fbpx
ಸಮಾಚಾರ

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ನರ್ಗಿಸ್ ಬಾಬು ನಿಧನ

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಹಾಗೂ ವಿತರಕ ನರ್ಗಿಸ್ ಬಾಬು ನೆನ್ನೆ ಸಂಜೆ 7 ಗಂಟೆಗೆ ವಿಧಿವಶರಾಗಿದ್ದಾರೆ. ಧೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ನರ್ಗಿಸ್ ಬಾಬು ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ನೆನ್ನೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.

ನರ್ಗಿಸ್ ಬಾಬು ಅವರಿಗೆ 6 ಜನ ಮಕ್ಕಳಿದ್ದು, ಇವರಲ್ಲಿ ಕಮಾರ್ ಹಾಗೂ ವಸೀಮ್ ಎಂಬ ಇಬ್ಬರು ಮಕ್ಕಳು ಕೂಡ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ನರ್ಗಿಸ್ ಬಾಬು ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಮುನೀರೆಡ್ಡಿ ಪಾಳ್ಯದಲ್ಲಿ ಮುಸ್ಲಿಂ ಸಂಪ್ರದಾಯದ ಪ್ರಕಾರ ಇಂದು ಮಧ್ಯಾಹ್ನ ನಡೆಸಲು ನಿರ್ಧರಿಸಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

ನರ್ಗಿಸ್ ಬಾಬು ಅವರು, ನರ್ಗಿಸ್ ಆಂಡ್ ಎಂಟರ್‌ಪ್ರೈಸಸ್ ಮೂಲಕ 23 ಚಿತ್ರಗಳನ್ನ ನಿರ್ಮಿಸಿದ್ದರು. ಮೊದಲು ಚಿತ್ರ ಹಂಚಿಕೆ ಮಾಡುತ್ತಾ ಚಿತ್ರೋದ್ಯಮಕ್ಕೆ ಕಾಲಿಟ್ಟ ಇವರು ಕನ್ನಡದಲ್ಲಿ ಸುಂದರ ಪುರುಷ ಸಿನಿಮಾವನ್ನು ಮೊದಲ ಬಾರಿಗೆ ನಿರ್ಮಾಣ ಮಾಡಿದರು. ನಂತರ ಯಾರಿಗೆ ಬೇಡ ದುಡ್ಡು, ಧನ್ ಧನಾ ಧನ್, ಅನಂತ್ ಗೌಡ ವರ್ಸಸ್ ರೆಡ್ಡಿ ಸಿನಿಮಾಗಳನ್ನು ನಿರ್ಮಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top