fbpx
ಸಮಾಚಾರ

ಮಾರಿಮುತ್ತು ಮೊಮ್ಮಗಳು ಜಯಶ್ರೀ ಬಳಿ ಮೇಕಪ್ ಮಾಡಿಸಿಕೊಂಡ ಗುರೂಜಿ! ಗುರೂಜಿ ಹೊಸ ಲುಕ್ ಇದೀಗ ಎಲ್ಲಾ ಕಡೆ ಸಕತ್ ವೈರಲ್

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಒಂದಲ್ಲ ಒಂದು ರೀತಿಯಲ್ಲಿ ಬಹಳಷ್ಟು ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಸಂಖ್ಯಾಶಾಸ್ತ್ರ ಗುರೂಜಿಯಾಗಿರುವ ಆರ್ಯವರ್ಧನ್ ಮನೆಯ ಕೇಂದ್ರ ಬಿಂದು ಆಗಿದ್ದಾರೆ. ಈವೇಳೆ ಗುರೂಜಿ ಹಲವಾರು ಗೆಟಪ್ ಗಳಲ್ಲಿ ಮನೆಯಲ್ಲಿ ಕಂಗೊಳಿಸುತ್ತಿದ್ದು, ಇದೀಗ ಮೇಕ್ ಅಪ್ ಮಾಡಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.

ಬಿಗ್ ಬಾಸ್ ಮನೆ ಒಳಗೆ ಪ್ರವೇಶಿಸಿದ ಗುರೂಜಿ ಶೈಲಿಗಳಲ್ಲಿ ಕಾಣಿಸ್ಕೊಳ್ಳುತ್ತಿದ್ದಾರೆ. ಮೊದಲನೆಯದಾಗಿ ತಲೆ ಮೀಸೆ ಪೂರ್ತಿ ಬೋಳಿಸಿ ವಿಭಿನ್ನ ರೀತಿಯಲ್ಲಿ ಕಂಗೊಳಿಸುತ್ತಿದ್ದ ಗುರೂಜಿ ಇದೀಗ ಜಯಶ್ರೀ ಅವರ ಕೈಯಲ್ಲಿ ಮೇಕ್ ಅಪ್ ಮಾಡಿಸಿಕೊಂಡು ವಿಭಿನ್ನ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.

 

 

ಗುರೂಜಿ ಅವರಿಗೆ ಏನಾಯಿತೋ ಏನೋ ಗೊತ್ತಿಲ್ಲ. ತಾವು ಕೂಡ ಮೇಕ್ ಅಪ್ ಮಾಡಿಸಿಕೊಳ್ಳಬೇಕು ಎಂಬ ಆಸೆ ಹುಟ್ಟಿತ್ತು. ಇದನ್ನು ಹಿರಿಯ ಕಲಾವಿದೆ ಮಾರಿಮುತ್ತು ಅವರ ಮೊಮ್ಮಗಳು ಜಯಶ್ರೀ ಅವರ ಬಳಿ ಹೇಳಿದ್ದಾರೆ. ಇದಕ್ಕೆ ಸಕ್ರಿಯವಾಗಿ ಸ್ಪಂದಿಸಿದ ಜಯಶ್ರೀ ಗುರೂಜಿ ಅವರಿಗೆ ಮೇಕ್ ಅಪ್ ಮಾಡಿದ್ದಾರೆ

ಜಯಶ್ರೀ ಗುರೂಜಿ ಅವರಿಗೆ ಹುಡುಗಿಯರ ರೀತಿ ಮೇಕ್ ಅಪ್ ಮಾಡಿದ್ದಾರೆ. ಮೊದಲು ಕಣ್ಣಿಗೆ ಕಾಜಲ್ ನಂತರ ಮುಖಕ್ಕೆ ಮೇಕ್ ಅಪ್, ಇದಾದ ನಂತ್ರ ಲಿಪ್ ಸ್ಟಿಕ್ ಹಾಕಿದ್ದಾರೆ. ಆದರೆ ಗುರೂಜಿ ಅವರಿಗೆ ಲಿಪ್ ಸ್ಟಿಕ್ ಹೆಚ್ಚಾದಂತೆ ಕಂಡಿದ್ದು ಅದನ್ನು ಉಜ್ಜಲು ಮುಂದಾಗುತ್ತಾರೆ. ಆದರೆ ಅವರ ಜೊತೆ ಇದ್ದ ಸಹ ಸ್ಪರ್ಧಿಗಳು ಬೇಡ ಚನ್ನಾಗಿ ಇದೆ ಎಂದರು ಕೂಡ ಇದನ್ನು ಕೇಳದೆ ಗುರೂಜಿ ಲಿಪ್ ಸ್ಟಿಕ್ ಅನ್ನು ಉಜ್ಜಿಕೊಂಡಿದ್ದಾರೆ. ಇದಾದ ನಂತರ ಜಯಶ್ರೀ ಮೇಕ್ ಅಪ್ ಮುಗಿದಿದೆ ಕನ್ನಡಿಯ ಬಳಿ ನೋಡಿಕೊಳ್ಳಿ ಎಂದಾಗ ” ಇಷ್ಟೇನಾ ಮೇಕ್ ಅಪ್ ಎಂದರೆ, ನಾನು ಕರ್ರಗೆ ಕಾಣುತ್ತಿದ್ದೇನೆ, ಇನ್ನು ಬೆಳ್ಳಗೆ ಮಾಡಿ ” ಎಂದು ಹೇಳುತ್ತಾರೆ. ಇದೀಗ ಗುರೂಜಿ ಅವರ ಹೊಸ ಲುಕ್ ಎಲ್ಲಾ ಕಡೆ ಸಕತ್ ವೈರಲ್ ಆಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top