ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ OTT ಕಾರ್ಯಕ್ರಮ ಶುರುವಾಗಿದ್ದು, ಸ್ಪರ್ಧಿಗಳು ಮನೆಯ ಒಳಗೆ ಪ್ರವೇಶಿಸಿದ್ದಾರೆ. ಮನೆಯ ಮಂದಿ ಟಾಸ್ಕ್ ಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಇದೀಗ ಬಿಗ್ ಬಾಸ್ ಮನೆಯ ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಬಿಗ್ ಬಾಸ್ ಮನೆ ಪ್ರವೇಶಿಸಿದ್ದು, ಇವರ ಜೀವನದ ಕುರಿತು ಅಚ್ಚರಿಯ ಘಟನೆಯೊಂದನ್ನು ಹೇಳಿದ್ದಾರೆ.
ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಎಲ್ಲರನ್ನು ನಗಿಸುತ್ತಾ ಬಂದಿದ್ದಾರೆ. ಆದರೆ ಸದಾ ಎಲ್ಲರನ್ನು ರಂಜಿಸುತ್ತಿದ್ದ ಇವರ ಬದುಕು ಅಂದುಕೊಂಡಷ್ಟು ಸುಲಭ ವಿರಲಿಲ್ಲ. ಹಲವಾರು ಏಳು ಬೀಳುಗಳನ್ನು ಕಂಡಿದ್ದಾರೆ. ಇದೀಗ ತಮ್ಮ ಜೀವನದ ಕಷ್ಟದ ದಿನಗಳನ್ನು ಕಿಚ್ಚ ಸುದೀಪ್ ಅವರ ಬಳಿ ವೇದಿಕೆಯ ಮೇಲೆ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯ 6 ನೇ ಸ್ಪರ್ಧಿಯಾಗಿ ಲೋಕೇಶ್ ಮನೆ ಒಳಗೆ ಪ್ರವೇಶಿಸಿದ್ದಾರೆ. ಈ ವೇಳೆ ಸುದೀಪ್ ಅವರ ಹತ್ತಿರ ತಮ್ಮ ಜೀವನದ ಕಷ್ಟದ ಸಮಯವನ್ನು ವಿವರಿಸಿದ್ದಾರೆ. ” ನನ್ನ ತಂದೆಯ ಮೊದಲ ಹೆಂಡತಿ ತೀರಿಕೊಂಡಿದ್ದರು. ಹೀಗಾಗಿ ನನ್ನ ತಂದೆ ಎರಡನೆಯ ಮದುವೆ ಆದರು. ಎರಡನೆಯ ಹೆಂಡತಿಗೆ ಹುಟ್ಟಿದ ಮಗು ನಾನು. ನಾನು ಕೇವಲ 9 ನೇ ವಯಸ್ಸಿದ್ದಾಗ ಮನೆ ಬಿಟ್ಟು ಬಂದೆ. ಇದಾದ ನಂತರ ರೈಲುಗಳಲ್ಲಿ ಪ್ರಯಾಣ ಮಾಡಿ ಊರುಗಳನ್ನು ತಿರುಗಾಡಿದ್ದೇನೆ. ನಾನು ಪೇಪರ್ ಆಯ್ದುಕೊಂಡು ಜೀವನ ನಡೆಸಿದ್ದೇನೆ. ಈ ಹಿಂದ ನನ್ನನ್ನು ನೋಡಿದರೆ ಪ್ರತಿಯೊಬ್ಬರೂ ನೆಗ್ಲೆಟ್ ಮಾಡುತ್ತಿದ್ದರು. ಆದರೆ ಇದೀಗ ಅದೇ ಜನರು ಬಂದು ನನ್ನ ಬಳಿ ಸೆಲ್ಫಿ ಕೇಳುತ್ತಿದ್ದಾರೆ ” ಎಂದು ಹೇಳಿದರು.
ಇದಲ್ಲದೆ ನಾನು ಭಿಕ್ಷೆ ಬೇಡುತ್ತಲೇ ನನ್ನ ಜೀವನವನ್ನು ಶುರು ಮಾಡಿದ್ದು. ನನ್ನ ನಟನೆ ಕೂಡ ಭಿಕ್ಷೆ ಬೇಡುತ್ತಲೇ ಶುರುವಾಗಿತ್ತು. ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಮೂಗನಾಗಿ ಭಿಕ್ಷೆ ಬೇಡುತ್ತಾ ನನ್ನ ಜೀವನವನ್ನು ನಡೆಸಿದ್ದೇನೆ.
ನಾನು ಭಿಕ್ಷೆ ಬೇಡುತ್ತಿರುವುದನ್ನು ಕಂಡ ಒಂದು ಟ್ರಸ್ಟ್ ನವರು ನನ್ನನ್ನು ಕರೆದುಕೊಂಡು ಹೋಗಿ ಆಶ್ರಯ ನೀಡಿದರು. ಇದರಿಂದ ನನ್ನ ಜೀವನ ಬದಲಾಯಿತು. ಇದಿಲ್ಲದಿದ್ದರೆ ಜೀವನದಲ್ಲಿ ನಾನು ಮುಂದೆ ಬರಲು ಸಾಧ್ಯವೇ ಆಗುತ್ತಿರಲಿಲ್ಲ ಎಂದು ತಮ್ಮ ಜೀವನದ ಕಷ್ಟಗಳನ್ನು ಕಿಚ್ಚನ ಬಳಿ ಹೇಳಿದರು.
ಇವರ ಅಪರೂಪದ ಸಾಧನೆಯನ್ನು ಗುರುತಿಸಿ 2019 ರಲ್ಲಿ ಆಸ್ಟ್ರಿಯಾ ದೇಶದಲ್ಲಿ ಇವರಿಗೆ ” Randamically Kid Became a star ” ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
