ಕೆಜಿಎಫ್ ಚಾಪ್ಟರ್-2 ಸಿನಿಮಾದ ಮೂಲಕ ಇಡೀ ವಿಶ್ವ ಸ್ಯಾಂಡಲ್ವುಡ್ ಸಿನಿಮಾದ ಕಡೆ ತಿರುಗಿ ನೋಡುವಂತೆ ಮಾಡಿದ ನಟ ಎಂದರೆ ಅದು ರಾಕಿ ಭಾಯ್ ಯಶ್. ಇದೀಗ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಕೆಜಿಎಫ್ ಸಿನಿಮಾ ನಂತರ ಯಶ್ ಏನು ಮಾಡುತ್ತಿದ್ದಾರೆ ಎಂಬ ಅನುಮಾನ ಸಹಜವಾಗಿ ಅಭಿಮಾನಿಗಳ ಮನಸಲ್ಲಿ ಮೂಡಿತ್ತು. ಕೆಲವರು ಯಶ್ ತಮ್ಮ ಮುಂದಿನ ಸಿನಿಮಾದ ಕುರಿತು ಬ್ಯುಸಿ ಯಾಗಿದ್ದಾರೆ ಎಂಬ ಮಾತು ಕೇಳಿ ಬರುತಿತ್ತು. ಇವೆಲ್ಲದರ ನಡುವೆ ಯಶ್ ಅವರ ಪೋಸ್ಟರ್ ಇದೀಗ ಎಲ್ಲಾ ಕಡೆ ಸಕತ್ ವೈರಲ್ ಆಗುತ್ತಿದೆ.
ಕೆಜಿಎಫ್ ಸಿನಿಮಾದ ಯಶ್ ತಮ್ಮ 19 ನೇ ಸಿನಿಮಾದ ಪ್ರಿಪರೇಷನ್ ನಲ್ಲಿ ಬ್ಯುಸಿ ಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತಿತ್ತು. ಈ ವೇಳೆ ಯಶ್ ಅವರ 19 ನೇ ಸಿನಿಮಾದ ಪೋಸ್ಟರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
#KGFChapter2 #YashBOSS @TheNameIsYash#Yash19 First look is out guys 🔥💥😍 pic.twitter.com/Fu8OQX0ZOW
— Yash Mania™ (@RahulYashCult) August 17, 2022
ಯಶ್ ಅವರ ಮುಂದಿನ ಸಿನಿಮಾ ಹೇಗಿರುತ್ತೆ ಎಂಬ ಕಲ್ಪನೆಯಿಂದ ಅಭಿಮಾನಿಗಳು ಪೋಸ್ಟರ್ ಒಂದನ್ನು ಬಿಡುಗಡೆ ಗೊಳಿಸಿದ್ದಾರೆ. ಇದರಲ್ಲಿ ಯಶ್ ರಗಡ್ ರುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ಅವರಿಗೆ ಗಡ್ಡ ಹೈಲೈಟ್ ಫ್ಯಾಕ್ಟರ್ ಆಗಿತ್ತು. ಈ ಪೋಸ್ಟರ್ ಅಲ್ಲೂ ಕೂಡ ಯಶ್ ಗಡ್ಡ ಬಿಟ್ಟು, ಉದ್ದ ಕೂದಲು ಬಿಟ್ಟು ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಯಶ್ ತಮ್ಮ ಮುಂದಿನ ಸಿನಿಮಾದಲ್ಲಿ ಯಾವ ರೀತಿ ಕಾಣಲಿದ್ದಾರೆ ಎಂಬುದನ್ನು ಸ್ವತಃ ಸಿನಿಮಾ ತಂಡ ರಿವೀಲ್ ಮಾಡಬೇಕು. ಆದರೆ ಫ್ಯಾನ್ಸ್ ಮಾಡಿರೋ ಪೋಸ್ಟರ್ ಇದೀಗ ಎಲ್ಲಾ ಕಡೆ ಸಕತ್ ವೈರಲ್ ಆಗುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
