fbpx
ಸಮಾಚಾರ

ಸಾನ್ಯ ಐಯರ್ ಹೇಳಿದ್ದು ಒಂದು ಆದರೆ ಸೋನು ಅರ್ಥಮಾಡಿಕೊಂಡಿದ್ದೆ ಇನ್ನೊಂದು!

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಟಾಸ್ಕ್ ಗಳಲ್ಲಿ ತಮ್ಮ ಪರಿಶ್ರಮ ಕೊಟ್ಟು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಪ್ರತಿ ಟಾಸ್ಕ್ ಗಳಲ್ಲಿ ಜನರಿಗೆ ಮನರಂಜನೆ ಸಿಗುತ್ತಿರುವುದು ಪಕ್ಕ ಎಂದು ಹೇಳಬಹುದು. ಈ ವೇಳೆ ಟಾಸ್ಕ್ ಒಂದರಲ್ಲಿ ಸೋನು ಮಾಡಿದ ಎಡವಟ್ಟು ಪ್ರತಿಯೊಬ್ಬರನ್ನು ರಂಜಿಸಿತು.

 

 

ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಟಾಸ್ಕ್ ಒಂದನ್ನು ನೀಡಿತ್ತು. ಅದೇನೆಂದರೆ ಒಬ್ಬ ಸ್ಪರ್ಧಿಯ ಕಿವಿಗೆ ಹೆಡ್ ಫೋನ್ ಮೂಲಕ ಹಾಡನ್ನು ಕೇಳಿಸಿ ಎದಿರುಗಡೆ ಇದ್ದ ವ್ಯಕ್ತಿಯು ಅವರಿಗೆ ತಮಗೆ ಸಿಕ್ಕಿದ್ದ ಪದವನ್ನು ಹೇಳಬೇಕು. ಇದರಲ್ಲಿ ಅವರ ಲಿಪ್ ಮೂವ್ ಮೆಂಟ್ ಮೂಲಕ ಉತ್ತರ ನೀಡಬೇಕು. ಅದಷ್ಟೇ ಈ ಟಾಸ್ಕ್ ನಲ್ಲಿ ಸೋನು ಆಡಿದ ರೀತಿ ಮನೆಯ ಪ್ರತಿಯೊಬ್ಬರನ್ನು ರಂಜಿಸಿತು.

ಟಾಸ್ಕ್ ಶುರುವಾಗುತ್ತಿದ್ದಂತೆ ಸಾನ್ಯ ” ನಾನು ಹಾಸನದಿಂದ ಆಲೂಗೆಡ್ಡೆ ತಂದೆ ” ಎಂದು ಹೇಳುತ್ತಿದ್ದಾರೆ ಅದಕ್ಕೆ ಸೋನು ಮಾತ್ರ ಹೇಳಿದ್ದು ” ಆಳಾಗಿ ದುಡಿ ” ಎಂದು ನಂತರ ಸಾನ್ಯ ಇಲ್ಲ ಎಂದು ಮತ್ತೆ ಸರಿಯಾಗಿ ಎಷ್ಟೇ ಹೇಳಲು ಪ್ರಯತ್ನಿಸಿದರೂ ಮಾತ್ರ ಸೋನು ಹೇಳಿದ್ದು ಮಾತ್ರ ಬೇರೆಯಾಗಿತ್ತು. ಈ ನಡುವೆ ಕೊನೆಗೆ ಸೋನು “ತೂ” ಎಂದು ಸೋಲನ್ನು ಒಪ್ಪಿಕೊಂಡಂತೆ ವರ್ತಿಸಿದರು. ಇದು ದೊಡ್ಮನೆಯ ಸ್ಪರ್ಧಿಗಳನ್ನು ಬಹಳಷ್ಟು ರಂಜಿಸಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top