fbpx
ಸಮಾಚಾರ

ಮೊದಲ ವಾರವೇ ಸೋನು ಗೌಡ ನಾಮಿನೇಟ್​; ಒಟ್ಟು 8 ಸ್ಪರ್ಧಿಗಳಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಹೋಗೋದು ಯಾರು?

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಷೋ ಎಂದೇ ಹೆಸರಾಗಿರುವ ಬಿಗ್ ಬಾಸ್ ಈ ಸಲ OTT ಶುರುವಾಗಿದೆ. ಸೆಲೆಬ್ರಿಟಿಗಳು ಮನೆ ಒಳಗೆ ಪ್ರವೇಶಿಸಿದ್ದಾರೆ. ಅಭಿಮಾನಿಗಳಲ್ಲಿ ಕುತೂಹಲ ಕೂಡ ಹೆಚ್ಚಾಗಿದೆ. ಈ ಬಾರಿ ಬಿಗ್ ಬಾಸ್ ಯಾವೆಲ್ಲ ರೀತಿ ನಡೆಯುತ್ತಿದೆ ಎಂದು. ಇದರ ಮಧ್ಯೆ ಇದೀಗ ಮೊದಲ ನಾಮಿನೇಷನ್ ಪ್ರಕ್ರಿಯೆ ಕೂಡ ಶುರುವಾಗಿದ್ದು, ಯಾವೆಲ್ಲ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ ಎಂದು ತಿಳಿದುಕೊಳ್ಳೋಣ ಬನ್ನಿ.

ಬಿಗ್ ಬಾಸ್ OTT ಶುರುವಾಗಿ ಎರಡು ದಿನಗಳು ಕಳೆದಿವೆ. ಎರಡು ದಿನ ಸ್ಪರ್ಧಿಗಳು ಮೋಜು ಮಾಸ್ತಿಯಿಂದ ಹಾಡುತ್ತಾ, ಕುಣಿಯುತ್ತಾ ಎಂಜಾಯ್ ಮಾಡಿದ್ದಾರೆ. ಆದರೆ ಇದೀಗ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದ್ದು, ಮನೆಯಲ್ಲಿ ಯಾರು ಇರಬೇಕು, ಯಾರು ಇರಬಾರದು ಎಂದು ಸ್ಪರ್ಧಿಗಳು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

 

 

ಇದೀಗ ಒಟ್ಟು 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ಇವರಲ್ಲಿ ಒಬ್ಬರು ಈ ವಾರ ಮನೆಯಿಂದ ಹೊರಗಡೆ ಹೋಗುತ್ತಾರೆ. ನಾಮಿನೇಟ್ ಆಗಿರುವ ಸ್ಪರ್ಧಿಗಳು ಯಾರು ಎಂದರೆ- ಸೋನು ಗೌಡ, ಸ್ಪೂರ್ತಿ ಗೌಡ, ಆರ್ಯವರ್ಧನ್, ಜಯಶ್ರೀ ಆರಾಧ್ಯ, ಜಸ್ವಂತ್, ನಂದಿನಿ, ಕಿರಣ್ ಯೋಗೇಶ್ವರ್, ಅಕ್ಷತಾ ಕುಕ್ಕಿ. ಇವರಲ್ಲಿ ಒಬ್ಬರು ಈ ವಾರ ಮನೆಯಿಂದ ಹೊರಗೆ ಬರುವ ಸಾಧ್ಯತೆಗಳು ಹೆಚ್ಚಿವೆ.

16ರಲ್ಲಿ 8 ಜನ ಸ್ಪರ್ಧಿಗಳು ಎಲಿಮಿನೇಷನ್ ಆದರೆ ಉಳಿದ 8 ಜನ ಈ ವಾರ ಸೇಫ್ ಆಗಿದ್ದಾರೆ. ಅರ್ಜುನ್​ ರಮೇಶ್​, ಸೋಮಣ್ಣ ಮಾಚಿಮಾಡ, ಸಾನ್ಯಾ ಐಯ್ಯರ್, ಚೈತ್ರಾ ಹಳ್ಳಿಕೇರಿ, ಲೋಕೇಶ್​, ಉದಯ್​ ಸೂರ್ಯ, ರೂಪೇಶ್​ ಶೆಟ್ಟಿ ಮತ್ತು ರಾಕೇಶ್​ ಅಡಿಗ ಸದ್ಯ ಸೇಫ್ ಆಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top