fbpx
ಸಮಾಚಾರ

ಶಸ್ತ್ರ ಚಿಕಿತ್ಸೆ ಎಫೆಕ್ಟ್- ಹಲ್ಲಿಕುತ್ತಿಗೆಯಂತೆ ಆಯಿತು ಮಹಿಳೆಯ ಕತ್ತು

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ನೈಜ ಸೌಂದರ್ಯವನ್ನು ಹೆಚ್ಚಿಸಿಕೊಳ್ಲಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವ ಹಲವಾರು ಘಟನೆಗಳನ್ನು ನಾವು ನೋಡಿದ್ದೇವೆ. ಇದೀಗ ಅಮೆರಿಕಾದ 59 ವರ್ಷದ ಮಹಿಳೆ ತನ್ನ ಗದ್ದದ ಕೆಳಗೆ ಇರುವ ಚರ್ಮವನ್ನು ಬಿಗಿಗೊಳಿಸಲು ಹೋಗಿ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ.

ವಯಸ್ಸಾದರೂ ಸುಂದರವಾಗಿ ಕಾಣಬೇಕು ಎಂಬ ಆಸೆಯಿಂದ ಅಮೆರಿಕದ 59 ವರ್ಷದ ಜೇನ್​ ಬೌಮನ್​ ಎಂಬ ಮಹಿಳೆ ತನ್ನ ಗದ್ದದ ಕೆಳಗಿನ ಚರ್ಮವನ್ನು ಬಿಗಿಗೊಳಿಸಿಕೊಳ್ಳಲು ರೂ. 40, 591 ಖರ್ಚು ಮಾಡಿ ಚಿಕಿತ್ಸೆಯೇನೋ ಮಾಡಿಸಿಕೊಂಡರು. ಆದರೆ ಇದರ ಪರಿಣಾಮವಾಗಿ ಇವರ ಕತ್ತು ಇದೀಗ ಹಲ್ಲಿಯ ಚರ್ಮದಂತೆ ಕಾಣತೊಡಗಿದೆ. ಇದಿರಿಂದ ಇವರಿಗೆ ಬಹಳಷ್ಟು ಬೇಸರವಾಗಿದೆ.

ಪ್ರತಿ ಬಾರಿ ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಂಡಾಗ ಜೇಮ್​ ಬೌಮನ್ ಅವರಿಗೆ ಬೇಸರವಾಗುತ್ತದೆ. ಇವರು ಫೈಬ್ರೊಪ್ಲಾಸ್ಟ್ ಪ್ಲಾಸ್ಮಾ ಎಂಬ ಶಸ್ತ್ರಚಿಕಿತ್ಸೆಯ ಮೂಲಕ ಚರ್ಮ ಬಿಗಿಗೊಳಿಸಲು ಬಯಸಿದರು. ಇದಕ್ಕಿಂತ ಹೆಚ್ಚಾಗಿ ಇವರು ಮೊದಲು ಫೇಸ್​ಬುಕ್​ನಲ್ಲಿರುವ ಬ್ಯೂಟಿಷಿಯನ್​ ಮೂಲಕ ಈ ಕುರಿತು ಸಲಹೆ ಪಡೆದಿರುವುದರಿಂದ ಇವರಿಗೆ ಈ ಸ್ಥಿತಿ ಬಂದಿದೆ.

ಚಿಕಿತ್ಸೆ ಪಡೆದ ನಂತರ ಆದ ಅನುಭವವನ್ನು ವಿವರಿಸಿದ ಮಹಿಳೆ ಚಿಕಿತ್ಸೆ ನಂತರ ಚರ್ಮವು ಸುಟ್ಟುಹೋಗುತ್ತಿದೆಯೇನೋ ಎಂಬಂತೆ ಉರಿಯಲಾರಂಭಿಸಿತು. ಚಿಕಿತ್ಸೆ ನೀಡಿದವರಿಗೂ ಸಹ ಇದರ ಬಗ್ಗೆ ಕೇಳಿಕೊಂಡರೂ ಪ್ರಯೋಜನವಾಗಲಿಲ್ಲ. ನಂತರ ಉರಿಯನ್ನು ಕಮ್ಮಿಗೊಳಿಸಲು ಕ್ರೀಮ್ ಹಚ್ಚಿಕೊಂಡೆ. ಕುತ್ತಿಗೆಯ ಉದ್ದಕ್ಕೂ ಕೆಂಪುಕಲೆಗಳು ಮೂಡಿದವು. ಬಹಳ ಬೇಸರದಲ್ಲಿ ಈ ಚಿಕಿತ್ಸೆಯ ಕುರಿತು ನನ್ನ ಕೆಟ್ಟ ಅನುಭವವನ್ನು ಬರೆದು ದಾಖಲಿಸಿದೆ, ಈ ಬಗ್ಗೆ ವಕೀಲರಿಗೂ ತಿಳಿಸಿದೆ. ಆದರೆ ನನ್ನ ವಿರುದ್ಧವೇ ಚಿಕಿತ್ಸಕರು ವಕೀಲರ ಬಳಿ ಕೇಸ್​ ಫೈಲ್ ಮಾಡಿದ್ದಾರೆ. ಚಿಕಿತ್ಸೆ ಪಡೆದು ವಾರಗಳಾದರೂ ಈ ಭಯಾನಕ ಚುಕ್ಕೆಗಳ ಹೊರತಾಗಿ ಯಾವುದೇ ಬದಲಾವಣೆ ಆಗಿಲ್ಲ, ನನ್ನ ಕುತ್ತಿಗೆಯ ಮೇಲಿರುವ ನೂರಾರು ಚುಕ್ಕೆಗಳಿಂದ ನಾನು ಹಲ್ಲಿಯಂತೆ ಕಾಣುತ್ತಿದ್ದೇನೆ. ’ ಎಂದು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top