ಬಿಗ್ ಬಾಸ್ OTT ಶುರುವಾಗಿ ಒಂದು ವಾರ ಕಳೆದಿದೆ. ಮನೆಯ ಮೊದಲ ಎಲಿಮಿನೇಷನ್ ಕೂಡ ಮುಗಿದಿದೆ. ಮನೆಯಲ್ಲಿ ದಿನೆ ದಿನೆ ಒಂದಲ್ಲ ಒಂದು ಬೆಳವಣಿಗೆಗಳು ಆಗುತ್ತಿದೆ. ಇದೀಗ ಮನೆಯಲ್ಲಿ ನಡೆದ ಒಂದು ಘಟನೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ಕೆರಳಿಸಿದೆ.
ವೀಕೆಂಡ್ ಎಪಿಸೋಡ್ ನಲ್ಲಿ ಕಿಚ್ಚ ಮನೆ ಮಂದಿಯನ್ನು ಮಾತನಾಡಿಸಿದರು. ಈ ವೇಳೆ ಮನೆಯವರಿಗೆ ಕಿಚ್ಚ ಒಂದು ಟಾಸ್ಕ್ ನಾಡಿದರು. ಅದೇನೆಂದರೆ ಪ್ರತಿ ಬಾರಿಯಂತೆ ಈ ಬಾರಿಕೂಡ ಕಿಚ್ಚ ಯಸ್ (or) ನೋ ಎಂಬ ಟಾಸ್ಕ್. ಈ ವೇಳೆ ಸೋನು ಗೌಡ ಅವರ ವರ್ತನೆ ಕಿಚ್ಚ ಅವರನ್ನು ಕೆರಳಿಸಿದ್ದು, ಬಳಿಕ ತಮ್ಮ ರೀತಿಯಲ್ಲೇ ಅವರಿಗೆ ವಾರ್ನ್ ಮಾಡಿದ್ದಾರೆ.
Call me a sadist, I literally enjoyed this bashing. Much needed one.
Sorry to say #SonuSrinivasGowda has lots to learn. I just hope she comes out of this platform as a better and mature individual#BBKOTT#BiggBossKannadaOTT pic.twitter.com/CQyqCgoosa
— (@bengalurubouy48) August 14, 2022
ಹೌದು ಅಥವಾ ಇಲ್ಲಾ ಎಂಬ ರೌಂಡ್ ನಲ್ಲಿ ಸುದೀಪ್ ಆರ್ಯವರ್ಧನ್ ತರಾನೇ ಸೋನು ಅವರು ಒಂದು ಟಾಪಿಕ್ ಇಂದ ಮತ್ತೊಂದು ಟಾಪಿಕ್ ಗೆ ಎಂದು ಹೇಳುತ್ತಿದ್ದಂತೆ ಮನೆ ಮಂದಿ ಯಸ್ ಎಂದು ಬೋರ್ಡ್ ತೋರಿಸುತ್ತಾರೆ. ಇದಕ್ಕೆ ಮನೆ ಮಂದಿ ಕೂಡ ತಮ್ಮದೇ ರೀತಿಯಲ್ಲಿ ಉತ್ತರಿಸುತ್ತಾರೆ. ಅದರಲ್ಲೂ ಈ ಪ್ರಶ್ನೆಗೆ ಉತ್ತರಿಸಿದ ಸಾನಿಯಾ ಹೌದು ಸರ್, ಸೋನು ಗೌಡ ಆರ್ಯವರ್ಧನ ಅವರ ಅಸಿಸ್ಟೆಂಟ್ ರೀತಿಯಲ್ಲಿ ಇದ್ದಾರೆ ಎಂದು ಹೇಳಿದರು. ಇಷ್ಟಕ್ಕೆ ಕೋಪಗೊಂಡ ಸೋನು ಹೇಯ್ ಆ ರೀತಿ ಹೇಳಬೇಡ, ನನಗೆ ಇಷ್ಟವಾಗುವುದಿಲ್ಲಎಂದು ಹೇಳುತ್ತಾರೆ.
ಇದನ್ನು ಗಮನಿಸಿದ ಸುದೀಪ್, ‘ ನೀವು ಯಾವಾಗ ಆ ಜಗದಲ್ಲಿ ಕುಳಿತು ಎಲ್ಲರಿಗೂ ತಮಾಷೆ ಮಾಡುವ ಅಧಿಕಾರ ಇದಿಯೋ, ಅದು ನೀವು ನಗಾಡಿಕೊಂಡು ತಮಾಷೆ ಮಾಡುತ್ತಿದೀರ ಎಂದ ಮಾತ್ರಕ್ಕೆ ನೀವು ಮಾತ್ರ ಕಾಮಿಡಿಯನ್ ಮಿಕ್ಕಿದವರು ಮಾತ್ರ ಈಡಿಯಟ್ಸ್ ಎಂದರೆ ತಪ್ಪಾಗುತ್ತೆ, ಇಲ್ಲಿಂದ ನೀವು ಯಾರಿಗೂ ತಮಾಷೆ ಮಾಡಬಾರದು, ಹೌದು ಅಥವಾ ಇಲ್ಲಾ ಈ ರೌಂಡ್ ನಲ್ಲಿ ಏನಿದೆ ಅಷ್ಟು ಮಾತ್ರ ಹೇಳಬೇಕು, ನೀವು ಹೀಗೆ ಮಾಡಿದ್ರೆ ಈ ಶೋ ನಡೆಯಲ್ಲ. ಯೆಸ್ ಅಥವಾ ನೋ ರೌಂಡ್ ಇಲ್ಲಿಗೆ ಮುಗಿಯಿತು’ ಎಂದು ಸುದೀಪ್ ಹೇಳಿದರು.
ಇದಾದ ಬಳಿಕ ಸ್ಪರ್ಧಿಗಳು ಕಿಚ್ಚನ ಬಳಿ sorry ಕೇಳಿ ಸರ್ ಶೋ ಮುಂದೆ ವರೆಸಿ, ಪ್ರಶ್ನೆ ಕೇಳಿ ಎಂದು ಒತ್ತಾಯ ಮಾಡಿದರು. ಆದರೆ ಯೆಸ್ ಆರ್ ನೋ ಪ್ರಶ್ನೆಯ ರೌಂಡ್ ಅನ್ನು ಕಿಚ್ಚ ಕೊನೆಗೊಳಿಸಿದರು. ಸೋನು ಅವರ ಈ ವರ್ತನೆಯಿಂದ ಮನೆ ಮಂದಿಗೆ ಸಕತ್ ಬೇಸರವಾಗಿತ್ತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
