fbpx
ಸಮಾಚಾರ

ಜನರ ಪ್ರೀತಿಗೆ ಸೋತು ಭಾವುಕರಾದ ಗುರೂಜಿ! ಚಟುವಟಿಕೆಗಳಿಂದ ಹೊರಗುಳಿದಿದ್ದ ಗುರೂಜಿಗೆ ಜನರಿಂದ ಸಿಕ್ತು ಬಂಪರ್

ಬಿಗ್ ಬಾಸ್ ಮನೆಯ ಮೊದಲ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿದ್ದು, ಮಾಡಲ್ ಕಿರಣ್ ದೊಡ್ಮನೆಯಿಂದ ಹೊರಹೋಗಿದ್ದಾರೆ. ಇದೀಗ ದೊಡ್ಮನೆಯ ಎರಡನೇ ನಾಮಿನೇಷನ್ ಪ್ರಕ್ರಿಯೆ ಕೂಡ ಶುರುವಾಗಿದೆ. ಇದೆಲ್ಲದರ ನಡುವೆ ಈ ಬಾರಿ ಆರ್ಯವರ್ಧನ್ ಗುರೂಜಿ ಟಾಸ್ಕ್ ಗಳಿಂದ ಹೊರಗುಳಿಯಬೇಕಾದ ಸನ್ನಿವೇಶ ಎದುರಾಗಿತ್ತು.

ಬಿಗ್ ಬಾಸ್ ಮನೆಯಲ್ಲಿ ಸಹಜವಾಗಿ ಪ್ರತಿ ಸ್ಪರ್ಧಿಗಳು ಟಾಸ್ಕ್ ನಲ್ಲಿ ಭಾಗವಹಿಸಬೇಕು. ಆದರೆ ಇದೀಗ ಕಾರಣಾಂತರದಿಂದ ಗುರೂಜಿ ಟಾಸ್ಕ್ ನಲ್ಲಿ ಭಾಗವಹಿಸಲು ಆಗುತ್ತಿಲ್ಲ. ಏಕೆಂದರೆ ಎರಡನೇ ವಾರದ ಟಾಸ್ಕ್ ನಲ್ಲಿ ಎರಡು ತಂಡಗಳನ್ನು ಮಾಡಿ ಅದಕ್ಕೆ ಒಬ್ಬ ನಾಯಕನನ್ನು ನೇಮಿಸುವ ಜವಾಬ್ದಾರಿ ಅರ್ಜುನ್ ಅವರಿಗೆ ನೀಡಲಾಗಿತ್ತು.

ಅದರಂತೆ ಅರ್ಜುನ್ ನಂದಿನಿ ಮತ್ತು ಸೋಮಣ್ಣ ಅವರ ಹೆಸರನ್ನು ಸೂಚಿಸಿದರು. ಇದಾದ ನಂತರ ತಂಡದಲ್ಲಿ ಸ್ಪರ್ಧಿಸಲು 6 ಜನರನ್ನು ನೇಮಕ ಮಾಡಬೇಕೆಂದು ತಿಳಿಸಲಗಿತ್ತು. ಇದರ ಅನ್ವಯ ಪ್ರತಿ ತಂಡದಲ್ಲಿ ಒಟ್ಟು 6 ಸ್ಪರ್ಧಿಗಳನ್ನು ನೇಮಕ ಮಾಡಲಾಗಿತ್ತು. ನೇಮಕ ಮಾಡಿದ ಬಳಿಕ ಆರ್ಯವರ್ಧನ್ ಗುರೂಜಿ ಮಾತ್ರ ಉಳಿದುಕೊಂಡಿದ್ದರು. ಟಾಸ್ಕ್ ನಿಭಾಯಿಸಲು ಇವರಿಗೆ ಅರ್ಹತೆ ಕಮ್ಮಿ ಎಂಬ ಕಾರಣಕ್ಕೆ ಇವರನ್ನು ಹೊರಗುಳಿಸಲಾಗಿತ್ತು.

ಇದಾದ ಬಳಿಕ ಮರು ದಿನ ಬಿಗ್ ಬಾಸ್ ವೋಟ್ ಆಪ್ ನಲ್ಲಿ ಆರ್ಯವರ್ಧನ್ ಗುರೂಜಿ ಅವರನ್ನು ಚಟುವಟಿಕೆಗಳಿಂದ ಹೊರಗುಳಿಸಿರುವದರಿಂದ ವೀಕ್ಷಕರಿಗೆ ಬೇಸರವಾಗಿದ್ದು, ಅವರನ್ನು ಯಾವುದಾದರು ಒಂದು ತಂಡಕ್ಕೆ ಬದಲಿ ಆಟಗಾರರನ್ನಾಗಿ ನೇಮಿಸಬೇಕೆಂದು ಹೇಳಿದರು. ಅದರಂತೆ ಜನರು ಸೂಚಿಸಿದ್ದು ಸೋಮಣ್ಣ ನಾಯಕತ್ವದ ಕರುನಾಡ ವಾರಿಯರ್ಸ್ ತಂಡವನ್ನು. ಆದರೆ ಗುರೂಜಿ ತಂಡ ಸೇರಿಕೊಳ್ಳಬೇಕಾದರೆ ಕರುನಾಡ ವಾರಿಯರ್ಸ್ ತಂಡದ ಒಬ್ಬ ಸದಸ್ಯ ಹೊರಬರಬೇಕಾದ ಅನಿವಾರ್ಯವಿತ್ತು. ಅದರಂತೆ ರೂಪೇಶ್ ತಂಡದಿಂದ ಹೊರ ನಡೆದು ಗುರೂಜಿ ತಂಡ ಸೇರಿಕೊಂಡರು.

ಇದಾದ ನಂತರ ಗುರೂಜಿ ಕ್ಯಾಮರಾ ಬಳಿ ಬಂದು ಅಳಲು ಪ್ರಾರಂಭಿಸಿ ತಮ್ಮನ್ನು ಪ್ರೀತಿಸಿ ವೋಟ್ ಮಾಡಿ ಮತ್ತೆ ಚಟುವಟಿಕೆಗಳಲ್ಲಿ ಭಾಗವಹಿಸಲು ಮಾಡಿದ ಕರುನಾಡ ಜನತೆಗೆ ಧನ್ಯವಾದ ತಿಳಿಸಿ ಭಾವುಕರಾದರು. ಈ ವೇಳೆ ಪಕ್ಕದಲ್ಲೇ ಇದ್ದ ಜಯಶ್ರೀ ಮತ್ತು ಉದಯ್ ಅವರನ್ನು ಸಮಾಧಾನಪಡಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top