fbpx
ಸಮಾಚಾರ

ಇವನು ಒಂತರ ತುಂಬಾ ಕ್ಯೂಟ್ ಕ್ಯೂಟ್! ಉದಯ್ ನ ಹೊಗಳಿದ ಸೋನು ಗೌಡ- ಆದರೆ ಬೇಸರವಾಗಿದ್ದು ಮಾತ್ರ ರಾಕೇಶ್?

ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ OTT ಕಾರ್ಯಕ್ರಮ ಶುರುವಾಗಿ ಒಂದು ವಾರಗಳು ಕಳೆಯುತ್ತಾ ಬಂದಿದೆ. ಮನೆಯ ಮಂದಿ ಟಾಸ್ಕ್ ಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಇದಲ್ಲದೆ ಮನೆಯಲ್ಲಿ ಜಗಳಗಳು ನಡೆಯುತ್ತಿದ್ದು, ಅದು ಸರ್ವೇ ಸಾಮಾನ್ಯ ಎಂದು ಹೇಳಬಹುದು. ಇದೀಗ ಬಿಗ್ ಬಾಸ್ ಮನೆಯಲ್ಲಿ ಪ್ರೇಮ ಕಥೆ ಕೂಡ ನಡೆಯುತ್ತಿದ್ದು, ಒಂದ್ರಾಮೇಲೋಂದರಂತೆ ಒಬ್ಬಬ್ಬರ ಪ್ರೇಮಕಥೆ ನಾವು ಕಾಣಬಹುದು.

ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಮತ್ತು ಸ್ಪೂರ್ತಿ ಗೌಡ ಮಧ್ಯೆ ಏನೋ ಇದೆ ಎಂದು ಈಗಾಗಲೇ ಮನೆಯ ಮಂದಿ ಮತ್ತು ಪ್ರೇಕ್ಷಕರಿಗೆ ತಿಳಿದಿರಬಹುದು. ಏಕೆಂದರೆ ಈ ಹಿಂದೆ ಸ್ವತಃ ರಾಕೇಶ್ ಸ್ಫೂರ್ತಿ ಗೌಡ ಅವರಿಗೆ ನಿನಗೆ ಯಾರಾದರೂ ಮನೆಯಲ್ಲಿ ಇಷ್ಟವಿದ್ದರೆ ನೇರವಾಗಿ ಹೇಳಬೇಕು ಎಂದು ಹೇಳುತ್ತಾರೆ. ಇದಕ್ಕೆ ಉತ್ತರಿಸಿದ ಸ್ಫೂರ್ತಿ ‘ನಾನಾಗಿ ಯಾರಿಗೂ ಪ್ರಪೋಸ್ ಮಾಡಲ್ಲ. ಹುಡುಗನೇ ನನ್ನ ಬಳಿ ಬಂದು ಪ್ರೀತಿ ಹೇಳಿಕೊಳ್ಳಬೇಕು. ಆ ರೀತಿ ಮಾಡ್ತೀನಿ’ ಎಂದು ಹೇಳಿಕೊಂಡಿದ್ದರು. ಇದೀಗ ಇವರಿಬ್ಬರ ಕಥೆ ಒಂದಾದರೆ ಉದಯ್ ಮತ್ತು ಸೋನು ಗೌಡ ಇವರಿಬ್ಬರ ನಡುವೆ ಏನೋ ಇದೆ ಎಂಬ ಅನುಮಾನ ಶುರುವಾಗುತ್ತಿದೆ.

ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಕ್ಯಾಪ್ಟನ್ ಆಯ್ಕೆ ಮಾಡಬೇಕೆಂಬ ಟಾಸ್ಕ್ ನೀಡಿತ್ತು. ಇದರ ಅನ್ವಯ ಸೋನು ತನ್ನ ಮೊದಲ ಹೆಸರನ್ನು ಉದಯ್ ಎಂದು ಘೋಷಿಸಿದರು. ಈ ವೇಳೆ ಇದಕ್ಕೆ ಸ್ಪಷ್ಟನೆ ಕೊಡುತ್ತಾ ” ನಾನು ಮನೆಗೆ ಬಂದಾಗಿನಿಂದ ಇಲ್ಲಿಯವರೆಗೂ ಉದಯ್ ಜೊತೆ ಎಷ್ಟೇ ಜಗಳ ವಾಡಿದರು, ಇವನು ಒಂತರ ಕ್ಯೂಟ್, ನಂತರ ಅವನೇ ಬಂದು ಸೋನು ನನಗೆ ನೀನು ಇಷ್ಟವಾದೆ ಎಂದು ಬಂದು ಸಮಾಧಾನ ಮಾಡುತ್ತಾನೆ” ಎಂದು ಹೇಳಿದರು. ಈ ವೇಳೆ ರಾಕೇಶ್ ಬೇಸರದಲ್ಲಿರುವುದನ್ನು ಗಮನಿಸಿದ ಮನೆ ಮಂದಿ ಇವನನ್ನು ರೇಗಿಸಲು ಮುಂದಾಗುತ್ತಾರೆ.

ಮುಂದುವರಿಸಿ ” ಇವಾಗ ಅವನು ನನಿಗೆ ಬೈದರೆ 5 ನಿಮಿಷಗಳ ಬಳಿಕ ಬಂದು ಮತ್ತೆ ಅವನೇ ನನ್ನನ್ನು ಮಾತನಾಡಿಸುತ್ತಾನೆ, ನಾನು ಅಷ್ಟೇ ಅಲ್ಲ ತುಂಬಾ ಜನರ ಜೊತೆ ಒಟ್ಟಿಗೆ ಖುಷಿ ಇಂದ ಇರುವುದನ್ನು ನೋಡಿದ್ದೇನೆ. ಆದ್ದರಿಂದ ಇವರು ತುಂಬಾ ಕ್ಯೂಟ್ ಎಂದು ಪದೇ ಪದೇ ಹೇಳುತ್ತಾರೆ, ಆದ್ದರಿಂದ ನಾನು ಇವರನ್ನು ಆಯ್ಕೆ ಮಾಡಿದೆ” ಎಂದು ಸೋನು ಹೇಳುತ್ತಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top