fbpx
ಸಮಾಚಾರ

ಬಿಗ್ ಬಾಸ್ ಮನೆಯಲ್ಲಿ ಸೋನು ಗೌಡ ಮತ್ತು ಸ್ಪೂರ್ತಿ ಗೌಡ ನಡುವೆ ನಡೆಯಿತು ಮೊದಲ ಜಗಳ! ಅಷ್ಟಕ್ಕೂ ಕಾರಣವೇನು ಗೊತ್ತಾ?

ಬಿಗ್ ಬಾಸ್ OTT ಶುರುವಾಗಿದ್ದು, ಸ್ಪರ್ಧಿಗಳು ಮನೆಯ ಒಳಗೆ ಪ್ರವೇಶಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಂಚಲನ ಸೂಚಿಸಿರುವವರು ಬಿಗ್ ಬಾಸ್ ಮನೆ ಒಳಗೆ ಪ್ರವೇಶಿಸಿರುವುದನ್ನು ನಾವು ಕಾಣಬಹುದು. ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಬಿಗ್ ಬಾಸ್ ನಲ್ಲಿ ಜಗಳ ಶುರುವಾಗಿದೆ. ಕಾರ್ಯಕ್ರಮ ಶುರುವಾಗಿ ಕೇವಲ ಎರಡೇ ದಿನದಲ್ಲಿ ಮನೆಯಲ್ಲಿ ಜಗಳ ಶುರುವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸೌಂಡ್ ಮಾಡುತ್ತಿದ್ದ ಸೋನು ಗೌಡ ಮತ್ತು ಸ್ಪೂರ್ತಿ ಗೌಡ, ಇವರಿಬ್ಬರ ನಡುವೆ ಒಂದು ಸಣ್ಣ ಕಾರಣಕ್ಕೆ ಜಗಳ ಶುರುಮಾಡಿ ಇಡೀ ಮನೆಯನ್ನೇ ರಣರಂಗ ಮಾಡಿಬಿಟ್ಟಿದ್ದಾರೆ. ಅಷ್ಟಕ್ಕೂ ಇವರಿಬ್ಬರ ಜಗಳಕ್ಕೆ ಕಾರಣವಾಗಿದ್ದು ಸೋನು ಗೌಡ ಬಳಸಿದ “ಡವ್ ರಾಣಿ” ಎಂಬ ಪದ.

ಸ್ಪೂರ್ತಿ ಗೌಡ ಮೇಕ್ ಅಪ್ ಮಾಡುತ್ತಿದ್ದ ಸಂಧರ್ಭದಲ್ಲಿ ಸೋನು ಗೌಡ ಮೇಕ್ ಅಪ್ ಕುರಿತು ಕೆಲವು ಮಾತುಗಳನ್ನು ಆಡುತ್ತಾರೆ. ಇದಕ್ಕೆ ಪ್ರತಿಕ್ರಯಿಸಿದ ಸ್ಪೂರ್ತಿ ಗೌಡ ನನಗೆ ಮೇಕಪ್ ಗೊತ್ತಿಲ್ಲ ಎಂದು ಹೇಳುತ್ತಾರೆ. ಇದ್ದಕ್ಕಿದಂತೆ ಸೋನು ಡವ್ ರಾಣಿ ಎಲ್ಲಾ ಗೊತ್ತಿದ್ದು, ಏನು ಗೊತ್ತಿಲ್ಲದ ಹಾಗೆ ಡವ್ ಮಾಡ್ತಿಯಾ ಎಂದು ಹೇಳುತ್ತಾರೆ. ಇದೆ ಕಾರಣಕ್ಕೆ ಇವರಿಬ್ಬರ ನಡುವೆ ಜಗಳ ಶುರುವಾಗಿ ಅದು ತಾರಕಕ್ಕೇರುತ್ತದೆ. ಕೊನೆಗೆ ಮನೆಯ ಮಂದಿ ಇವರಿಬ್ಬರ ಜಗಳವನ್ನು ಬಿಡಿಸುತ್ತಾರೆ. ಇದೀಗ ಇವರಿಬ್ಬರು ಒಬ್ಬರನೊಬ್ಬರು ಮಾತನಾಡಿಸದೆ ಮುನಿಸಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top