fbpx
ಸಮಾಚಾರ

ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ನಟಿ ಕೀರ್ತಿ ಸುರೇಶ್? ಹುಡುಗ ಯಾರು ಗೊತ್ತಾ

ಇತ್ತೀಚಿಗೆ ನಾಯಕೀಯರ ಮದುವೆ ವಿಚಾರ ಎಲ್ಲಾ ಕಡೆ ಸಕತ್ ವೈರಲ್ ಆಗುತ್ತಿದೆ. ಇದಕ್ಕೆ ಸೇರ್ಪಡೆಯಾದ ಮತ್ತೊಂದು ವಿಚಾರ ಎಂದರೆ ಅದು ಕಾಲಿವುಡ್ ನಟಿ ಕೀರ್ತಿ ಸುರೇಶ್ ಅವರ ಮದುವೆ ವಿಚಾರ. ಅದೇನೆಂದರೆ ನಟಿ ಕೀರ್ತಿ ಸುರೇಶ್ ಅವರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇದೀಗ ಎಲ್ಲಾ ಕಡೆ ಸಕತ್ ವೈರಲ್ ಆಗುತ್ತಿದೆ.

ಮಲಯಾಳಂ ಸಿನಿಮಾದ ಮೂಲಕ ಬಾಲ ನಟಿಯಾಗಿ ಸಿನಿಮಾ ರಂಗ ಪ್ರವೇಶಿಸಿದ ಇವರು ತಮಿಳಿನಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದರು. ಇವರ ನಟನೆಯಿಂದ ಹಲವಾರು ಅಭಿಮಾನಿ ಬಳಗವನ್ನು ಸಹ ಸಂಪಾದಿಸಿದ್ದಾರೆ. ಹಲವಾರು ಸ್ಟಾರ್ ನಂತರ ಜೊತೆ ನಟಿಸಿರುವ ಇವರು, ತಮ್ಮ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿಯನ್ನೂ ಸಹ ಪಡೆದಿದ್ದರೆ. ಇದೀಗ ಇವರು ಶೀಘ್ರದಲ್ಲೇ ಹಸೆಮಣೆ ಏರಲಿದ್ದು, ತಮ್ಮ ಮನೆಯವರು ನೋಡಿರುವ ಹುಡುಗನನ್ನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಇವರ ಮದುವೆಯ ವಿಚಾರ ಹಲವಾರು ದಿನಗಳಿಂದ ಸಿನಿಮಾ ರಂಗದ ಸುತ್ತಾ ಹರಿದಾಡುತಿತ್ತು. ಆದರೆ ಇತ್ತೀಚಿಗೆ ಬಂದಿರುವ ಮಾಹಿತಿ ಪ್ರಕಾರ ಅವರು ಉದ್ಯಮಿ, ರಾಜಕೀಯದಲ್ಲಿ ತೊಡಗಿರುವ ವ್ಯಕ್ತಿಯನ್ನು ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದೆ ತಿಂಗಳಲ್ಲಿ ಇವರ ನಿಶ್ಚಿತಾರ್ಥ ಕೂಡ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇದರ ಕುರಿತು ಇವರ ಕುಟುಂಬದವರು ಮಾತ್ರ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದ್ದರಿಂದ ಇದು ಕೂಡ ಗಾಳಿ ಸುದ್ದಿನಾ ಅಥವಾ ನಿಜಾನಾ ಎಂಬುದು ಇವರ ಕುಟುಬದವರೇ ತಿಳಿಸಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top