fbpx
ಸಮಾಚಾರ

ನಾವು ಸುಂದರವಾದ ದೆವ್ವಗೆ ಲೈನ್ ಹೊಡೆಯಲು ಹೋಗಿದ್ವಿ! ದೆವ್ವಗಳ ಕುರಿತು ಆರ್ಯವರ್ಧನ್ ಗುರೂಜಿ ಅಚ್ಚರಿಯ ಮಾತು

ಬಿಗ್ ಬಾಸ್ OTT ಮನೆಯನ್ನು ಆರ್ಯವರ್ಧನ್ ಗುರೂಜಿ ಮೊದಲಿಗರಾಗಿ ಪ್ರವೇಶಿಸಿದರು. ಖಾಸಗಿ ಮಾಧ್ಯಮದಲ್ಲಿ ಹಲವಾರು ಪ್ರೆಡಿಕ್ಷನ್ ಮಾಡುವ ಮೂಲಕ ಹೆಚ್ಚು ಅಭಿಮಾನಿಗಳನ್ನು ಇವರು ಸಂಪಾದಿಸಿದ್ದಾರೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ತಮ್ಮ ಬಗ್ಗೆ ಒಂದು ಕಿರು ಪರಿಚಯ ಮಾಡಿಕೊಂಡಿದ್ದು, ಇದೀಗ ಎಲ್ಲರಿಗು ಅಚ್ಚರಿಯನ್ನು ಮೂಡಿಸಿದೆ.

ಮನೆಯಲ್ಲಿ ಗುರೂಜಿ ಮೊದಲು ತಮ್ಮ ಆಸ್ತಿಯ ವಿಚಾರವನ್ನು ಬಹಿರಂಗಪಡಿಸಿದರು. ನಮ್ಮದು ಒಟ್ಟು 40 ಎಕ್ರೆ ಜಮೀನು. ಬೇಲೂರು- ಹಾಸನ್ ಮಧ್ಯೆ ಇದ್ದು, ಸುತ್ತ ಕೆರೆಗಳಿವೆ. ಸುತ್ತಾ ಮುತ್ತಾ ಯಾವುದೇ ಮನೆಗಳಿಲ್ಲ. ಪ್ರತಿಯೊಬ್ಬರೂ ಸಿಟಿಯಲ್ಲಿ ಸಂಪಾದನೆ ಮಾಡಿ ಹಳ್ಳಿಗೆ ಹೋಗುತ್ತಾರೆ. ಆದರೆ ನಾವು ಹಳ್ಳಿಯಲ್ಲಿ ಇದ್ದು ಬೆಂಗಳೂರಿಗೆ ಬಂದಿದ್ದೇವೆ. ನನಗೆ ಹಳ್ಳಿಯಲ್ಲಿ ಇದ್ದು ಇದ್ದು ಬೇಜಾರು ಎಂದು ಹೇಳಿದರು.

ನಂತರ ಮುಂದುವರಿಸಿ ನಾನು ಯಾವುದೇ ಸುಳ್ಳನ್ನು ಹೇಳುತ್ತಿಲ್ಲ, ನಮ್ಮ ಪ್ರಾಪರ್ಟಿ ಮತ್ತು ನಮ್ಮ ಅಜ್ಜ ಅವರ ಪ್ರಾಪರ್ಟಿ ಏನೇ ಅಂದ್ರು ಹೆಚ್ಚು ಕಮ್ಮಿ 5000 ಕೋಟಿವರೆಗೂ ಇದೆ ಎಂದು ಹೇಳಿದ್ದಾರೆ. ಇದಕ್ಕಿದಂತೆ ಸ್ಪರ್ಧಿಗಳು ಒಂದು ಕ್ಷಣ ಶಾಕ್ ಆಗಿದ್ದು, ಬಿಗ್ ಬಾಸ್ ಗೆ ನೀವೇ ಹಣ ನೀಡಬಹುದು ಎಂದು ಹಾಸ್ಯ ಮಾಡಿದರು.

ಇದಲ್ಲದೆ ಗುರೂಜಿ ತಾವು ದೆವ್ವಗಳನ್ನು ಮೀಟ್ ಮಾಡಿ ಲೈನ್ ಹೊಡೆದಿದ್ದಾಗಿ ಹೇಳಿದ್ದಾರೆ. ” ನನಗೆ ಮೊದಲಿನಿಂದಲೂ ಸಿನಿಮಾ ನೋಡುವ ಹುಚ್ಚು ಇತ್ತು. ಒಂದು ದಿನ ನಾವು ಊರ್ವಶಿ ಥಿಯೇಟರ್‌ನಲ್ಲಿ ಸಿನಿಮಾ ನೋಡಿ ವಿಲ್ಸನ್ ಗಾರ್ಡನ್‌ನಲ್ಲಿ ಸೈಕಲ್ ಮೇಲೆ ನಾನು, ನನ್ನ ಗೆಳೆಯನ ಜೊತೆ ಹೋಗಿದ್ದೆ. ಇಂತಹ ಸಂಧರ್ಭದಲ್ಲಿ ನಾನು ದೆವ್ವವನ್ನು ಕಂಡು ಅದಕ್ಕೆ ಲೈನ್ ಹೊಡೆಯಲು ಹೋಗಿದ್ದೆ, ಏಕೆಂದರೆ ಆ ದೆವ್ವ ಸುಂದರವಾಗಿತ್ತು. ಆವಾಗಲೇ ನನಗೆ ತಿಳಿದಿದ್ದು ಬಜಾರ್ ನಲ್ಲಿ ಏನನ್ನು ಬೇಕಾದರೂ ಪಡೆಯಬಹುದು ಮತ್ತು ದೆವ್ವ ಕೂಡ ಸಿಗುತ್ತದೆ ಎಂದು”.

ದೆವ್ವವನ್ನು ವರ್ಣಿಸುತ್ತಾ “ಒಂದು ಹುಡುಗಿ ನೋಡಿದೆವು, ಕೂದಲು ಹಾರಾಡುತ್ತಿತ್ತು. ಅವಳು ಸುಂದರವಾಗಿ ಧರೆಯಿಂದ ಇಳಿದಹಾಗೆ ಹೊಳೆಯುತ್ತಿದ್ದಳು. ಅವಳು ತುಂಬ ಚೆನ್ನಾಗಿದ್ದಳು. ನೋಡಿ ಎಷ್ಟು ಚೆಂದ ಹುಡುಗಿ ಅಂತ ಅಂದುಕೊಂಡೆವು. ಹಿಂದೆ ಹೋಗಿ ನೋಡಿದರೆ ಅವಳಿಗೆ ಕಾಲೇ ಇಲ್ಲ. ನಾವಿಬ್ಬರೂ ಎದ್ವಾ ಬಿದ್ವಾ ಅಂತ ಓಡಿದೆವು” ಎಂದರು. ಇದಲ್ಲದೆ ತಾವು 3 ಬಾರಿ ದೆವ್ವವನ್ನು ನೋಡಿರುವುದಾಗಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top