fbpx
ಸಮಾಚಾರ

“ನನಗೆ ಮನೆಯಲ್ಲಿ ಮೂಡ್ ಇಲ್ಲ ಅಂದರೆ ಮೂರೂ ದಿನಕ್ಕೆ ಒಂದು ಸಲ ಮಾಡ್ತೀನಿ ಸರ್” ಸೋನು ಮಾತು ಕೇಳಿ ಕಿಚ್ಚ ಶಾಕ್

ಬಿಗ್ ಬಾಸ್ ಮನೆಯಲ್ಲಿ ಮೊದಲ ಎಲಿಮಿನೇಷನ್ ನಡೆದಿದೆ. ಇದೀಗ ದೊಡ್ ಮನೆಯಲ್ಲಿ ಇರುವುದು ಕೇವಲ 14 ಮಂದಿ ಮಾತ್ರ. ಇದಲ್ಲದೆ ಭಾನುವಾರ ಕಿಚ್ಚ ಪಂಚಾಯಿತಿ ನಡೆಸಿದ್ದಾರೆ. ಈ ವೇಳೆ ಸೋನು ಗೌಡ ಅವರ ಮಾತನ್ನು ಕೇಳಿ ಕಿಚ್ಚ ಒಂದು ಕ್ಷಣ ಶಾಕ್ ಆಗಿದ್ದು, ಇದು ಮನೆಯ ಮಂದಿಗೂ ಕೂಡ ಅಚ್ಚರಿಯ ಸಂಗತಿ ಎಂದು ಹೇಳಬಹುದು.

ಪ್ರತಿ ವಾರದಂತೆ ಈ ವಾರವೂ ಸಹ ಕಿಚ್ಚ ಮನೆಯ ಮಂದಿಯನ್ನು ಕೂಡಿಸಿ ಪಂಚಾಯಿತಿ ನಡೆಸಿದರು. ಈ ವೇಳೆ ಮನೆಯಲ್ಲಿ ಗಲೀಜಾಗಿ ವಸ್ತುವನ್ನು ಇಟ್ಟುಕೊಳ್ಳೋರು ಯಾರು ಎಂಬ ಪ್ರಶ್ನೆ ಕೇಳಿ ಬಂತು. ಈ ವೇಳೆ ಪ್ರತಿಯೊಬ್ಬರೂ ಒಬ್ಬೊಬ್ಬರ ಹೆಸರನ್ನು ಹೇಳುತ್ತಿದ್ದರು. ಈ ವೇಳೆ ಸುದೀಪ್ ನಮ್ಮಲ್ಲಿ ಈ ಹಿಂದೆ ಎರಡು ದಿನಕ್ಕೆ ಒಂದು ಸಲ ಸ್ನಾನ ಮಾಡೋರು ಎಂದು ಹೇಳುತ್ತಿದ್ದಂತೆ ಸಾನ್ಯ ಈಗ್ಲೂ ಇದ್ದಾರೆ ಸರ್ ಎಂದು ಸೋನು ಅವರ ಹೆಸರನ್ನು ತೆಗೆದುಕೊಂಡರು.

ಅವಾಗ ಸೋನು ನಾನು ಇವತ್ತು ಮಾತ್ರ ಸ್ನಾನ ಮಾಡಿಲ್ಲ ಎಂದು ಹೇಳಿದರು. ಪ್ರತಿ ಬಾರಿ ಸೋನು ನಮ್ಮ ಮನೆಯಲ್ಲಿ ಎಂದು ಉಪಯೋಗಿಸುತ್ತಿದ್ದ ಕಾರಣ ಸುದೀಪ್ ಈಗಲೂ ಕೂಡ ನಿಮ್ಮ ಮನೆಯಲ್ಲಿ ಇದರ ಕುರಿತು ಏನಾದರು ಘಟನೆ ಇದಿಯಾ ಎಂದು ಕೇಳಿದಾಗ ಇದಕ್ಕೆ ಸೋನು ಇದೆ ಎಂದು ಉತ್ತರಿಸಿದರು. ಹೀಗೆ ಮಾತನಾಡುತ್ತಾ ಸೋನು ” ನನಗೆ ಮನೆಯಲ್ಲಿ ಮೂಡ್ ಇಲ್ಲ ಅಂದರೆ ಮೂರೂ ದಿನಕ್ಕೆ ಒಂದು ಸಲ ಮಾಡ್ತೀನಿ ಸರ್” ಎಂದು ಉತ್ತರಿಸಿದರು. ಇದ್ದಕ್ಕಿದಂತೆ ಕಿಚ್ಚ “ಎನ್ನಾ” ಎಂದು ಪ್ರಶ್ನಿಸುತ್ತಿದಂತೆ ಸೋನು ಸ್ನಾನ ಎಂದು ಉತ್ತರಿಸುತ್ತಾರೆ. ಸೋನು ಅವರ ಈ ಮಾತನ್ನು ಕೇಳಿ ಕಿಚ್ಚ, ಮನೆ ಮಂದಿ ಪ್ರತಿಯೊಬ್ಬರೂ ನಗಲು ಪ್ರಾರಂಭಿಸುತ್ತಾರೆ.

ನಂತರ ಮುಂದುವರಿಸಿದ ಕಿಚ್ಚ ” ನಮಗೆ ಕ್ಲಾರಿಟಿ ಬೇಕು, ಮೂರೂ ದಿನಕ್ಕೆ ಒಂದು ಸಲ ಮಾಡುತ್ತೀನಿ ಎಂದರು ಏನು ಅರ್ಥ ಮಾಡಿಕೊಳ್ಳಬೇಕು” ಎಂದು ಸೋನು ಅವರ ಕಾಲು ಎಳೆದರು. ನಂತರ ಸೋನು ಅವರ ಹೇಳಿಕೆಯಲ್ಲಿ ಮತ್ತೆ ಹೇಳಿದ ಕಿಚ್ಚ “ಮೂರುದಿನಕ್ಕೆ ಒಂದು ಸಲ ನಿಮಗೆ ಮೂಡ್ ಇಲ್ಲ ಎಂದರೆ ನಿಮ್ಮ ಮನೆಯಲ್ಲಿ ನೀವು ಸ್ನಾನ ಮಾಡುವುದಿಲ್ಲ ಅಲ್ಲವೇ” ಎಂದು ಸ್ಪಷ್ಟ ಪಡಿಸಿಕಿಕೊಂಡರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top