fbpx
ಸಮಾಚಾರ

ಬಿಗ್ ಬಾಸ್ ಮನೆಯ ಎರಡನೇ ವಾರದ ಟಾಸ್ಕ್ ನಿಂದ ಗುರೂಜಿ ಎಲಿಮಿನೇಟ್! ಕಾರಣವೇನು ಗೊತ್ತಾ?

ಬಿಗ್ ಬಾಸ್ ಮನೆಯ ಮೊದಲ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿದ್ದು, ಮಾಡಲ್ ಕಿರಣ್ ದೊಡ್ಮನೆಯಿಂದ ಹೊರಹೋಗಿದ್ದಾರೆ. ಇದೀಗ ದೊಡ್ಮನೆಯ ಎರಡನೇ ನಾಮಿನೇಷನ್ ಪ್ರಕ್ರಿಯೆ ಕೂಡ ಶುರುವಾಗಿದೆ. ಇದೆಲ್ಲದರ ನಡುವೆ ಈ ಬಾರಿ ಆರ್ಯವರ್ಧನ್ ಗುರೂಜಿ ಮನೆಯಿಂದ ಹೊರಗೆ ಹೋಗುವ ಎಲ್ಲಾ ಸಾಧ್ಯತೆಗಳಿವೆ.

ಬಿಗ್ ಬಾಸ್ ಮನೆಯಲ್ಲಿ ಸಹಜವಾಗಿ ಪ್ರತಿ ಸ್ಪರ್ಧಿಗಳು ಟಾಸ್ಕ್ ನಲ್ಲಿ ಭಾಗವಹಿಸಬೇಕು. ಆದರೆ ಇದೀಗ ಕಾರಣಾಂತರದಿಂದ ಗುರೂಜಿ ಟಾಸ್ಕ್ ನಲ್ಲಿ ಭಾಗವಹಿಸಲು ಆಗುತ್ತಿಲ್ಲ. ಏಕೆಂದರೆ ಎರಡನೇ ವಾರದ ಟಾಸ್ಕ್ ನಲ್ಲಿ ಎರಡು ತಂಡಗಳನ್ನು ಮಾಡಿ ಅದಕ್ಕೆ ಒಬ್ಬ ನಾಯಕನನ್ನು ನೇಮಿಸುವ ಜವಾಬ್ದಾರಿ ಅರ್ಜುನ್ ಅವರಿಗೆ ನೀಡಲಾಗಿತ್ತು.

ಅದರಂತೆ ಅರ್ಜುನ್ ನಂದಿನಿ ಮತ್ತು ಸೋಮಣ್ಣ ಅವರ ಹೆಸರನ್ನು ಸೂಚಿಸಿದರು. ಇದಾದ ನಂತರ ತಂಡದಲ್ಲಿ ಸ್ಪರ್ಧಿಸಲು 6 ಜನರನ್ನು ನೇಮಕ ಮಾಡಬೇಕೆಂದು ತಿಳಿಸಲಗಿತ್ತು. ಇದರ ಅನ್ವಯ ಪ್ರತಿ ತಂಡದಲ್ಲಿ ಒಟ್ಟು 6 ಸ್ಪರ್ಧಿಗಳನ್ನು ನೇಮಕ ಮಾಡಲಾಗಿತ್ತು. ನೇಮಕ ಮಾಡಿದ ಬಳಿಕ ಆರ್ಯವರ್ಧನ್ ಗುರೂಜಿ ಮಾತ್ರ ಉಳಿದುಕೊಂಡಿದ್ದರು. ಟಾಸ್ಕ್ ನಿಭಾಯಿಸಲು ಇವರಿಗೆ ಅರ್ಹತೆ ಕಮ್ಮಿ ಎಂಬ ಕಾರಣಕ್ಕೆ ಇವರನ್ನು ಹೊರಗುಳಿಸಲಾಗಿತ್ತು. ಈಗಾಗಿ ಎರಡನೇ ವಾರದ ಟಾಸ್ಕ್ ನಲ್ಲಿ ಗುರೂಜಿ ಭಾಗವಹಿಸದೇ ಇರುವುದು ಪಕ್ಕಾ ಎಂದು ಹೇಳಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top