fbpx
ಸಮಾಚಾರ

ನಟ ರಾಣಾ ದಗ್ಗುಬಾಟಿ ಸಂಸಾರದಲ್ಲಿ ಬಿರುಗಾಳಿ!

ಟಾಲಿವುಡ್ ನ ಸ್ಟಾರ್ ನಟ ರಾಣಾ ದಗ್ಗುಬಾಟಿ ಇದೀಗ ಎಲ್ಲ ಕಡೆ ಸಕತ್ ಸುದ್ದಿಯಾಗುತ್ತಿದ್ದಾರೆ. ಬಾಹುಬಲಿ ಸಿನಿಮಾದಲ್ಲಿ ಬಲ್ಲಾಳ ದೇವ ಎಂಬ ಪಾತ್ರವನ್ನು ಮಾಡಿ ಎಲ್ಲರ ಮನ ಗೆದ್ದಿದ್ದರು. ಎರಡು ವರ್ಷಗಳ ಹಿಂದೆ ಇವರು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಇದೀಗ ಇವರ ಕೆಲವೊಂದು ನಡೆ ಇವರ ವೈವಾಹಿಕ ಜೀವನದಲ್ಲಿ ಬಿರುಕು ಬಿದ್ದಿದೆ ಎಂದು ಸೂಚಿಸುತ್ತಿದೆ.

ತಮ್ಮ ಗೆಳತಿ ಮಿಹೀಕಾ ಬಜಾಜ್​ ಜೊತೆ 2020 ರ ಆಗಸ್ಟ್​ 8ರಂದು ವಿವಾಹರಾದರು. ಇದೀಗ ವಿವಾಹವಾಗಿ ಎರಡು ವರ್ಷಗಳು ಕಳೆದಿದೆ. ಆದರೆ ಇದೀಗ ಟಾಲಿವುಡ್ ಅಂಗಳದಲ್ಲಿ ಕೆಲವೊಂದು ಗಾಸಿಪ್ ಗಳು ಕೇಳಿ ಬರುತ್ತಿದೆ. ಅದೇನೆಂದರೆ ರಾಣಾ ದಗ್ಗುಬಾಟಿ ಮತ್ತು ಮಿಹೀಕಾ ಬಜಾಜ್ ಸಂಬಂಧದಲ್ಲಿ ಬಿರುಕು ಬಿಟ್ಟಿದೆ ಎಂದು. ಇದಕ್ಕೆ ಪೂರಕವಾಗಿ ರಾಣಾ ತಮ್ಮ ಇಸ್ಟಾಗ್ರಾಮ್ ಖಾತೆಯಲ್ಲಿರುವ ಪ್ರತಿಯೊಂದು ಫೋಟೋವನ್ನು ಡಿಲೀಟ್ ಮಾಡಿದ್ದಾರೆ. ಕೆಲವು ದಿನಗಳ ಕಾಲ ಸಾಮಾಜಿಕ ಜಾಲತಾಣದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ.

ರಾಣಾ ಅವರ ಈ ಬೆಳವಣಿಗೆ ಇವರ ಅಭಿಮಾನಿಗಳಲ್ಲಿ ಸಾಕಷ್ಟು ಅನುಮಾನಗಳನ್ನು ಹುಟ್ಟಿ ಹಾಕಿದೆ. ಆದರೆ ಇದರ ಕುರಿತು ಇವರ ಪತ್ನಿ ಮಿಹೀಕಾ ಬಜಾಜ್​ ಅವರು ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಇವರ ನಡುವೆ ನಿಜವಾಗಲೂ ಬಿರುಕು ಬಿದ್ದಿದಿಯಾ ಅಥವಾ ಬೇರೆ ಕಾರಣಕ್ಕೆ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ ಎಂಬುದರ ಕುರಿತು ಸ್ವತಃ ರಾಣಾ ಅವರೇ ತಿಳಿಸಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top