರೆ ನಾವು ಹಳ್ಳಿಯಲ್ಲಿ ಇದ್ದು ಬೆಂಗಳೂರಿಗೆ ಬಂದಿದ್ದೇವೆ. ನನಗೆ ಹಳ್ಳಿಯಲ್ಲಿ ಇದ್ದು ಇದ್ದು ಬೇಜಾರು ಎಂದು ಹೇಳಿದರು.

ನಂತರ ಮುಂದುವರಿಸಿ ನಾನು ಯಾವುದೇ ಸುಳ್ಳನ್ನು ಹೇಳುತ್ತಿಲ್ಲ, ನಮ್ಮ ಪ್ರಾಪರ್ಟಿ ಮತ್ತು ನಮ್ಮ ಅಜ್ಜ ಅವರ ಪ್ರಾಪರ್ಟಿ ಏನೇ ಅಂದ್ರು ಹೆಚ್ಚು ಕಮ್ಮಿ 5000 ಕೋಟಿವರೆಗೂ ಇದೆ ಎಂದು ಹೇಳಿದ್ದಾರೆ. ಇದಕ್ಕಿದಂತೆ ಸ್ಪರ್ಧಿಗಳು ಒಂದು ಕ್ಷಣ ಶಾಕ್ ಆಗಿದ್ದು, ಬಿಗ್ ಬಾಸ್ ಗೆ ನೀವೇ ಹಣ ನೀಡಬಹುದು ಎಂದು ಹಾಸ್ಯ ಮಾಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top