fbpx
ಸಮಾಚಾರ

“ವಿಡಿಯೋ ಲೀಕ್ ಮಾಡಿದವನು ಅಮೇರಿಕಾದಲ್ಲಿದ್ದಾನೆ! ಅವನನ್ನು ಹುಡುಕುವುದು ಹೇಗೆ?”- ವಿಡಿಯೋ ಲೀಕ್ ಮಾಡಿದವ ಕುರಿತು ಪ್ರತಿಕ್ರಯಿಸಿದ ಸೋನು

ಟಿಕ್ ಟಾಕ್ ಮತ್ತು ರೀಲ್ಸ್ ಮೂಲಕ ಹೆಚ್ಚು ಪ್ರಖ್ಯಾತಿ ಗಳಿಸಿದ ಸೋನು ಗೌಡ ಅವರು ಇದೀಗ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಬಿಗ್ ಬಾಸ್ ಮನೆ ಪ್ರವೇಶಿಸಿರುವ ಇವರ ತಮ್ಮ ಜೀವನದ ಕಹಿ ಘಟನೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅದರಲ್ಲೂ ತಮ್ಮ ವಿಡಿಯೋ ಬಿಡುಗಡೆ ಆದ ವಿಷಯವನ್ನು ಸಹ ಹಂಚಿಕೊಂಡಿದ್ದಾರೆ.

ಟ್ರೊಲ್ ಮೂಲಕ ಅತಿ ಹೆಚ್ಚು ಫೇಮಸ್ ಆದ ಸ್ಟಾರ್ ಎಂದರೆ ಅದು ಸೋನು ಗೌಡ. ತಮ್ಮ ಖಾಸಗಿ ವಿಡಿಯೋ ಲೀಕ್ ಆದ ಕುರಿತು ಮಾತನಾಡಿದ ಸೋನು “ನಾನು ಒಬ್ಬ ಹುಡುಗನನ್ನು ಇಷ್ಟಪಟ್ಟಿದ್ದೆ. ಅವನೂ ನನ್ನನ್ನು ಇಷ್ಟಪಡುತ್ತಿದ್ದ ಇಬ್ಬರೂ ಮದುವೆ ಸಹ ಆಗಬೇಕು ಎಂದುಕೊಂಡಿದ್ದೆವು. ಅವನೂ ಮದುವೆಗೆ ಒಪ್ಪಿಕೊಂಡಿದ್ದ. ಆದರೆ ಒಂದು ದಿನ ಅವನು ಏನು ಕೇಳ್ದ ಅಂದ್ರೆ, `ವಿಡಿಯೋ ಕಾಲ್ ಮಾಡು’ ಅಂತಾ ಕೇಳ್ದ. ಆಮೇಲೆ, ʼನಿನ್ನ ವಿಡಿಯೋ ಇದೆ, ನೀನು ಯಾರನ್ನ ಮದುವೆ ಆಗುತ್ತೀಯಾ ನೋಡತ್ತೀನಿʼ ಅಂತಾ ಬೆದರಿಕೆ ಹಾಕಿದ್ದ ಅಂತಾ ಕಣ್ಣೀರಿಟ್ಟಿದ್ದಾರೆ.

ಈ ವೇಳೆ ಮನೆಯ ಸದ್ಯಸ್ಯರಾದ ರೂಪೇಶ್ ಅವರ ಜೊತೆ ಸೋನು ಗೌಡ ಮಾತನಾಡಿದ್ದಾರೆ. ಈ ವೇಳೆ ಸೋನುಗೆ ನೀನು ಆವಾಗಲೇ ದೂರು ಕೊಡಬೇಕಿತ್ತು ಅಂತ ರೂಪೇಶ್ ಹೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವ ಸೋನು ‘ಗುರು ನಾನು ಎಫ್​ಐಆರ್ ಕೂಡ ಮಾಡಿಸಿದ್ದೇನೆ. ಅವನು ಅಮೆರಿಕದಲ್ಲಿ ಇದ್ದಾನೆ. ಅವನ ಹುಡುಕೋದು ಹೇಗೆ’ ಎಂದು ಪ್ರಶ್ನೆ ಮಾಡಿದರು ಸೋನು. ‘ನೀವು ಗರ್ಲ್ಸ್​​ ಯಾಕೆ ಅಷ್ಟು ನಂಬಿಕೆ ಇಡ್ತೀರಾ’ ಎಂದು ಸೋನುಗೆ ರೂಪೇಶ್ ಕೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top