fbpx
ಸಮಾಚಾರ

ಈ ಬಾರಿ ಬಿಗ್ ಬಾಸ್ ಗೆಲ್ಲೋದು ಯಾರು ಗೊತ್ತಾ? ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ

ಬಿಗ್ ಬಾಸ್ ಶುರುವಾಗಿ 4 ದಿನಗಳು ಮುಗಿದಿದೆ. ಮೊದಲ ನಾಮಿನೇಷನ್ ಕೂಡ ಶುರುವಾಗಿದೆ. ನಾಮಿನೇಟ್ ಆದ 8 ಸ್ಪರ್ಧಿಗಳಲ್ಲಿ ಒಬ್ಬರು ಈ ವಾರ ಮನೆಯಿಂದ ಒರಗಡೆ ಹೋಗೋದು ಪಕ್ಕ. ಆದರೆ ಈ ಬಾರಿ ಬಿಗ್ ಬಾಸ್ OTT ಯಾರು ಗೆಲ್ಲಬಹುದು ಎಂದು ಸಂಖ್ಯಾಶಾಸ್ತ್ರ ಗುರೂಜಿ ಹರ್ಷವರ್ಧನ್ ಅವರು ತಿಳಿಸಿದ್ದಾರೆ.

ಬಿಗ್ ಬಾಸ್ OTT ಮೊದಲ ಸ್ಪರ್ಧಿಯಾಗಿ ಹರ್ಷವರ್ಧನ್ ಗುರೂಜಿ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಸುದೀಪ್ ನೀವು ಮೊದಲಿಗರಾಗಿ ಮನೆಗೆ ಹೋಗುತ್ತಿದ್ದೀರಿ. ನಂಬರ್ ಒನ್ ಸಂಖ್ಯೆ ನಿಮಗೆ ಸರಿಹೊಂದುತ್ತದೆಯೇ ಎಂದು ಕೇಳಿದಾಗ ಆಗಿಬರುತ್ತದೆ ಎಂದು ಗುರೂಜಿ ಹೇಳುತ್ತಾರೆ. ಮರು ಪ್ರಶ್ನಿಸಿದ ಕಿಚ್ಚ ಹಾಗಾದರೆ, ಮುಂದಿನ ಹಂತಕ್ಕೆ ಹೋಗುತ್ತೀರಾ ಎಂದು ಕೇಳಿದಾಗ ಹೋಗಬಹುದು. ಆದರೆ, ನನಗಿಂತಲೂ 3,5,6 ಸಂಖ್ಯೆಯ ಸ್ಪರ್ಧಿಗಳ ಲಕ್ ಚೆನ್ನಾಗಿದೆ. ಅವರು ಹೋಗಬಹುದು ಎಂದು ಉತ್ತರಿಸಿದರು.

ಗುರೂಜಿ ಅವರ ಲೆಕ್ಕಾಚಾರವನ್ನು ಗಮನಿಸಿದರೆ ತುಳು ಚಿತ್ರ ‘ಗಿರಗಿಟ್’ನಿರ್ದೇಶಕ, ನಟ ರೂಪೇಶ್ ಶೆಟ್ಟಿ ಮೂರನೇ ಅಭ್ಯರ್ಥಿಯಾಗಿ ಮನೆಗೆ ಪ್ರವೇಶ ಪಡೆದಿದ್ದಾರೆ. ಇನ್ನು ಪುಟ್ಟ ಗೌರಿ ಧಾರಾವಾಹಿ ಮೂಲಕ ಪ್ರಖ್ಯಾತಿ ಗಳಿಸಿದ ಸಾನ್ಯ ಅಯ್ಯರ್ ಐದನೇ ಅಭ್ಯರ್ಥಿಯಾಗಿ ಮನೆ ಪ್ರವೇಶಿಸಿದ್ದಾರೆ. ಇನ್ನು ಆರನೇ ಅಭ್ಯರ್ಥಿಯಾಗಿ ಹಾಸ್ಯ ಕಲಾವಿದ ಲೋಕೇಶ್ ಮನೆಗೆ ಪ್ರವೇಶಿಸಿದ್ದಾರೆ. ಹೀಗಾಗಿ ಗುರೂಜಿ ಅವರ ಲೆಕ್ಕಾಚಾರದಲ್ಲಿ ಈ ಮೂವರಲ್ಲಿ ಒಬ್ಬರು ಬಿಗ್ ಬಾಸ್ OTT ಗೆಲ್ಲಬಹುದು ಎಂದು ಹೇಳಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top